ಗೊಜ್ಜವಲಕ್ಕಿ
– ಸವಿತಾ.
ಏನೇನು ಬೇಕು
- ಅವಲಕ್ಕಿ [ಗಟ್ಟಿ] – 3 ಲೋಟ
- ಹಸಿ ಕೊಬ್ಬರಿ ತುರಿ – 1/2 ಲೋಟ
- ಹಸಿ ಮೆಣಸಿನಕಾಯಿ – 1
- ಒಣ ಮೆಣಸಿನಕಾಯಿ – 1
- ಕರಿಬೇವು – ಸ್ವಲ್ಪ
- ಎಣ್ಣೆ – 3 ಚಮಚ
- ಇಂಗು – ಸ್ವಲ್ಪ
- ಸಾಸಿವೆ – 1 ಚಮಚ
- ಕಡಲೇ ಬೇಳೆ – 1 ಚಮಚ
- ಉದ್ದಿನ ಬೇಳೆ – 1 ಚಮಚ
- ಹುಣಸೆ ರಸ – 3 ಚಮಚ
- ಬೆಲ್ಲ – 1 ಚಮಚ
- ಸಾಂಬಾರ ಪುಡಿ – 1 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
- ಅರಿಶಿಣ – ಸ್ವಲ್ಪ
ಮಾಡುವ ಬಗೆ
ತೆಂಗಿನ ತುರಿ ತುರಿದು ಇಟ್ಟುಕೊಳ್ಳಿ. ಹುಣಸೆ ರಸ ಮಾಡಿ ಇಟ್ಟುಕೊಳ್ಳಿ. ಅವಲಕ್ಕಿ ಮಿಕ್ಸರ್ ನಲ್ಲಿ ಪುಡಿ ಮಾಡಿ. ನಂತರ ನೀರಿನಲ್ಲಿ ತೊಳೆದು ಉಪ್ಪು, ಸಾಂಬಾರ ಪುಡಿ, ಹುಣಸೆ ರಸ, ಬೆಲ್ಲ ಹಾಕಿ ಚೆನ್ನಾಗಿ ಕಲಸಿಡಬೇಕು.
ಎಣ್ಣೆ ಬಿಸಿ ಮಾಡಿ ಸ್ವಲ್ಪ ಕರಿಬೇವು, ಕತ್ತರಿಸಿದ ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ ಹಾಗೂ ಇಂಗು ಹಾಕಿ ನಂತರ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ ಹಾಕಿ ಹುರಿಯಿರಿ. ಅರಿಶಿಣ, ಬೇಕೆನಿಸಿದರೆ ಸ್ವಲ್ಪ ಉಪ್ಪು ಹಾಕಿ. ಕಲಸಿಟ್ಟ ಅವಲಕ್ಕಿ ಹಾಕಿ ಚೆನ್ನಾಗಿ ಬಿಸಿ ಮಾಡಿ ಒಲೆ ಆರಿಸಿ. ತುರಿದ ಕೊಬ್ಬರಿಯನ್ನು ಮೇಲೆ ಉದುರಿಸಿ ಅಲಂಕರಿಸಿದರೆ ಗೊಜ್ಜವಲಕ್ಕಿ ತಯಾರಾಯಿತು. ಹಬ್ಬದ ದಿನಗಳಲ್ಲಿ ಪ್ರಸಾದಕ್ಕಾಗಿ ಗೊಜ್ಜವಲಕ್ಕಿ ತಯಾರಿಸುತ್ತಾರೆ.
ಇತ್ತೀಚಿನ ಅನಿಸಿಕೆಗಳು