ಮಾಡಿ ನೋಡಿ ಸಿಹಿ ಸಿಹಿಯಾದ ಚಿಗ್ಲಿ
ಏನೇನು ಬೇಕು ?
- ಬಿಳಿ ಎಳ್ಳು: ಕಾಲು ಕಪ್ಪು
- ಬೆಲ್ಲ: ಒಂದೂ ಕಾಲ್ ಕಪ್ಪು
- ಹುರಿದ ಶೇಂಗಾ (ಕಡಲೆಕಾಯಿ ಬೀಜ): ಮುಕ್ಕಾಲು ಕಪ್ಪು
ಮಾಡುವ ಬಗೆ:
ಮೊದಲಿಗೆ ಒಂದು ಬಾಣಲೆಯನ್ನು ತೆಗೆದುಕೊಂಡು, ಅದಕ್ಕೆ ಬಿಳಿ ಎಳ್ಳನ್ನು ಹಾಕಿ ,ಗಮ ಬರುವವರೆಗೆ ಹುರಿಯಿರಿ. ಎಳ್ಳು ಕಪ್ಪಾಗದಂತೆ ಅತವಾ ಸೀದು ಹೋಗದಂತೆ ಎಚ್ಚರ ವಹಿಸಿ. ಆಮೇಲೆ ಈ ಪಾಕವಿದಾನಕ್ಕಾಗಿ ಈಗಾಗಲೇ ಹುರಿದಿರುವ ಶೇಂಗಾ ಬಳಸಲಾಗಿದೆ. ಒಂದು ವೇಳೆ ನಿಮ್ಮ ಬಳಿ ಹುರಿದ ಶೇಂಗಾ ಇಲ್ಲದಿದ್ದರೆ, ಅದೇ ಬಾಣಲೆಯಲ್ಲಿ ಶೇಂಗಾವನ್ನು ಗರಿಗರಿಯಾಗುವವರೆಗೆ ಹುರಿಯಿರಿ. ಅವು ತಣ್ಣಗಾದ ನಂತರ, ಕೈಗಳಿಂದ ಉಜ್ಜಿ ಸಿಪ್ಪೆಗಳನ್ನು ತೆಗೆದುಹಾಕಿ.ನಂತರ ಒಂದು ಮಿಕ್ಸರ್ ಜಾರ್ ತೆಗೆದುಕೊಳ್ಳಿರಿ. ಇದಕ್ಕೆ ಹುರಿದ ಶೇಂಗಾ, ಬಿಳಿ ಎಳ್ಳು ಮತ್ತು ಬೆಲ್ಲವನ್ನು ಹಾಕಿ ನುಣ್ಣನೆಯ ಪುಡಿಯಂತೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಸರಿಯಾಗಿ ರುಬ್ಬಿಕೊಂಡ ನಂತರ, ಅದನ್ನು ಒಂದು ತಟ್ಟೆಗೆ ಸುರಿಯಿರಿ. ನಂತರ, ಸ್ವಲ್ಪ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು, ಅವುಗಳನ್ನು ನಿದಾನವಾಗಿ ಉಂಡೆಗಳ (ಲಡ್ಡುಗಳ) ಆಕಾರಕ್ಕೆ ಮಾಡಿ ಪಕ್ಕಕ್ಕಿಡಿ. ಈಗ ಸಿಹಿಯಾದ ಚಿಗ್ಲಿ ಸವಿಯಲು ಸಿದ್ದ!.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು