ಕವಿತೆ: ಹೊಸ ರುತುಮಾನ

ಇಳೆಯ ತೊಯ್ದ ಮಳೆಯೆಲ್ಲವೂ
ಹಿಂದೆ ಸರಿದು ಕುಳಿರ‍್ಗಾಳಿ
ಬೀಸಿ ಬಂದು ಹೊಸ ರುತುಮಾನದ
ಹಾಡನು ಹಾಡಿದೆ
ಮುಗಿಲೆಲ್ಲಾ ಹಿಮದ ಶ್ರೇಣಿ
ಹಸಿರ ಮೇಲೆ ಬಿದ್ದ ಇಬ್ಬನಿ
ರವಿಯ ಕಿರಣ ಸೋಕದೆ
ನೀರವತೆಯ ತಾಳಿದೆ
ತಣ್ಣನೆ ಗಾಳಿಯು
ತನುವ ತಲ್ಲಣಿಸಿ ಮನವ ಬಳಲಿಸಿ
ಹಳೆಯ ಸ್ಮ್ರುತಿಯ
ತಂತಿಯನು ಮೀಟಿದೆ
ಮಂಜು ಮುತ್ತಿದ ಚಾವಣಿಯಡಿ
ಕೊರೆವ ಚಳಿಗೆ ಸಿಲುಕಿ
ಹಿತವಾದ ಹೊಂಬಿಸಿಲಿಗಾಗಿ
ಹಂಬಲಿಸಿ ಜೀವಬಾವ ಮಿಡಿದಿದೆ
(ಚಿತ್ರಸೆಲೆ: pixabay.com)

ಇತ್ತೀಚಿನ ಅನಿಸಿಕೆಗಳು