ಕವಿತೆ: ದಾಸವಾಳದ ಚೆಲುವು
ಹಸುರೆಲೆಯ ಮರೆಯಲಿ
ಅರಳುವ ಹೂವು
ನೋಡಲು ಸುಂದರ
ದಾಸವಾಳದ ಚೆಲುವು
ಬಗೆ ಬಗೆಯ ಬಣ್ಣದಲಿ
ಎಶ್ಟು ಚೆಂದವೋ ಇದರ ನಗುವು
ಅಂಗಳದ ತುಂಬಾ
ನಲಿವುದು ಇದರ ಅಂದವು
ಪರಿಮಳವ ಬೀರದಿದ್ದರೂ
ದೇವರಿಗೆ ಪ್ರಿಯ ಇದರ ಸ್ಪರ್ಶವು
ಜೇನಿಗೂ ಬೇಕು
ಇದರ ಮಕರಂದದ ಸವಿಯು
ಬೆಳಗಿನ ಬಿಸಿಲಿನ ಕಿರಣಕೆ
ಕಂಗೊಳಿಸುವ ಹೂವು
ಬೂರಮೆಯ ಸಿಂಗರಿಸಿ
ತಣ್ಣನೆಯ ಇರುಳಲಿ ಬಾಡುವ ಹೂವು
ಪ್ರಕ್ರುತಿಯ ಮಡಿಲಿನ
ಪ್ರೀತಿಯ ಕಾಣಿಕೆ ಈ ಹೂವು
ಎಲ್ಲರ ಮನವ ಸೆಳೆವ
ದೇವರ ದಾಸ ದಾಸವಾಳ ಹೂವು
(ಚಿತ್ರ ಸೆಲೆ: wikipedia)


ಇತ್ತೀಚಿನ ಅನಿಸಿಕೆಗಳು