ಮಾವಿನಕಾಯಿ ಗೊಜ್ಜು
– ಸವಿತಾ.
ಏನೇನು ಬೇಕು
ಮಾವಿನಕಾಯಿ — 1
ಬೆಲ್ಲ — 1/2 ಲೋಟ ( ರುಚಿಗೆ ತಕ್ಕಶ್ಟು )
ಒಣಕಾರದ ಪುಡಿ — 1/2 ಚಮಚ
ಮೆಂತೆಪುಡಿ — 1/2 ಚಮಚ
ಉಪ್ಪು — 1 ಚಮಚ ( ರುಚಿಗೆ ತಕ್ಕಶ್ಟು )
ಸಾಸಿವೆ — 1/2 ಚಮಚ
ಉದ್ದಿನಬೇಳೆ — 1/2 ಚಮಚ
ಒಣಮೆಣಸಿನಕಾಯಿ — 2
ನೀರು — 1 ಲೋಟ
ಎಣ್ಣೆ — 1 ಚಮಚ
ಮಾಡುವ ಬಗೆ
ಮಾವಿನಕಾಯಿ ಸಿಪ್ಪೆ ತೆಗೆಯಿರಿ. ಬೀಜ ಅತವಾ ಗೊರಟೆ ತೆಗೆದು, ಸಣ್ಣ ಹೋಳುಗಳಾಗಿ ಕತ್ತರಿಸಿ ಒಂದು ಲೋಟ ನೀರು ಹಾಕಿ ಕುದಿಯಲು ಇಡಿ.
ಮೆಂತೆಕಾಳು ಸ್ವಲ್ಪ ಹುರಿದು ಪುಡಿ ಮಾಡಿ ಇಡಿ. ಕುದಿಯುವ ಮಾವಿನಕಾಯಿ ಗೆ ಉಪ್ಪು ಹಾಕಿ. ನಂತರ ಬೆಲ್ಲ ಹಾಕಿ. ಹುರಿದ ಮೆಂತೆಪುಡಿ ಹಾಕಿ. ಒಣ ಕಾರದಪುಡಿ ಹಾಕಿ ಚೆನ್ನಾಗಿ ಕುದಿಸಿ ಒಲೆ ಆರಿಸಿ, ಆರಲು ಬಿಡಿ.
ಎಣ್ಣೆ ಕಾಯಿಸಿ, ಸಾಸಿವೆ ಹಾಕಿ. ಉದ್ದಿನಬೇಳೆ, ಮತ್ತು ಒಣಮೆಣಸಿನಕಾಯಿ ಮುರಿದು ಹಾಕಿ ಒಗ್ಗರಣೆ ಮಾಡಿ ಕುದಿಸಿದ ಮಾವಿನಕಾಯಿ ಮಿಶ್ರಣಕ್ಕೆ ಹಾಕಿ ತಿರುಗಿಸಿ.
ಈಗ ಮಾವಿನಕಾಯಿ ಗೊಜ್ಜು ತಯಾರಾಯಿತು. ಅನ್ನ, ದೋಸೆ ಜೊತೆ ಅತವಾ ಸೈಡ್ ಡಿಶ್ ಆಗಿ ಸವಿಯಿರಿ (ಒಂದು ವಾರ ಶೇಕರಿಸಿಟ್ಟೂ ತಿನ್ನಬಹುದು.)


ಇತ್ತೀಚಿನ ಅನಿಸಿಕೆಗಳು