ಕವಿತೆ: ಬರವಸೆಯ ಹರಿಕಾರ ಅಪ್ಪ

ವೆಂಕಟೇಶ ಚಾಗಿ.

ಅಜ್ಜ ಮೊಮ್ಮಗ Grandpa and Grandson

ಹರಕು ಅಂಗಿಯ ಮೇಲೆ
ಗಟ್ಟಿ ಕಿಸೆಯನು ಹೊಲಿದು
ಕೂಡಿಟ್ಟ ದುಡ್ಡೆಲ್ಲಾ
ತನ್ನವರಿಗೆ ಬಸಿದು
ತನ್ನೆಲ್ಲ ಕನಸುಗಳಲ್ಲಿ
ಮನೆ ಮನಸುಗಳ ತುಂಬಿದ
ಬರವಸೆಯ ಹರಿಕಾರ ಅಪ್ಪ

ಬೆಟ್ಟವ ಹೊತ್ತರೂ
ಬೆಟ್ಟದಂತಹ ಮನಸವನು
ಹಲವು ಗುಟ್ಟುಗಳ ಕಟ್ಟಿ
ಗಟ್ಟಿ ನಗುವನು ಹರಿಸಿದವನು
ಸೋಲುಗಳ ಸುಟ್ಟು
ಗೆಲ್ಲುವ ಬುತ್ತಿ ಕಟ್ಟಿಕೊಟ್ಟವನು
ಕನಸುಗಾರ ಅಪ್ಪ

ಹರಿ ಹರ ಗುರುವಿಗೂ
ಹರಿಯಾಗಿ ಹರನಾಗಿ ಗುರುವಾಗಿ
ಎಲ್ಲದಕೂ ಮೊದಲಾಗಿ
ನಂಬಿಕೆಯ ಉಡುಗೆಯಲಿ
ಸಂಬಂದದ ಎಳೆ ಹೊಸೆದು
ಬಣ್ಣ ಬಣ್ಣದ ಕುಶಿಗಳಲಿ
ಕಾಲಚಕ್ರವ ತಿರುಗಿಸುವ
ಕಲೆಗಾರ ಅಪ್ಪ

ಅಪ್ಪನೆಂಬುದು ಬರಿ
ಪದವಿಯೆಂದರೆ ಸಾಕೆ
ಬದುಕ ನೌಕೆಯ ನಾವಿಕ
ಹೊಗಳಿಕೆಯು ಬೇಕೆ
ಜೀವನ ತಂತಿಯ ಮೀಟಿ
ಬಾವಗೀತೆಗೆ ದನಿಯಾಗುವ
ಹಾಡುಗಾರ ಅಪ್ಪ

( ಚಿತ್ರ ಸೆಲೆ: pixabay )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *