ಎರಡು ಚುಟುಕಗಳು

ಬೀಮಸೇನ ದೇಶಪಾಂಡೆ

1. ಎಲ್ಲಿ ಸಾಗುತಿ?

ನೀತಿಯಿಂದ ಬಾಳಿದರೆ, ಜೀವನದಲ್ಲಿ ನಿನಗೆ ಉನ್ನತಿ,
ನೀತಿಯಿಂದ ಬಾಳದಿದ್ದರೆ, ಜೀವನದಲ್ಲಿ ನೀ ಎಡವತಿ,
ಎಡವುತ್ತಾ ಎಡವುತ್ತಾ ನೀ ಎಲ್ಲಿಗೆ ಅಂತ ಸಾಗುತಿ?
ಸಾಗುತ್ತಾ ಸಾಗುತ್ತಾ ಗೊತ್ತಿಲ್ಲದೇ ಪಾಪಗಳ ಮಾಡತಿ,
ಕೊನೆ ಕೊನೆಗೆ ನಿನ್ನೊಡನೆ ನಿನ್ನವರು ಇರಬಹುದು,ಇಲ್ಲದಿರಬಹುದು,
ಆದರೆ ವಿದಿಯ ನಿಯಮ, ನೀ ಮಾಡಿದನ್ನು ನೀನು ಉಂಡೇ ಉಣ್ತಿ …

2. ಶಿಲ್ಪಿಗೆ ಶರಣು

ಹಸಿರು ಹಾಸಿನ ಮೇಲೆ ಕುಳಿತು,
ಯಾರಿಗೆ ಕಾಯುತ್ತಿರುವೆ ಚಲುವೆ?
ಪ್ರತಿ ಬಾರಿಯೂ ನಿನ್ನ ನೋಡಿದಾಗ,
ಅದೇ ಸೌಂದರ‍್ಯ, ಅದೇ ನೋಟ,
ವರ್‍ಶಗಳು ಕಳೆದು ನನ್ನ ಕೂದಲು ಬಿಳಿ ಯಾದರೂ,
ನಿನ್ನ ಮುಕದ ಹೊಳಪು ಕ್ಶೀಣಿಸಿಲ್ಲ,
ನೀನು ರಾಜಕುವರಿಯೇ ಇಲ್ಲ ಅಪ್ಸರೆಯೇ?
ನಿನ್ನಂತ ಬೊಂಬೆಯ ಕೆತ್ತಿದ ಆ ಶಿಲ್ಪಿಗೆ ಶರಣು ಶರಣು..

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *