ಮೆಣಸಿನಕಾಯಿ ’ಅದೆಶ್ಟು’ ಕಾರ?

– ಪ್ರಶಾಂತ ಸೊರಟೂರ.

menasinakayi

ಮೆಣಸಿನಕಾಯಿ ತಿಂದೊಡನೆ ಕಣ್ಣಲ್ಲಿ ನೀರು, ’ಕಾರ’ದ ಉರಿಗೆ ಇಡೀ ಮಯ್ಯಿ ತತ್ತರಿಸಿದಾಗ ಮೆಣಸಿನಕಾಯಿ ಕಾರ-ಬೆಂಕಿ, ’ಇಶ್ಟು’ ಕಾರ ಯಾರಾದರೂ ತಿನ್ನುತ್ತಾರಾ ಅನ್ನುವ ಮಾತುಗಳು ಹೊರಬರುತ್ತವೆ.

’ತುಂಬಾ’ ಕಾರ, ’ಕಡಿಮೆ’ ಕಾರ ಅನ್ನುವ ಅನಿಸಿಕೆ ಒಬ್ಬರಿಂದ ಇನ್ನೊಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ಅನಿಸಿಕೆಯ ಈ ಬೇರೆತನವನ್ನು ಹೋಗಲಾಡಿಸಲು ಒಂದೇ ತರನಾಗಿರುವ ’ಅಳತೆಗೋಲು’ ಬೇಕಲ್ಲವೇ ? ಆ ಅಳತೆಗೋಲಿನ ಬಗ್ಗೆ ಈಗ ತಿಳಿದುಕೊಳ್ಳೋಣ.

ಸ್ಕಾವಿಲ್ (Scoville) ಎಂಬ ಅಳತೆಗೋಲು ಬಳಸಿ, ಮಸಾಲೆಯೊಂದು ’ಎಶ್ಟು’ ಕಾರವಾಗಿದೆ ಅನ್ನುವುದನ್ನು ಅಳೆಯಲಾಗುತ್ತದೆ.

ಈ ಅಳತೆಗೋಲು ಕಂಡುಹಿಡಿದ ವಿಲ್ಬರ್ ಸ್ಕಾವಿಲ್ (Wilbur Scoville) ಅವರ ಹೆಸರಿನಿಂದಲೇ ಇದನ್ನು ಗುರುತಿಸಲಾಗುತ್ತದೆ. ಮೆಣಸಿನಕಾಯಿ, ಮೆಣಸು ಮುಂತಾದ ಮಸಾಲೆಗಳ ಕಾರದ ಚುರುಕಿನ ಮಟ್ಟ ಆ ವಸ್ತುಗಳಲ್ಲಿ ಕಾಪಾಸಿಸಿಯನ್ (capsaicin) ಎಂಬ ವಸ್ತು ಎಶ್ಟಿದೆ ಅನ್ನುವುದರ ಮೇಲೆ ತೀರ‍್ಮಾನವಾಗುತ್ತದೆ.

ಕಾಪಾಸಿಸಿಯನ್ (capsaicin) ತೊಗಲಿನಲ್ಲಿರುವ ನರಗಳಿಗೆ ಕಾರದ ಚುರುಕು ತಾಕಿಸುವಂತ ‘ಇರ‍್ಪು ಬೆರೆತದ ವಸ್ತು’ (chemical compound) ಇದರಿಂದಾಗಿಯೇ ನಮಗೆ ಕಾರದ ಅನುಬವವಾಗುತ್ತದೆ.

’ಸ್ಕಾವಿಲ್’ ಅಳತೆಯಂತೆ ಬೇರೆ-ಬೇರೆ ಮಸಾಲೆಗಳ ’ಕಾರದ ಮಟ್ಟ’ ಹೀಗಿದೆ:

scovelli_unit

ಬ್ಯಾಡಗಿ ಮೆಣಸಿನಕಾಯಿ ’ಎಶ್ಟು’ ಕಾರ ಅಂತಾ ಈಗ ಗೊತ್ತಾಯಿತಲ್ಲ! ಇನ್ನು ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಕಾರವಾದ ’ಟ್ರೆನಿಡಾಡ್ ಮೊರುಗಾ ಸ್ಕಾರ‍್ಪಿಯನ್’ ಮೆಣಸಿನ ತಂಟೆಗೆ ಹೋಗದಿರುವುದೇ ವಾಸಿ ಅನಿಸುತ್ತದೆ!

(ತಿಳಿವಿನ ಸೆಲೆwikipedia)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *