ಮಾಡಿ ನೋಡಿ ಮೀನು ತತ್ತಿ ಬುರ್‍ಜಿ

– ನಿತಿನ್ ಗೌಡ.

ಏನೇನು ಬೇಕು ?

  • ಮೀನು ತತ್ತಿ – 250 ಗ್ರಾಂ
  • ಈರುಳ್ಳಿ – 1
  • ಹಸಿಮೆಣಸಿನ ಕಾಯಿ  – 4 ರಿಂದ 5 (ಕಾರಕ್ಕೆ ತಕ್ಕಶ್ಟು)
  • ಕಾರದ ಪುಡಿ (ಹಸಿಮೆಣಸಿನ ಕಾಯಿ ಬೇಡದಿದ್ದಲ್ಲಿ) –  2 ರಿಂದ 3 ಚಮಚ  (ಕಾರಕ್ಕೆ ತಕ್ಕಶ್ಟು)
  • ಎಣ್ಣೆ – ಸ್ವಲ್ಪ
  • ರುಚಿಗೆ ತಕ್ಕಶ್ಟು ಉಪ್ಪು
  • ಅರಿಶಿನ ಪುಡಿ – ಅರ್‍ದ ಚಮಚ
  • ಶುಂಟಿ ಬೆಳ್ಳುಳ್ಳಿ ಪೇಶ್ಟ್ – ಒಂದು ಚಮಚ
  • ಗರಂ ಮಸಾಲೆ – ಚೂರು
  • ದನಿಯಾ ಪುಡಿ – ಬೇಕಾದ್ದಲ್ಲಿ

ಮಾಡುವ ಬಗೆ

ಮೊದಲಿಗೆ ಈರುಳ್ಳಿ ಮತ್ತು ಹಸಿಮೆಣಸಿನ ಕಾಯಿಯನ್ನು ಹೆಚ್ಚಿಟ್ಟುಕೊಳ್ಳಿರಿ. ಈಗ ಸ್ವಲ್ಪ ಬಿಸಿನೀರಿಗೆ, ಸ್ವಲ್ಪ ಅರಿಶಿಣ ಹಾಕಿ ಅದರಲ್ಲಿ ತತ್ತಿ ಹಾಕಿ ಎರಡು ನಿಮಿಶ ಬೇಯಿಸಿ. ಇದರಿಂದ ತತ್ತಿ ಬೇಯುತ್ತದೆ ಮತ್ತು ಅದರ ವಾಸನೆ ಹೋಗುತ್ತದೆ. ಆಮೇಲೆ ಬಾಣಲಿಗೆ ಸ್ವಲ್ಪ ಎಣ್ಣೆಹಾಕಿ ಕಾಯಲು ಬಿಡಿ. ಎಣ್ಣೆ ಕಾಯುತ್ತಿದ್ದಂತೆ ಮೊದಲಿಗೆ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿರಿ. ಆಮೇಲೆ ಹಸಿಮೆಣಸಿನಹಾಯಿ ಹಾಕಿರಿ. ಈಗ ಉಪ್ಪು ಮತ್ತು ಅರಿಶಿನ ಪುಡಿಯನ್ನು ಹಾಕಿ ಬಾಡಿಸಿ. ಅರಿಶಿನ ಪುಡಿ ಮತ್ತು ಉಪ್ಪು ಈರುಳ್ಳಿಯನ್ನು ಕೊಂಚ ಕರಗಿಸುತ್ತದೆ.ಇದಕ್ಕೆ ಶುಂಟಿ ಬೆಳ್ಳುಳ್ಳಿ ಪೇಶ್ಟ್ ಹಾಕಿ ಗಮ ಹೋಗುವವರೆಗೆ ಬಾಡಿಸಿ. ಒಲೆ ಉರಿಯನ್ನು ಕಡಿಮೆ ಮಾಡಿರಿ. ಈಗ ತತ್ತಿಯನ್ನು ಒಡೆದು ಪುಡಿ ಮಾಡಿಕೊಂಡು ಹಾಕಿರಿ. ಹೀಗೆ ಮಾಡುವುದರಿಂದ ಬುರ‍್ಜಿಯ ತತ್ತಿ ಪಾತ್ರೆಯು ತಳ ಹಿಡಿಯದೆ, ಉದುರುದುರಾಗಿ ಬರುವುದು. ಈಗ ಇದಕ್ಕೆ ಬೇಕಾದ್ದಲ್ಲಿ ಗರಂ ಮಸಾಸೆ ಮತ್ತು ದನಿಯಾ ಪುಡಿ ಹಾಕಿಕೊಳ್ಳಬಹುದು. 5 – 8 ನಿಮಿಶ ಬೇಯಿಸಿ, ತೆಗೆಯಿರಿ. ಈಗ ಬಿಸಿ ಬಿಸಿ ತತ್ತಿ ಬುರ್‍ಜಿ ಸವಿಯಲು ಸಿದ್ದವಾಗಿದ್ದು, ನಿಂಬೆ ಹಣ್ಣು ಹಿಂಡಿರಿ. ಇದನ್ನು ಅನ್ನ, ಚಪಾತಿ ಜೊತೆ ತಿನ್ನಬಹುದು. ಚೆಂದ ಕಾಣಿಸಲು ಬೇಕಾದ್ದಲ್ಲಿ ಬುರ‍್ಜಿಯ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಬಹುದು.

( ಚಿತ್ರಸೆಲೆ: ಬರಹಗಾರರು )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *