ಕವಿತೆ: ನಂಬಿಕೆ

– ನಿತಿನ್ ಗೌಡ.

ನಂಬಿಕೆ

ಕಣ್ಣಿಗೆ ರೆಪ್ಪೆಯ ಮೇಲೆ ನಂಬಿಕೆ
ಹ್ರುದಯಕೆ ಉಸಿರ ಮೇಲೆ ನಂಬಿಕೆ
ಉದರಕೆ ಕರುಳ ಮೇಲೆ ನಂಬಿಕೆ

ಒಲವಿಗೆ ಮನಸ ಮೇಲೆ ನಂಬಿಕೆ
ಪ್ರಣಯಕೆ ಒಲವ ಮೇಲೆ ನಂಬಿಕೆ
ಹಗಲಿಗೆ ನೇಸರನ‌ ಮೇಲೆ ನಂಬಿಕೆ
ಇರುಳಿಗೆ ಶಶಿಯ ಮೇಲೆ ನಂಬಿಕೆ

ಸಾದನೆಗೆ ಪರಿಶ್ರಮದ ಮೇಲೆ ನಂಬಿಕೆ
ಕಲಾವಿದನಿಗೆ ಕಲೆಯ ಮೇಲೆ ನಂಬಿಕೆ
ನಿನಾದಕೆ ಸ್ವರದ ಮೇಲೆ ನಂಬಿಕೆ

ಶರಣರಿಗೆ ಬಕುತಿಯ ಮೇಲೆ ನಂಬಿಕೆ
ಪರಸಿವನಿಗೆ ಬಕುತರ ಮೇಲೆ ನಂಬಿಕೆ
ನಂಬಿಕೆಯ ಮೇಲೆ ನಡೆವುದು ಜಗವು,
ನಂಬಿ ನಡೀ ನೀ ಇಹದ ದಾರಿಯಲಿ;
ಒಳಿತನು ಬಯಸುತ, ಎಲ್ಲರೊಳು ಒಂದಾಗಿ..
ಕಾಣುವೆ ಕೊನೆಗೆ ನಿನ್ನೊಳಗಿನ ಐಕ್ಯ ಲಿಂಗದ ಬೆಳಕನು.

(ಚಿತ್ರಸೆಲೆ: copilot.mocrosoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *