ಕಿರುಗವಿತೆಗಳು

– ನಿತಿನ್ ಗೌಡ.

ನಾ ಗೀಚಿದೆ

ಅರಿವಿಲ್ಲದೆ ನಾ ಗೀಚಿದೆ ನಿನ ಹೆಸರನೂ ನನ್ನೊಳಗೆ
ಅಳಿಸಲಾಗದು ಎಂದಿಗೂ ಅದನು, ಮನದ ಹೊತ್ತಿಗೆಯಿಂದ
ಸಹಿ ಹಾಕಿಬಿಡು, ತಡ ಮಾಡದೆ ನಿನ್ನ ಅಂಕಿತ..
ಒಡನಾಟವು ಒಡಮೂಡವುದು ಆ ಗಳಿಗೆ, ನಮ್ಮೊಳಗೆ.

ವರವೋ ಶಾಪವೋ

ಮಾಸುವ ನೆನಪದು; ವರವೋ ಶಾಪವೋ
ನಿಲ್ಲದ ಸಮಯವದು; ವರವೋ ಶಾಪವೋ
ಒಲ್ಲದ ನಿಲುವದು; ವರವೋ ಶಾಪವೋ
ಗೆಲ್ಲದ ಗುರಿಯದು; ವರವೋ ಶಾಪವೋ
ಎದೆಯ ದನಿಯದು; ವರವೋ ಶಾಪವೋ

ನೀ ಸವಿದ ಹಾಗೆ

ಸವಿ ನೀ ಬಾಳೆಂಬ ಅಡುಗೆಯ
ಕೊಂಚ ಸಿಹಿ, ಕೊಂಚ ಕಾರ, ಕೊಂಚ ಹುಳಿ
ಕೊಂಚ ಸಪ್ಪೆ, ಕೊಂಚ ಕಾರ
ಇರುವುದೆಲ್ಲ ರುಚಿಯೂ, ನೀ ಸವಿದ ಹಾಗೆ

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks