ಕವಿತೆ: ಗುಂಡಿಗೆಯ ದನಿ
ಗುಂಡಿಗೆ ದನಿಯ ಕೇಳೆಯಾ
ಹೇಳಿದೆ ನಿನ್ನಯ ಹೆಸರನೆ
ಕೂಗಿ ಒಮ್ಮೆ ನೀ ಹೇಳೆಯಾ
ನನ್ನಯ ಹೆಸರನೆ
ಬಿಗುಮಾನವ ಬಿಟ್ಟು ನಗುವೆಯಾ
ಆ ನಗುವಿಗೆ ಈ ಗುಂಡಿಗೆ ಕಾದಿದೆ
ಕಾದು ಸೋತ ಈ ಗುಂಡಿಗೆಗೆ
ಒಲವಿನ ಉಸಿರ್‍ಗಾಳಿ ನೀಡೆಯಾ
ಬಿರುಗಾಳಿ ಬಂದರೂ ಜಗ್ಗದು
ಒಲವಿದು ಎಂದಿಗೂ ಕುಗ್ಗದು
ಮನಸು ಮಾಡು ನಮ್ಮದೇ ಜಗವಿದು
ಇಂದಲ್ಲ ನಾಳೆ ನಮ್ಮ ಒಪ್ಪುವುದು
ಹೆದರಿ ಓಡದಿರು ಬಾಳಲಿ
ನಮ್ಮಿಬ್ಬರ ಒಲವು ಅರಳಲಿ
ಇದು ಒಂದು ಹೋರಾಟ ಬದುಕಲಿ
ಮುಂದೆ ಒಲವಿನ ದೀಪ ಬೆಳಗಲಿ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು