ಕುಂಬಳಕಾಯಿ ಹೆಸರು ಬೇಳೆ ಪಾಯಸ
– ಸವಿತಾ.
ಏನೇನು ಬೇಕು
-
ಕುಂಬಳಕಾಯಿ – 1 ಹೋಳು
-
ಹೆಸರು ಬೇಳೆ – 1 / 2ಕಪ್
-
ಬೆಲ್ಲ – 1.5 ಕಪ್ (ಒಂದೂವರೆ ಕಪ್)
-
ತಾವರೆ ಬೀಜ – 1/4 ಕಪ್
-
ಗೋಡಂಬಿ – 4
-
ಬಾದಾಮಿ – 4
-
ಒಣ ಕೊಬ್ಬರಿ – 2 ಚಮಚ
-
ತುಪ್ಪ – 2 ಚಮಚ
-
ಹಾಲು – 2 ಕಪ್
-
ಅರಿಶಿಣ ಸ್ವಲ್ಪ
ಮಾಡುವ ಬಗೆ
ಕುಂಬಳ ಕಾಯಿ ನಡುವೆ ಇರುವ ಬೀಜ ತಿರುಳು ತೆಗೆದು, ತೊಳೆಯಿರಿ. ನಂತರ ಹೆಸರು ಬೇಳೆ ತೊಳೆಯಿರಿ. ಕುಂಬಳಕಾಯಿ ಹಾಗೂ ಹೆಸರು ಬೇಳೆಯನ್ನು ಎರಡು ಬೇರೆ ಬೇರೆ ಪಾತ್ರೆಯಲ್ಲಿಟ್ಟು ಕುಕ್ಕರ್ ನಲ್ಲಿ ಎರಡು ಕೂಗು ಕೂಗಿಸಿ ತೆಗಿದಿಡಿ. ತಾವರೆ ಬೀಜಗಳನ್ನು ಸ್ವಲ್ಪ ಹುರಿದು ತೆಗೆಯಿರಿ. ಗೋಡಂಬಿ, ಬಾದಾಮಿ, ಸ್ವಲ್ಪ ಒಣ ಕೊಬ್ಬರಿ ಸೇರಿಸಿ ಮಿಕ್ಸರ್ ನಲ್ಲಿ ತರಿ ತರಿಯಾಗಿ ಪುಡಿ ಮಾಡಿ ತೆಗೆದಿಡಿ.
ಹಾಲು ಕಾಯಲು ಇಟ್ಟು, ಮಿಕ್ಸರ್ ನಲ್ಲಿ ಮಾಡಿದ ಪುಡಿ ಸೇರಿಸಿ, ಕುದಿಸಿ. ಕುಂಬಳಕಾಯಿ ಸಿಪ್ಪೆ ತೆಗೆದು ಸೇರಿಸಿ. ಕುದಿಸಿದ ಹೆಸರು ಬೇಳೆ ಸೇರಿಸಿ ಬೇಕಾದಶ್ಟು ನೀರು ಹಾಕಿ, ಕುದಿಸಿ. ಸ್ವಲ್ಪ ಅರಿಶಿಣ, ತುಪ್ಪ, ಬೆಲ್ಲ ಹಾಕಿ ಒಂದು ಕುದಿ ಕುದಿಸಿ ಇಳಿಸಿರಿ. ಈಗ ಕುಂಬಳಕಾಯಿ ಪಾಯಸ ಸವಿಯಲು ಸಿದ್ದ. ಬಿಸಿ ಬಿಸಿ ಪಾಯಸ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು