ಕಿರುಗವಿತೆ: ಎನ್ನೊಲುಮೆಯ ಪೈರು
– ನಿತಿನ್ ಗೌಡ.
ಎನ್ನೊಲುಮೆಯ ಪೈರು
ಕತ್ತಲೊಳು ಜಳಪಿಸೋ ಕೋಲ್ಮಿಂಚಿನಹಾಗೆ..
ಮನದ ಮನೆಯ ಮೂಲೆಯಲಿ ಎಲ್ಲೋ,
ಮಿಂಚಿ ಮರೆಯಾಗುತಿದೆ, ನಿನ್ನಿರುವಿಕೆಯ ನೆನಪು..
ಸಾಕಿಶ್ಟು ಮಿಂಚು, ಮನದ ಕತ್ತಲೆಯ ಸರಿಸಿ
ಒಲುಮೆಯ ಬೆಳಕು ಬೆಳಗಿಸಲು, ಕೊನೆಗೆ;
ಕಳೆದ ಕ್ಶಣಗಳೆಂಬ ಮದುರ ಗುಡುಗು ಮಾರ್‍ದನಿಸಲು,
ಕರಗುವುದು ಮಡುಗಟ್ಟಿದ ಬಾವನೆಗಳ ಕಾರ್‍ಮೋಡ,
ಸುರಿಯುವುದಾಗ ಎನ್ನೊಲುಮೆಯ ಮಳೆಯು,
ಹರಿಯವುದು ನನ್ನೊಳಗಿನ ಬಾವನೆಯ ಕಾರಂಜಿ..
ಹೀಗಾದರೂ, ಹಸಿರಾಗಬಹುದೇನೋ ನಮ್ಮ ಬಾಳು..
ಚಿಗುರಬಹುದೇನೋ ನಿನ್ನೊಳು ನನ್ನೊಲುಮೆಯ ಪೈರು..
( ಚಿತ್ರಸೆಲೆ: Image generated using ChatGPT with DALL·E by OpenAI. )
ಇತ್ತೀಚಿನ ಅನಿಸಿಕೆಗಳು