ಮಂಗಳೂರು ಶೈಲಿ ಮಾವಿನ ಹಣ್ಣಿನ ಸಾರು

– ಕಿಶೋರ್ ಕುಮಾರ್.

ಏನೇನು ಬೇಕು

  • ಸಿಪ್ಪೆ ತೆಗೆದ ಮಾವಿನ ಹಣ್ಣು – 3 ರಿಂದ 4
  • ಚೆನ್ನಾಗಿ ಹಣ್ಣಾದ ಮಾವು (ರಸಕ್ಕಾಗಿ) – 1
  • ಹಸಿಮೆಣಸಿನಕಾಯಿ – 4 ರಿಂದ 5
  • ಬೆಲ್ಲ – 1 ಅಚ್ಚು
  • ಉಪ್ಪು – ರುಚಿಗೆ ತಕ್ಕಶ್ಟು
  • ಕಾರ್‍ನ್ ಪ್ಲೋರ್ – ½ ಚಮಚ
  • ಒಣಮೆಣಸಿನಕಾಯಿ – 2
  • ಸಾಸಿವೆ – ಸ್ವಲ್ಪ
  • ಅಡುಗೆ ಎಣ್ಣೆ – 1 ಚಮಚ
  • ಉದ್ದಿನಬೇಳೆ – ಸ್ವಲ್ಪ
  • ಕರಿಬೇವು – ಸ್ವಲ್ಪ

ಮಾಡುವ ಬಗೆ

ಒಂದು ಪಾತ್ರೆಗೆ ಸಿಪ್ಪೆ ತೆಗೆದ ಮಾವಿನ ಹಣ್ಣು, ಮಾವಿನ ರಸ, ಉಪ್ಪು, ಬೆಲ್ಲ ಮತ್ತು ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ, ನೀರು ಸೇರಿಸಿ ಮುಚ್ಚಿ, ಕಡಿಮೆ ಉರಿಯಲ್ಲಿ 10 ನಿಮಿಶ ಬೇಯಿಸಿ. ಈಗ ಗಟ್ಟಿಯಾಗಲು ಕಾರ್‍ನ್ ಪ್ಲೋರ್ (ಸ್ವಲ್ಪ ನೀರು ಬೆರೆಸಿದ) ಸೇರಿಸಿ, 5 ನಿಮಿಶ ಬೇಯಿಸಿ.

ಒಂದು ಪ್ಯಾನ್ ಗೆ 1 ಚಮಚ ಅಡುಗೆ ಎಣ್ಣೆ ಹಾಕಿ, ಸಾಸಿವೆ, ಒಣಮೆಣಸಿನಕಾಯಿ, ಉದ್ದಿನಬೇಳೆ ಹಾಗೂ ಕರಿಬೇವು ಸೇರಿಸಿ ಒಗ್ಗರಣೆ ಮಾಡಿ. ಈಗ ಪಾತ್ರೆಯಲ್ಲಿ ಬೇಯಿಸಿದ ಮಾವನ್ನು ಇದಕ್ಕೆ ಸೇರಿಸಿ ಕಲಸಿ, ಕಡಿಮೆ ಉರಿಯಲ್ಲಿ 1 ನಿಮಿಶ ಬೇಯಿಸಿ. ಈಗ ಮಂಗಳೂರು ಶೈಲಿ ಮಾವಿನ ಹಣ್ಣಿನ ಸಾರು ರೆಡಿ. ಈಗ ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *