ದೇಹಕೆ ತಂಪನೆರೆಯಲು ಮಾಡಿ ನೋಡಿ ಮಸಾಲೆ ಮಜ್ಜಿಗೆ ಮತ್ತು ರಾಗಿ ಅಂಬಲಿ

– ನಿತಿನ್ ಗೌಡ

ಮಸಾಲೆ ಮಜ್ಜಿಗೆ ಮಾಡಲು ಏನೇನು ಬೇಕು ?

  • ಮಜ್ಜಿಗೆ – 2 ಲೀಟರ್
  • ಶುಂಟಿ – 1 ಇಂಚು
  • ಕರಿಬೇವು – 2 ರಿಂದ 3 ಎಲೆ
  • ಹಸಿಮೆಣಸು – 1
  • ಉಪ್ಪು – ಸ್ವಲ್ಪ
  • ಇಂಗು – ಅರ್‍ದ ಚಿಟಿಗೆ
  • ಬೆಳ್ಳುಳ್ಳಿ – 3 ಎಸಳು
  • ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಸಾಲೆ ಮಜ್ಜಿಗೆ ಮಾಡುವ ಬಗೆ:

ಮೊದಲಿಗೆ ಶುಂಟಿ, ಹಸಿಮೆಣಸು, ಬೆಳ್ಳುಳ್ಳಿ ಮತ್ತು ಕರಿಬೇವನ್ನು ಚೆನ್ನಾಗಿ ಜಜ್ಜಿಕೊಳ್ಳಿರಿ. ಈಗ ಇದನ್ನು ಮಜ್ಜಿಗೆಗೆ ಸೇರಿಸಿ, ಇಂಗು ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ. ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ಹಾಕಿರಿ. ಈಗ ತಂಪಾದ ಮಸಾಲೆ ಮಜ್ಜಿಗೆ ತಯಾರಿದ್ದು, ದೇಹವನ್ನು ತಂಪಾಗಿಸಲು , ಬಿಸಿಲ ದಾಹ ನೀಗಿಸಲು ಕುಡಿಯಬಹುದು.

ರಾಗಿ ಅಂಬಲಿಗೆ ಏನೇನು ಬೇಕು ?

  • ರಾಗಿ ಹಿಟ್ಟು – 1.5 ಕಪ್ಪು
  • ನೀರು – 2 ಲೀಟರ್
  • ಉಪ್ಪು – ಸ್ವಲ್ಪ

ರಾಗಿ ಅಂಬಲಿ ಮಾಡುವ ಬಗೆ:

ಮೊದಲಿಗೆ ಒಂದು ಪಾತ್ರೆಯಲಿ ನೀರನ್ನು ಕಾಯಲು ಇಡಿ. ಇದು ಕಾಯುತ್ತಿದ್ದಂತೆ, ಸ್ವಲ್ಪ ಸ್ವಲ್ಪ ರಾಗಿ ಹಿಟ್ಟನ್ನು ನೀರಿಗೆ ಉದುರಿಸುತ್ತಾ, ಸವುಟಿನಲ್ಲಿ ಕಲಸಿ. ಹಿಟ್ಟು ಗಂಟಾಗಲು ಬಿಡಬಾರದು. ಇದಕ್ಕೆ ಚಿಟಿಗೆ ಉಪ್ಪು ಹಾಕಿ, ಕಾಯಲು ಬಿಟ್ಟು ಆಗಾಗ ಅಲ್ಲಾಡಿಸುತ್ತಾ(ಗೂರಾಡುತ್ತ) ಇರಬೇಕು. ಒಮ್ಮೆಲೆ ಇದು ಉಕ್ಕಿದಾಗ, ಒಲೆ ಆರಿಸಿ.

ಈಗ ರಾಗಿ ಅಂಬಲಿ ತಣ್ಣಗಾದ ಮೇಲೆ, ಈ ಮೇಲೆ ಮಾಡಿಕೊಂಡ ಮಜ್ಜಿಗೆ ಸೇರಿಸಿ ಕುಡಿಯಲು ದೇಹದ ಉಶ್ಣ ಇಳಿದು, ಒಡಲು ತಂಪಾಗುತ್ತದೆ. ಇದು ಆರೋಗ್ಯಕ್ಕೆ  ಕೂಡಾ ಒಳ್ಳೆಯದು.

( ಚಿತ್ರಸೆಲೆ: ಬರಹಗಾರರು )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *