ಮಾಡಿ ನೋಡಿ ಮೆಂತೆ ಸೊಪ್ಪಿನ ವಾಂಗಿಬಾತ್
ಬೇಕಾಗುವ ಸಾಮಾನುಗಳು
- ಮೆಂತೆ ಸೊಪ್ಪು – 500 ಗ್ರಾಂ (ತೊಳೆದು ಹೆಚ್ಚಿದ್ದು)
- ಹಸಿ ಬಟಾಣಿ – 1/4 ಕಪ್
- ಸಾಸಿವೆ – ಸ್ವಲ್ಪ
- ವಾಂಗಿಬಾತ್ ಪುಡಿ (ಇಲ್ಲಿ ಮನೆಯಲ್ಲಿ ತಯಾರಿಸಿದ ಪುಡಿ ಬಳಸಲಾಗಿದೆ. ನೀವು ಎಂ.ಟಿ.ಆರ್. ವಾಂಗಿಬಾತ್ ಮಿಶ್ರಣವನ್ನೂ ಬಳಸಬಹುದು)
- ಎಣ್ಣೆ – ಸ್ವಲ್ಪ
- ಕರಿಬೇವಿನ ಎಲೆಗಳು – ಸ್ವಲ್ಪ
- ಇಂಗು – ಸ್ವಲ್ಪ
- ರುಚಿಗೆ ತಕ್ಕಶ್ಟು ಉಪ್ಪು
ಮಾಡುವ ಬಗೆ
ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ, ಕರಿಬೇವಿನ ಎಲೆಗಳು ಮತ್ತು ಇಂಗು ಹಾಕಿ. ಸಾಸಿವೆ ಸಿಡಿದ ನಂತರ ಹೆಚ್ಚಿದ ಮೆಂತೆ ಸೊಪ್ಪನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಸೊಪ್ಪು ಸೀದುಹೋಗದಂತೆ ನೋಡಿಕೊಳ್ಳಲು ಒಲೆಯ ಉರಿ ಕಡಿಮೆ ಇಡಿ. ಹಾಗೆಯೇ ಬಟಾಣಿಯನ್ನೂ ಸೇರಿಸಿ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಮೆಂತೆ ಮತ್ತು ಬಟಾಣಿ ಚೆನ್ನಾಗಿ ಹುರಿದ ನಂತರ ವಾಂಗಿಬಾತ್ ಪುಡಿಯನ್ನು ಸೇರಿಸಿ. ನಿಮ್ಮ ರುಚಿಗೆ ತಕ್ಕಶ್ಟು, ಕಾರದ ಪ್ರಮಾಣಕ್ಕೆ ಅನುಗುಣವಾಗಿ ವಾಂಗಿಬಾತ್ ಪುಡಿ ಸೇರಿಸಬಹುದು. ಎಲ್ಲವನ್ನೂ ನಿದಾನವಾಗಿ ಮಿಶ್ರಣ ಮಾಡಿ, ಉರಿಯನ್ನು ಕಡಿಮೆ ಇರಿಸಿ. ವಾಂಗಿಬಾತ್ ಪುಡಿ ಚೆನ್ನಾಗಿ ಬೆರೆತ ನಂತರ ಒಲೆಯನ್ನು ನಂದಿಸಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ. ನೀವು ಈಗಾಗಲೇ ಬೇಯಿಸಿದ ಅನ್ನವನ್ನು ತಯಾರಿಸಿದ್ದರೆ, ಅದನ್ನು ಈ ಮಿಶ್ರಣದೊಂದಿಗೆ ಚೆನ್ನಾಗಿ ಕಲಸಿ ಬಿಸಿ-ಬಿಸಿ ವಾಂಗಿಬಾತ್ ಬಡಿಸಿ ಆನಂದಿಸಿ.
(ಚಿತ್ರಸೆಲೆ: ಬರಹಗಾರರು)
ಇತ್ತೀಚಿನ ಅನಿಸಿಕೆಗಳು