ಮಲೆನಾಡಿನ ಕಳಿಲೆ ಪಲ್ಯ

ರೇಶ್ಮಾ ಸುದೀರ್.

kalilepalya
ಬೇಕಾಗುವ ಸಾಮಗ್ರಿಗಳು:

ಸಣ್ಣಗೆ ಹೆಚ್ಚಿದ ಕಳಿಲೆ(ಎಳೆ ಬಿದಿರು) —–1/4 ಕೆ.ಜಿ
ಜೀರಿಗೆ ಮೆಣಸು(ಸಣ್ಣ ಮೆಣಸು.ವಿಶೇಶವಾಗಿ ಮಲೆನಾಡಿನಲ್ಲಿ ಸಿಗುತ್ತದೆ) –7-8
ಜೀರಿಗೆ ಮೆಣಸು ಸಿಗದಿದ್ದಲ್ಲಿ ಹಸಿರು ಮೆಣಸು —–5-6
ತೆಂಗಿನಕಾಯಿ ತುರಿ ——1 ಬಟ್ಟಲು
ಬೆಳ್ಳುಳ್ಳಿ —————-1 ಗೆಡ್ಡೆ
ಕಡಲೆಬೇಳೆ ————-2-3 ಟೇಬಲ್ ಚಮಚ
ಎಣ್ಣೆ ——————-2 ಟೇಬಲ್ ಚಮಚ

ಮಾಡುವ ಬಗೆ :

ಸಣ್ಣಗೆ ಹೆಚ್ಚಿದ ಕಳಿಲೆಯನ್ನು ತೊಳೆದು ಎರಡು ದಿನ ನೀರಿನಲ್ಲಿ ನೆನಸಿ ಇಡಬೇಕು. ಪ್ರತಿದಿನ ಕಿವುಚಿ ತೊಳೆದು ನೀರು ಬದಲಾಯಿಸಿ ಇಡಬೇಕು. ಮೂರನೆ ದಿನ ಬೆಳಿಗ್ಗೆ ನೀರು ಚೆಲ್ಲಿ ಅದಕ್ಕೆ ಅಕ್ಕಿ ತೊಳೆದ ನೀರನ್ನು ಹಾಕಬೇಕು. ಆ ನೀರಿಗೆ ಕಡಲೆಬೇಳೆಯನ್ನು ಹಾಕಿ ಇಡಬೇಕು. ಸಂಜೆ ಅಕ್ಕಿ ತೊಳೆದ ನೀರಿನ ಸಹಿತ ಬೇಯಲು ಒಲೆಯ ಮೇಲೆ ಇಡಿ. ಅದಕ್ಕೆ ಜಜ್ಜಿದ ಜೀರಿಗೆಮೆಣಸು ಅತವಾ ಸಣ್ಣಗೆ ಹೆಚ್ಚಿದ ಹಸಿರುಮೆಣಸು ಹಾಕಿ,ಉಪ್ಪು,ಚಿಟಿಕೆ ಅರಿಸಿನ ಹಾಕಿ ಬೇಯಲು ಬಿಡಿ. ನೀರು ಆರುತ್ತಾ ಬರುವಾಗ ಕಾಯಿತುರಿ ಹಾಕಿ. ಬೇರೆ ಕಾವಲಿಯಲ್ಲಿ ಎಣ್ಣೆ ಕಾಯಲು ಇಟ್ಟು ಸಾಸಿವೆ ಹಾಗು ಜಜ್ಜಿದ ಬೆಳ್ಳುಳ್ಳಿ ಹಾಕಿ ಬೆಂದ ಕಳಿಲೆಗೆ ಒಗ್ಗರಣೆ ಮಾಡಿ. ಮಾಡಲು ಸುಲಬವಾದ ರುಚಿಯಾದ ಕಳಿಲೆ ಪಲ್ಯ ಸವಿಯಲು ಸಿದ್ದ. ಅಕ್ಕಿ ರೊಟ್ಟಿಯೊಂದಿಗೆ ತುಪ್ಪ ಹಾಕಿಕೊಂಡು ತಿನ್ನಬಹುದು.

ಸೂ: ಕಳಿಲೆಯನ್ನು ತೊಳೆದು ಎರಡು ದಿನ ನೀರಿನಲ್ಲಿ ನೆನೆಸಿಡುವುದು ಕಡ್ಡಾಯ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: