ಕವಿತೆ: ನಮ್ಮವರು ಯಾರು
– ಸವಿತಾ.
ಮಾತಾಡುವ ಜನರು
ನಮ್ಮವರಲ್ಲ
ಸಾಗುವಾಗ ಸಿಕ್ಕವರು
ನಮ್ಮವರಲ್ಲ
ನಮ್ಮವರು ಎಂದುಕೊಂಡವರೂ
ನಮ್ಮವರಲ್ಲ
ಹಾಗಾದರೇ ನಮ್ಮವರು ಯಾರು?
ನಮಗಲ್ಲದವರು ಎನ್ನುವ ಬ್ರಮೆಯೋ…
ಕಾಡುವಂತಹುದು
ಇದ್ಯಾಕೋ ಇಲ್ಲದ ಕೊರಗು…
ಅವರಶ್ಟಕ್ಕೇ ಅವರಿದ್ದರೂ ಸಾಕು
ನಮ್ಮಶ್ಟಕ್ಕೇ ನಾವಿದ್ದರೂ ಆಯಿತು
ಎನ್ನುವುದಶ್ಟೇ ಒಳಿತು
ಅನಾವಶ್ಯಕವೊಂದು ಕಳೆದ್ಹೋಗುವುದು
ಅವಶ್ಯಕತೆಯೊಂದು ಹುಟ್ಟುವುದು ಇಲ್ಲಿ ಮಾಮೂಲು
ಬದುಕಲಿಶ್ಟು ಸಾಕು
ಕಶ್ಟ-ಸುಕವಿಲ್ಲಿ ಸಮಪಾಲು
ಇಲ್ಲಗಳ ನಡುವೆ
ಬಂದಿಸದಿದ್ದರೂ ಸಾಕು
ಬಯಸುವ ಬಾಂದವ್ಯ
ತಂತಾನೇ ಹುಟ್ಟುವುದು
ಬದುಕೊಂದು ಬದುಕಿಸಿಬಿಡುವುದು
ದಡ ತಲುಪಿಸಲು ಕೈ ಜೋಡಿಸಿದವರು
ಯಾರೋ ಗೊತ್ತಿಲ್ಲದವರು… ಆದರೇನು?
ಆಗಿಬಿಟ್ಟರು ಆ ಕ್ಶಣದಲ್ಲಿ ನಮ್ಮವರು
( ಚಿತ್ರ ಸೆಲೆ : quantachange.com )
ಇತ್ತೀಚಿನ ಅನಿಸಿಕೆಗಳು