ಕೇಕ್
– ಸವಿತಾ.

ಏನೇನು ಬೇಕು
- ಹಾಲು – 2 ಲೋಟ
- ಗೋದಿ ಹಿಟ್ಟು – 2 ಲೋಟ
- ಬೆಲ್ಲ ಇಲ್ಲವೆ ಸಕ್ಕರೆ – 1.5 ಲೋಟ
- ಬೇಕಿಂಗ್ ಪೌಡರ್ – 1/2 ಚಮಚ
- ಅಡುಗೆ ಸೋಡಾ – 1/4 ಚಮಚ
- ಏಲಕ್ಕಿ – 2
- ಬಾದಾಮಿ – 2
- ಗೊಡಂಬಿ – 2
- ಚೆರ್ರಿ – 2
- ಹಾಲಿನ ಪುಡಿ – 2 ಚಮಚ
- ತುಪ್ಪ – 2 ಚಮಚ
- ಬಟರ್ ಪೇಪರ್ – 1
ಮಾಡುವ ಬಗೆ
ಗೋದಿ ಹಿಟ್ಟು ಸಾಣಿಗೆ ಹಿಡಿದು, ಸಾಣಿಸಿ ಇಟ್ಟುಕೊಳ್ಳಿ. ಹಾಲು ಬಿಸಿ ಮಾಡಿ ಒಲೆ ಆರಿಸಿ. ಬಿಸಿ ಮಾಡಿದ ಹಾಲಿಗೆ ಬೆಲ್ಲ ಹಾಕಿ ಸ್ವಲ್ಪ ಹೊತ್ತು ಕರಗಲು ಇಡಿ. ಒಂದು ಪಾತ್ರೆಗೆ ಸ್ವಲ್ಪ ತುಪ್ಪ ಹಚ್ಚಿ, ಬಟರ್ ಪೇಪರ್ ಹಾಕಿ ಮತ್ತೆ ಸ್ವಲ್ಪ ತುಪ್ಪ ಹಚ್ಚಿ ಇಡಿ. ಏಲಕ್ಕಿ ಪುಡಿ ಮಾಡಿ ಮತ್ತು ಬಾದಾಮಿ, ಗೊಡಂಬಿ ಪುಡಿ ಮಾಡಿ ಇಡಿ. ಚೆರ್ರಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇನ್ನೊಮ್ಮೆ ಹಾಲು ಬೆಲ್ಲ ಸ್ವಲ್ಪ ಬಿಸಿ ಮಾಡಿ ಚೆನ್ನಾಗಿ ಕರಗಿಸಿ ನಂತರ ಗೋದಿ ಹಿಟ್ಟಿಗೆ ಸ್ವಲ್ಪ, ಸ್ವಲ್ಪ ಹಾಕಿ ಕೈಯಿಂದ ಕಲಸುತ್ತಾ, ಬಾದಾಮಿ, ಗೋಡಂಬಿ ಏಲಕ್ಕಿ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ. ನಂತರ ಬೇಕಿಂಗ್ ಪೌಡರ್ ಮತ್ತು ಅಡುಗೆ ಸೋಡಾ ಸ್ವಲ್ಪ ಹಾಕಿ. ಎಲ್ಲಾ ಬೆಲ್ಲದ ಹಾಲು ಹಾಕಿ ಸರಿಯಾಗಿ ಕಲಸಿ ಐದು ನಿಮಿಶ ಇಡಿ. ಒಲೆ ಹಚ್ಚಿ ದಪ್ಪ ತಳದ ಬಾಣಲೆ ಇಟ್ಟು , ತಳಕ್ಕೆ ಒಂದು ತಟ್ಟೆ ಇಟ್ಟು, ಮುಚ್ಚಳ ಮುಚ್ಚಿ ಬಿಸಿ ಮಾಡಿ. ತಯಾರಿಸಿದ ಕೇಕ್ ಮಿಶ್ರಣವನ್ನು ತುಪ್ಪ ಹಚ್ಚಿದ ಪಾತ್ರೆಗೆ ಸುರಿದು, ನಂತರ ಬಾಣಲೆಯಲ್ಲಿಟ್ಟು ಮೇಲೇ ಮುಚ್ಚಳ ಇಲ್ಲವೇ ತಟ್ಟೆ ಇಟ್ಟು, ಮದ್ಯಮ ಉರಿಯಲ್ಲಿ ಐವತ್ತು ನಿಮಿಶ ಬೇಯಿಸಿ ಒಲೆ ಆರಿಸಿ. ಬಿಸಿ ಆರಿದ ನಂತರ ಕೇಕ್ ತೆಗೆದು ಕತ್ತರಿಸಿ ಸವಿಯಿರಿ.

ಇತ್ತೀಚಿನ ಅನಿಸಿಕೆಗಳು