ಮೋಡದ ಮೋಡಿ

– ಬರತ್ ಕುಮಾರ್.

{ಪರ‍್ಸಿ ಬಿಶ್ ಶೆಲ್ಲಿ (ಪಿ.ಬಿ.ಶೆಲ್ಲಿ) ಇನಿತನಕ್ಕೆ ಮತ್ತು ನಲ್ಸಾಲುಗಳಿಗೆ ಹೆಸರಾದ ಇಂಗ್ಲಿಶ್ ನಲ್ಬರಹಗಾರ. ಶೆಲ್ಲಿಯವರ Masque of Anarchy ಅಂತೂ ಕಾಡದಿಕೆಯನ್ನು ಎತ್ತಿಹಿಡಿದ ನಲ್ಬರಹ. ಈ ಸಾಲುಗಳೇ ಮಹಾತ್ಮ ಗಾಂದಿಯವರ ’ಕಾಡದಿಕೆ ಚಳುವಳಿ’ಗೆ ದಾರಿದೀಪವಾಯಿತು. ’ಕನ್ನಡದ ಕಣ್ವ’ ಎಂದೇ ಹೆಸರಾದ ನಮ್ಮ ಬಿ.ಎಮ್.ಶ್ರೀಯವರು ಶೆಲ್ಲಿಯವರ ಹಲವು ನಲ್ಸಾಲುಗಳನ್ನು ’ಇಂಗ್ಲಿಶ್ ಗೀತಗಳು’ ಎಂಬುದರ ಮೂಲಕ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ನಲ್ಬರಹದ ಜೊತೆಗೆ ಶೆಲ್ಲಿಯವರ ಆಳ್ಮೆಯರಿಮೆಯ ಬರಹಗಳನ್ನು ಕೂಡ ಇಲ್ಲಿ ನೆನೆಯತಕ್ಕದ್ದು. ಅಂತಹ ದೊಡ್ದ ಚಿಂತಕನ ನಲ್ಸಾಲುಗಳಲ್ಲಿ ಒಂದಾದ ‘The Cloud’ ಎಂಬುದರ ಕನ್ನಡಯ್ಸು ಇದೋ ನಿಮ್ಮ ಮುಂದೆ… ಉಸುರಿಗಳ ಉಸಿರ‍್ತನವನ್ನು ಕೊಂಡಾಡುವ ಮತ್ತು ಅದರ ಜೀವನಚಕ್ರವನ್ನು ಇಲ್ಲಿ ಚಿತ್ರಿಸಲಾಗಿದೆ}

Copy of IMG_1628

ಬಾಯಾರಿದ ಆ ಹೂಗಳ ಎದೆಗೆ
ಪೊನಲ್ಗಡಲ ಪೊಸನೀರ ತಂದೆ

ನಡುವೊತ್ತಿನ ಕನಸಲಿದ್ದ ಎಲೆಗಳಿಗೆ
ನಾ ತಿಳಿನೆರಳಾಗಿ ಬಂದೆ

ಎಬ್ಬಿಸಿವೆ ಪಕ್ಕನೆ ಮರಿಹಕ್ಕಿಗಳ
ಎನ್ನ ರೆಕ್ಕೆಗಳ ಇಬ್ಬನಿಗಳು

ಹಕ್ಕಿಯು ಕುಣಿಯುತ ರವಿಯ ನೋಡಿ
ನಿದ್ದೆಯು ಹಾರಿತು ಎಲ್ಲಿಗೋ ಓಡಿ

ಬಿದ್ದವು ನನ್ನಾಣತಿಯಂತೆ ಆಲಿಕಲ್ಲು
ಹಸಿರುಹೊಲಗಳ ಚೆಂದದಿ ಬೆಳಗಲು

ಮತ್ತೆ ಕರಗಿದೆ ನಾನು ಆ ಮಳೆಯಲ್ಲೇ
ನಗುನಗುತ ಗುಡುಗಿನ ಸದ್ದಿನಲ್ಲೇ

(ಚಿತ್ರ: ಬರತ್ ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙂

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *