ನಲ್ಬರಹ

‘ಸರ‍್ವಜ್ನನ ವಚನಗಳ ಹುರುಳು’ – ಕಿರುಹೊತ್ತಗೆ

– ಹೊನಲು ತಂಡ. ಶ್ರೀ ಸಿ.ಪಿ.ನಾಗರಾಜ ಅವರು ಸರ‍್ವಜ್ನನ ಹಲವಾರು ವಚನಗಳ ಸಾರವನ್ನು ತಿಳಿಸುವ ಬರಹಗಳನ್ನು ಹೊನಲಿಗಾಗಿ ಮಾಡಿಕೊಟ್ಟಿದ್ದರು. ಒಟ್ಟು 90 ಸರ‍್ವಜ್ನನ ವಚನಗಳ ಹುರುಳನ್ನು, 9 ಕಂತುಗಳಾಗಿ ಹೊನಲಿನಲ್ಲಿ ಮೂಡಿಸಲಾಗಿತ್ತು. ಆ ಎಲ್ಲಾ ವಚನಗಳ ಹುರುಳು ಓದುಗರಿಗೆ ಒಂದೇ ಕಡೆ ಸಿಗುವ ಹಾಗೆ ಮಾಡುವ ಪ್ರಯತ್ನವೇ ಈ ಮಿನ್ನೋದುಗೆ. ಸರ‍್ವಜ್ನನ ವಚನಗಳ ಹುರುಳನ್ನು ತಿಳಿಯಲು ಈ… Read More ›

ಓ ಶಿವನೇ….

– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ. ಇವನಿಗೆ ಬದುಕಲು ಸುಂದರವಾದ ಪರಿಸರವನ್ನು ನೀ ನೀಡಿದೆ, ಆದರೆ ಆ ಪರಿಸರವನ್ನೇ ನಾಶಮಾಡಿ, ಸುಂದರವಾದ ಬದುಕು ಕಟ್ಟಲು… Read More ›

‘ಶೂಟಿಂಗಾಯಣ’

– ಡಾ|| ಅಶೋಕ ಪಾಟೀಲ. ಗಂಗಾವತಿಯಲ್ಲಿ ತುಂಗಬದ್ರೆ ಕೇವಲ 5 ಕಿಮೀ ದೂರದಲ್ಲೇ ಕವಲಾಗಿ ಹರಿಯುತ್ತಾಳೆ. ಬತ್ತ, ಬಾಳೆ, ತೆಂಗಿನ ತೋಟಗಳು ದೊಡ್ಡ ದೊಡ್ದ ಗುಡ್ಡಗಳ ನಡುವೆ ಕಂಗೊಳಿಸುತ್ತಿರುತ್ತವೆ. ಆನೇಗುಂದಿ, ಹಂಪಿ ತುಸುದೂರದಲ್ಲಿದ್ದು ಅನೇಕ ಕಟ್ ಶಾರ‍್ಟ್ ದಾರಿಗಳಿವೆ. ದಾರಿಗುಂಟ ಕಣ್ಣಿಗೆ ಹಿತವಾಗುವ ಸುಂದರ ನೋಟಗಳು ಬೆರಗುಗೊಳಿಸುತ್ತವೆ. ಹೀಗಾಗಿ ಸಿನಿಮಾ ಮಂದಿಗೆ ಸಾಕಶ್ಟು ಸುಂದರ ಲೋಕೆಶನ್ ಗಳು… Read More ›

ಮಂದಿಗೆ ನಾಳು ನಾಳಿಗೂ ಕೊಂಡಾಟವೇ!

– ಅಮರ್.ಬಿ.ಕಾರಂತ್. ( ಕೊಂಡಾಟ : celebration ) ಮಗು ಹುಟ್ಟಿದರೂ ಬದುಕಿ ಉಳಿದರೂ ಬೆಳೆಯುತ ಅಲ್ಲಲ್ಲಿ ತಡವರಿಸಿದರೂ ಗೆಂದು ತೇಗಿದರೂ ಕೊಂಡಾಟವೇ ಕೊನೆಯುಸಿರೆಳೆಯುವವರೆಗೆ. ಸತ್ತರೂ ಬಿಟ್ಟಾರೆಯೇ ನಮ್ಮ ಮಂದಿ? ಹಣೆಬರಹ ನೆಟ್ಟಗಿದ್ದು ಸತ್ತರೆ ಅವರು ಎಣಿಸಿದ್ದು, ಕುಣಿಸಿದ್ದು ಆಡಿದ್ದು, ಮಾಡಿದ್ದು ಎಲ್ಲವೂ ಪೆಂಪಿನ ಪುಂಡಾಟಿಕೆಗಳ ಪೇಳ್ವಿಗಳೇ! ಬೇಕಿಲ್ಲವೇ ಅವಕಿಶ್ಟು ಕೊಂಡಾಟದ ಮೆರುಗು? ಅಂದಿನಿಂದಿಂದಿನವರೆಗೂ ಮಂದಿಗಳ ನಡಿಗೆಯ ಹಿಂದೂ… Read More ›

ಬಾವಿಯ ಹತ್ತಿರ ಒಬ್ಬನೇ ಮನುಶ್ಯನಿದ್ದಾನೆ…

– ಪ್ರಕಾಶ ಪರ‍್ವತೀಕರ.  ಈಸೋಪನ ಒಡೆಯನಾದ ಜಾಂತಸನಿಗೆ ಸ್ನಾನ ಮಾಡಬೇಕಾಗಿತ್ತು. ಆತ ಈಸೋಪನನ್ನು  ಕರೆದು ಸಾರ‍್ವಜನಿಕ ಬಾವಿಯ ಮೇಲೆ ಮನುಶ್ಯರ ದಟ್ಟಣೆ ಎಶ್ಟಿದೆ ಎಂದು ನೋಡಿ ಬರಲು ಹೇಳಿದ. ಈಸೋಪ ಜಾಂತಸನ ಗುಲಾಮ. ನೋಡಲು ಅತ್ಯಂತ ಕುರೂಪಿ ಅಶ್ಟಾವಕ್ರ. ಆದರೆ  ಕುಶಾಗ್ರಮತಿ, ಅಪಾರ ಬುದ್ದಿಶಾಲಿಯಾಗಿದ್ದ. ಆತ ಬಾವಿಯ ಕಡೆಗೆ ನಡೆದ. ದೂರದಿಂದಲೇ ಆತನಿಗೆ ಬಾವಿಯ ಹತ್ತಿರ ಜನರ… Read More ›

ಪ್ರಯತ್ನ ಹಾಗು ಪಲ

– ಪ್ರಕಾಶ ಪರ‍್ವತೀಕರ.  ಇದು ಡೆನ್ಮಾರ‍್ಕಿನ ರಾಜನ ಕತೆ. ಈ ರಾಜ ಯುದ್ದವೊಂದರಲ್ಲಿ ದಯನೀಯವಾಗಿ ಸೋಲನ್ನು ಕಂಡು ಪಲಾಯನ ಮಾಡಿ  ಒಂದು ಹಾಳು ಬಿದ್ದ ಮನೆಯಲ್ಲಿ ಆತ ಅಡಗಿದ್ದ. ನಿರಾಶೆಯಿಂದ ಜಗತ್ತೇ ಶೂನ್ಯವಾದಂತೆ ಆತನಿಗೆ ಎನಿಸಿತ್ತು. ತನ್ನ ಹಣೆಬರಹವನ್ನು ಹಳಿಯುತ್ತ ಕುಳಿತಿದ್ದ. ಆತನಿಂದ ಸ್ವಲ್ಪ ದೂರದಲ್ಲಿ ಒಂದು ಮರವಿತ್ತು. ಅದನ್ನೇ ನೋಡುತ್ತ ಕುಳಿತ ರಾಜನಿಗೆ ಅದರಲ್ಲಿ… Read More ›

ಸರ‍್ವಜ್ನನ ವಚನಗಳ ಹುರುಳು – 9ನೆಯ ಕಂತು

– ಸಿ.ಪಿ.ನಾಗರಾಜ. 81)   ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರೆ ಗೋರ್ಕಲ್ಲ ಮೇಲೆ ಮಳೆಗರೆದರಾ-ಕಲ್ಲು ನೀರ್ಕೊಳ್ಳಬಹುದೆ ಸರ್ವಜ್ಞ ಅರಿವನ್ನು ಹೊಂದಲು ಮನಸ್ಸಿಲ್ಲದ/ಪ್ರಯತ್ನಿಸದ ವ್ಯಕ್ತಿಗೆ ತಿಳುವಳಿಕೆಯನ್ನು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಹೇಳಲಾಗಿದೆ. (ಮೂರ್ಖ=ತಿಳಿಗೇಡಿ/ಸರಿ-ತಪ್ಪುಗಳ ಅರಿವಿಲ್ಲದವನು ; ಬುದ್ಧಿ=ತಿಳುವಳಿಕೆ/ಅರಿವು ; ನೂರ‍್+ಕಾಲ ; ಕಾಲ=ಸಮಯ ; ನೂರ್ಕಾಲ=ಅನೇಕ ಬಾರಿ/ಹಲವು ಸಲ ; ಗೋರ್ಕಲ್ಲು=ಗಡುಸಾದ/ಗಟ್ಟಿಯಾದ ಕಲ್ಲು ; ಮಳೆ+ಕರೆದರೆ+ಆ ;… Read More ›

ಸಣ್ಣಕತೆಗಳ ಕಿರುಹೊತ್ತಗೆ

– ಬಸವರಾಜ್ ಕಂಟಿ. ಹೊನಲಿಗೆ ಬರೆಯಲು ಮೊದಲುಮಾಡಿದಾಗ ಇಶ್ಟೆಲ್ಲ ಬರೆಯುತ್ತೇನೆ ಎಂದುಕೊಂಡಿರಲಿಲ್ಲ. ಒಂದೆರಡು ಕವಿತೆ ಬರೆದು ಸುಮ್ಮನಿದ್ದ ನನಗೆ ಮತ್ತೆ ಮತ್ತೆ ಬರೆಯಲು ಹುರುಪು ತುಂಬಿದ್ದು ಹೊನಲು ತಂಡ. ಇಂಗ್ಲೀಶ್ ಮಾದ್ಯಮದಲ್ಲಿ ಓದಿರುವ ನನಗೆ ಕನ್ನಡ ಬರೆಯಲು ತುಸು ತೊಡಕೆನಿಸಿದರೂ, ಕನ್ನಡದ ಮೇಲಿನ ಪ್ರೀತಿಯಿಂದ ಮತ್ತು “ಎಲ್ಲರ ಕನ್ನಡ”ದ ವಿಚಾರಗಳು ಮನಸ್ಸಿನಲ್ಲಿ ನಾಟಿದ್ದರಿಂದ, ಕನ್ನಡದಲ್ಲೇ ಬರೆಯಲು ತೀರ‍್ಮಾನಿಸಿದೆ. ಮುಂಚಿನಿಂದಲೂ… Read More ›

ಸರ‍್ವಜ್ನನ ವಚನಗಳ ಹುರುಳು – 8ನೆಯ ಕಂತು

– ಸಿ.ಪಿ.ನಾಗರಾಜ. 71)   ಕಡೆದ ಕಲ್ಲದು ನುಣ್ಪು ಒಡೆದರೆ ದೈವವೇ ಜಡರ ಮಾತುಗಳು ಹುಸಿ ನೋಡು-ದಯಚಿತ್ತ ದೆಡೆಯಲ್ಲಿ ದೈವ ಸರ್ವಜ್ಞ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವ ಒಲವು, ಕರುಣೆ ಮತ್ತು ಕಾಳಜಿಯಿಂದ ಕೂಡಿದ ನಡೆನುಡಿಯಲ್ಲಿ ದೇವರ ಇರುವಿಕೆಯನ್ನು ಕಾಣಲಾಗಿದೆ. (ಕಡೆ=ಕೆತ್ತು/ರೂಪಿಸು/ಬಿಡಿಸು ; ಕಲ್ಲು+ಅದು ; ಕಡೆದ ಕಲ್ಲು=ಉಳಿ ಮತ್ತು ಸುತ್ತಿಗೆಯ ಪೆಟ್ಟಿನಿಂದ ಆಕಾರವೊಂದನ್ನು ತಳೆದ ಕಲ್ಲು/ಕಂಡರಣೆಗೊಂಡ… Read More ›

ನನ್ನದೊಂದು ತಪ್ಪು

– ಪ್ರತಿಬಾ ಶ್ರೀನಿವಾಸ್. “ಬೇಗ ಓಡಿ ಬಾರೆ, ಬೇಗ ಹೋಗಿ ಇಟ್ಟು ಬರೋಣ” ಎಂಬ ದನಿ ಕೇಳುತ್ತಿದ್ದಂತೆಯೇ ಚಪ್ಪಲಿ ಕೂಡ ಹಾಕದೇ ಓಡಿ ಬಂದೆ ಸ್ಕೂಲಿಂದ ಹೊರಗೆ. ಮಲೆನಾಡ ಮಡಿಲಲ್ಲಿ ನಮ್ಮದೊಂದು ಪುಟ್ಟ ಶಾಲೆ.  5 ನೇ ತರಗತಿ ಓದುತ್ತಿದ್ದ ನಮಗೆ ಆ ಶಾಲೆಯೇ ಪ್ರಪಂಚ. ನಮ್ಮ ಸ್ಕೂಲಿನ ಬೀಗ ತೆಗೆಯುವುದರೊಂದಿಗೆ ಶುರು ಆಗುವ ನಮ್ಮ ದಿನಚರಿ,… Read More ›