ಬಾಳಿಗೊಂದು ನಂಬಿಕೆ

ಪ್ರಶಾಂತ ಸೊರಟೂರ.

 

ಸುಮಾರು ವರುಶಗಳ ಹಿಂದಿನ ಮಾತಿದು, ಮಿಂಚೆಯ ಮೂಲಕ ಬರುತ್ತಿದ್ದ ಹುರುಪ ತುಂಬುವ ಸಾಲುಗಳು ಮನದಲ್ಲಿ ಹೊಸ ಹುರುಪು ತುಂಬುತ್ತಿದ್ದವಾದರೂ ಅಂತಹ ಸಾಲುಗಳು ಹೆಚ್ಚಾಗಿ ಇಂಗ್ಲಿಶಲ್ಲಿ ಇರುತ್ತಿದ್ದುದು ಸಂತೋಶ್ ಮೂಗೂರ್ ಅವರಿಗೆ ತುಸು ಕಸಿವಿಸಿಯನ್ನುಂಟು ಮಾಡುತ್ತಿದ್ದವು.

ಕನ್ನಡದಲ್ಲೇ ಅಶ್ಟೊಂದು ಅರಿವು ತುಂಬಿರುವ ಬರಹಗಳಿರುವಾಗ ಅವುಗಳನ್ನೇಕೇ ನಾವು ಮರೆಯುತ್ತಿದ್ದೇವೆ? ಕನ್ನಡಿಗರಿಗೆ ಅವುಗಳನ್ನು ತಲುಪಿಸಬೇಕಲ್ಲವೇ? ನಾನೇ ಆ ಕೆಲಸವನ್ನೇಕೆ ಮಾಡಬಾರದು? ಅನ್ನುವ ಮನದಾಳದ ಮಾತುಗಳು ಅವರನ್ನು ಈ ನಿಟ್ಟಿನಲ್ಲಿ ಕೆಲಸಕ್ಕೆ ಇಳಿಸಲು ಹೆಚ್ಚು ಹೊತ್ತು ತೆಗೆದುಕೊಳ್ಳಲಿಲ್ಲ. ಅಂದು ಶುರುವಾಗಿದ್ದೇ ಕನ್ನಡದ ಅರಿವಿನ ಸಾಲುಗಳನ್ನು ಹಂಚುವ ಬಾಳಿಗೊಂದು ನಂಬಿಕೆಯ ಪಯಣ. ಆ ಪಯಣ ಶುರುವಾಗಿ ಈಗ ಸತತ ಎಂಟು ವರುಶಗಳು ಕಳೆದಿವೆ!

ಕನ್ನಡಿಗರ ಮುಂಜಾನೆಯಲ್ಲಿ ಹುರುಪು ತುಂಬಲು ಶನಿವಾರ ಮತ್ತು ಬಾನುವಾರ ಹೊರತುಪಡಿಸಿ ದಿನಕ್ಕೊಂದರಂತೆ ತಪ್ಪದೇ ಮಿಂಚೆಪೆಟ್ಟಿಗೆಯನ್ನು ತಲುಪುವ ’ಬಾಳಿಗೊಂದು ನಂಬಿಕೆ’ಯ ಸಾಲುಗಳು ಹಲವು ಕನ್ನಡಿಗರಲ್ಲಿ ಪ್ರತಿದಿನ ಹೊಸ ಹುರುಪು ತುಂಬುತ್ತಿವೆ. ಮಂಕುತಿಮ್ಮನ ಕಗ್ಗದಿಂದ ಹಿಡಿದು ವಚನಗಳ ಮನ ನಾಟುವ ಸಾಲುಗಳು ಹಲವು ಕನ್ನಡಿಗರ ಬದುಕಲ್ಲಿ ನಂಬಿಕೆಯನ್ನು, ಹೊಸ ಹುರುಪನ್ನು ತುಂಬುತ್ತಿವೆ.

ಕಳೆದ ಎಂಟು ವರುಶಗಳಲ್ಲಿ ಸುಮಾರು 40 ಕವಿಗಳ, 1970 ನಲ್ಸಾಲುಗಳನ್ನು ಬಾಳಿಗೊಂದು ನಂಬಿಕೆ ಹೊತ್ತು ತಂದಿದೆ. ಸಂತೋಶ್ ಅವರ ಈ ಎಡೆಬಿಡದ ಕೆಲಸದಲ್ಲಿ ಅವರ ಹೆಂಡತಿ ಮತ್ತು ತಂಗಿಯೂ ಕೈಜೋಡಿಸಿದ್ದಾರೆ. ಕನ್ನಡ ನಲ್ಸಾಲುಗಳ ಮೂಲಕ ಕನ್ನಡಿಗರಲ್ಲಿ ಹುರುಪು ತುಂಬುತ್ತಿರುವ ನಂಬಿಕೆಯ ಈ ಪಯಣ ಹೀಗೆ ಮುಂದುವರೆಯಲಿ.

’ಬಾಳಿಗೊಂದು ನಂಬಿಕೆ’ಯನ್ನು ಮಿಂಚೆಯ ಮೂಲಕ ನೀವೂ ಪಡೆಯಲು ಬಯಸುವುದಾದರೆ [email protected] ಮಿಂಚೆಗೆ ಬರೆದು ಕೋರಿಕೆ ಸಲ್ಲಿಸಬಹುದು. ಅದರ ಪೇಸಬುಕ್ ಗುಂಪು ಕೂಡ ಸೇರಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: