ಗೂಗಲ್ ಗ್ಲಾಸ್ ಬಿಡಿಮಾಹಿತಿ ಬಯಲು

clip_image002

ಗೂಗಲ್ನವರು ತಮ್ಮ ಗೂಗಲ್ ಗ್ಲಾಸ್ ಬಗ್ಗೆ ಹೇಳಿಕೊಂಡಾಗಿನಿಂದ ಪ್ರಪಂಚದೆಲ್ಲೆಡೆ ಇದರ ಬಗ್ಗೆ ಕುತೂಹಲದ ಅಲೆಗಳೆದ್ದಿದ್ದವು. ಇತ್ತೀಚಿಗೆ ಗ್ಲಾಸ್ ಮಾರಾಟಕ್ಕೆ ಸಜ್ಜಾಗಿದೆ ಎಂದು ಹೇಳಿದ ಗೂಗಲ್ ಇದನ್ನು ಕೊಳ್ಳಲು ತುದಿಗಾಲಲ್ಲಿ ನಿಂತಿರುವವರ ಕಳವಳ ಹೆಚ್ಚಿಸಿತ್ತು. ಜೊತೆಗೆ, ಇದರೊಂದಿಗೆ ಬಳಕಗಳು (apps) ನಡುನುಡಿಯಲು ಬೇಕಾಗುವ ಮಿರರ್ ಏ.ಪಿ.ಅಯ್. ಬರೆಗುರುತನ್ನೂ (documentation) ಕೂಡ ಬಿಡುಗಡೆ ಮಾಡಿತ್ತು. ಆದರೆ ಇದರ ಬಿಡಿಮಾಹಿತಿಯ (specifications) ಬಗ್ಗೆಯಾವುದೇ ಮಾತಿರಲಿಲ್ಲ. ಈಗ ಗೂಗಲ್ ಎಲ್ಲರೂ ಕಾಯುತ್ತಿದ್ದ ಆ ಬಿಡಿಮಾಹಿತಿಯನ್ನೂ ಬಿಡುಗಡೆ ಮಾಡಿದೆ.

ಬ್ಲೂಟೂತ್ ಮತ್ತು ವಯ್ಪಯ್ (WiFi) ಬೆಸುಗೆತನದ (connectivity) ಅಳವಿನೊಂದಿಗೆ ಬರುವ ಗ್ಲಾಸ್, ಹಯ್ ಡೆಪಿನಿಶನ್ ತೆರೆಯನ್ನು ಕೂಡ ಹೊಂದಿರುತ್ತದೆ. ಇದರ ಬ್ಯಾಟರಿ ಒಮ್ಮೆ ಚಾರ‍್ಜ್ ಮಾಡಿದರೆ ಸಾಮಾನ್ಯ ಬಳಕೆಯಲ್ಲಿ ಸುಮಾರು ಒಂದು ದಿನ ಬಾಳಿಕೆ ಬರುತ್ತದೆ. 5 ಎಂ.ಪಿ. ನೆರಳುತಿಟ್ಟಗಳು(photos) ಮತ್ತು 720 ಪಿಕ್ಸೆಲ್ ವಿಡಿಯೋಗಳನ್ನು ಸೆರೆ ಹಿಡಿಯಬಲ್ಲ ಕ್ಯಾಮೆರಾ ಇದೆ. 16 ಜಿ.ಬಿ. ಒಟ್ಟು ಸೇರುವೆ (storage) ಇದ್ದು ಇದರಲ್ಲಿ ಸುಮಾರು 12 ಜಿ.ಬಿ. ಬಳಸಬಹುದಾಗಿದೆ. ಜೊತೆಗೆ ಗೂಗಲ್ ಮೋಡ ಸೇರುವೆ (cloud storage) ಜೊತೆ ಸಿಂಕ್ ಕೂಡ ಮಾಡಬಹುದು.

ಗ್ಲಾಸ್ನ ಮಿನ್ನೆಲೆಗೆ ಹೋಗಿ ಅದನ್ನು ಹೇಗೆಲ್ಲಾ ಬಳಸಬಹುದೆಂದು ನೋಡಿದರೆ ಯಾರಿಗಾದರೂ ಬೆರಗಾಗುವುದು ನಿಜ. ಹಾಲಿವುಡ್ಡಿನ ಯಾವುದೋ ‘ಸಯನ್ಸ್ ಪಿಕ್ಶನ್’ ಚಿತ್ರದ ತುಣುಕುಗಳಿದ್ದಂತೆ ಕಾಣುತ್ತವೆ ಅಲ್ಲಿರುವ ವಿಡಿಯೋಗಳು; ಒಂದು ಇಲ್ಲಿ ಕೆಳಗಿದೆ, ನೋಡಿ. ಇನ್ನೊಂದು ಬೆರಗು ಹುಟ್ಟಿಸುವ ವಿಶಯವೆಂದರೆ ಗ್ಲಾಸ್ನಲ್ಲಿ ಮೂಳೆ ಈಸುಕೆ ಚಳಕದ (bone conduction technology) ಬಳಕೆ. ಗ್ಲಾಸ್ ತೊಟ್ಟವನು ಕಿವಿಗೆ ಕಿವಿಯುಲಿ (ear phone) ತೊಡುವುದು ಬೇಕಾಗಿಲ್ಲ. ಸದ್ದನ್ನು ಬುರುಡೆ ಮೂಳೆಯ ಮೂಲಕವೇ ಈಸಿಸಿ ಕಿವಿಗೆ ತಲುಪಿಸಲಾಗುವುದು!

ಸಂದೀಪ್ ಕಂಬಿ.

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.