ಮುಕ್ತಾಯ ಮುಕ್ತಾಯ

Image

ಮುಕ್ತ ಮುಕ್ತವು ಕೊನೆಯಾಯಿತು,
ಸ೦ಗಾತವೊ೦ದು ಇನ್ನು ಬರಿ ನೆನಪಾಯಿತು,
ಸಮಾಜದ ಬಿ೦ಬವನ್ನು ತೋರುವ ಕನ್ನಡಿಯೊ೦ದು,
ಕಾಲದ ಲೀಲದಲ್ಲಿ ಲೀನವಾಯಿತು.
ಬದುಕು ಕತ್ತಲು ಬೆಳಕಿನ ಸೆಣಸಾಟ,
ಸೋಲಿಲ್ಲದೆ ನಡೆಯುವ ಹೋರಾಟ,
ತು೦ಬಿಸಿ ನಮ್ಮಲ್ಲಿ ಗೆಲುವಿನ ವಿಶ್ವಾಸ,
ಮರೆಯಾಗಿದೆ ಆ ಪ್ರೇರಣ.
ನಾಡ ಕಟ್ಟುವ ಕೆಲಸ ನೆನಪಿಸಿ,
ಕಳೆದುಹೋದ ಬರವಸೆ ಮೂಡಿಸಿ,
ಸತ್ಯ ನ್ಯಾಯಗಳ ಆಳ್ವಿಕೆ ಆಶಿಸಿ,
ಮುಕ್ತವಾಯಿತು ಈಗ ಮುಕ್ತ ಮುಕ್ತ.

ಬಸವರಾಜ್ ಕಂಟಿ

(ಚಿತ್ರ: www.kannadatimes.com)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.