’ಅಕರಣಿಕಾರಕ’ ಮತ್ತು ’ಸಂಯುಗ್ಮಿಕರಣಿ’ಗಳ ಹೊರೆ

ಕನ್ನಡಕ್ಕೆ ಅರಿಮೆಯ ಹೊಸ ಪದಗಳನ್ನು ಉಂಟು ಮಾಡುವಾಗ ಸಾಮಾನ್ಯವಾಗಿ ಸಂಸ್ಕ್ರುತದಿಂದ ಪದಗಳನ್ನು ಎರವಲು ತರಲಾಗುತ್ತದೆ. ಇದರ ಬದಲಾಗಿ ಆದಶ್ಟೂ ಕನ್ನಡದ್ದೇ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳು ತುಂಬಾ ಇವೆ. ಇದು ಕಲಿಕೆಯಲ್ಲಿ ತುಂಬಾ ಮುಕ್ಯವಾದ ಒಂದು ವಿಚಾರ. ಇದರ ಬಗ್ಗೆ ಚೆನ್ನಾಗಿ ಅರಿಯಬೇಕೆಂದರೆ ನಮ್ಮ ಕನ್ನಡ ಮಾದ್ಯಮ ಪಾಟ ಪುಸ್ತಕಗಳನ್ನು ಒಮ್ಮೆ ತೆರೆದು ನೋಡಬೇಕು. ಸಂಸ್ಕ್ರುತದ ಎರವಲಿನಿಂದ ಹುಟ್ಟಿರುವ ನೂರಾರು ಪದಗಳು ಕಾಣಸಿಗುತ್ತವೆ. ಉದಾಹರಣೆಗೆ ‘ತಲೆಕೆಳಗು’ ಎಂದು ಸುಲಬವಾಗಿ ಹೇಳಬಹುದಾದುದನ್ನು ‘ವ್ಯುತ್ಕ್ರಮ’  ಅಂತಲೂ, ‘ಸದಾಹಸಿರು ಕಾಡು’ ಇದನ್ನು ‘ನಿತ್ಯ ಹರಿದ್ವರ್ಣ ಅರಣ್ಯ’ ಅಂತಲೂ ಕರೆಯಲಾಗಿದೆ. ಇದರ ಅರ‍್ತ ತಿಳಿದುಕೊಳ್ಳುವುದು ಮಕ್ಕಳಿಗೆ ಕಶ್ಟ, ತಿಳಿದರೂ ಹೆಚ್ಚುಕಾಲ ನೆನಪಿನಲ್ಲಿರುವುದಿಲ್ಲ.

ಹತ್ತನೆಯ ತರಗತಿಯ ಗಣಿತ ಪುಸ್ತಕದ ಒಂದು ಬಾಗ ಹೀಗಿದೆ ನೋಡಿ:
pada_pada

ಈ ಅಕರಣಿಕಾರಕಗಳು, ಸಂಯುಗ್ಮಿಕರಣಿಗಳು ಮುಂತಾದ ಕನ್ನಡವಲ್ಲದ ಪದಗಳನ್ನೆಲ್ಲ ನಮ್ಮ ಮಕ್ಕಳ ಮೇಲೇಕೆ ಕನ್ನಡ ಎಂದು ಹೇಳಿ ಹೇರುತ್ತಿದ್ದೇವೆ? ಕನ್ನಡ ಮಾದ್ಯಮದಲ್ಲಿ ಓದಿದ ನನಗೆ ಇವತ್ತಿಗೂ ‘ಅಬಿದಮನಿ’, ‘ಅಪದಮನಿ’ ಅಂದರೆ ಏನು ಎಂಬುದರ ಬಗ್ಗೆ ಅನುಮಾನ ಇದೆ. ಶಾಲೆಯ ದಿನಗಳಲ್ಲಿ ಕಶ್ಟ ಪಟ್ಟು ನೆನಪಿನಲ್ಲಿ ಇಟ್ಟುಕೊಂಡಿದ್ದೆ, ಆದರೆ ಈಗ ನೆನಪಿಲ್ಲ. ಇದೇ ರೀತಿಯ ಹಲವಾರು ಪದಗಳು ಇವೆ. ಉದಾಹರಣೆಗೆ  ‘ಹೃತ್ಕರ್ಣ’ , ‘ಹೃತ್ಕಕ್ಷಿ’, ‘ಧ್ಯುತಿ ಸಂಶ್ಲೇಷಣೆ ಕ್ರಿಯೆ’, ‘ಯಾದ್ರಚ್ಚಿಕ ಪುಟ’  ಈ ಪದಗಳನ್ನು ಅರ‍್ತ ಮಾಡಿಕೊಳ್ಳುವುದು ತುಂಬಾ ಕಶ್ಟ. ಇದಕ್ಕೆ ಕನ್ನಡದವೇ ಆದ ಪದಗಳು ಬೇಕು. ಇದರಿಂದ ಮಕ್ಕಳಿಗೆ ಸುಲಬವಶ್ಟೇ ಅಲ್ಲದೆ ಉರು ಹೊಡೆದು ನೆನಪಿಟ್ಟು ಕೊಳ್ಳುವ ಕಶ್ಟ ತಪ್ಪುತ್ತದೆ. ಆಶ್ಚರ‍್ಯದ ವಿಷಯವೆಂದರೆ ಕನ್ನಡದೆನ್ನಲಾಗಿರುವ ಈ ಪದಗಳು ಇಂಗ್ಲಿಶ್‍ನ ಪದಗಳಷ್ಟೇ ಅಪರಿಚಿತ ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು ಕೂಡ ಕಶ್ಟದ ಕೆಲಸ.

ಹಾಗಾಗಿ ಯಾವುದೇ ಅರಿಮೆಯ ಪದ ಆಡು ಮಾತಿನಲ್ಲಿದ್ದರೆ ಅದು ಕಲಿಕೆಯನ್ನು ಹಗುರವಾಗಿಸುತ್ತದೆ ಹಾಗೂ ವಿಶಯವನ್ನು ಚೆನ್ನಾಗಿ ಅರ‍್ತ ಮಾಡಿಕೊಳ್ಳಲು, ಕಲಿಕೆಯ ಮಟ್ಟವನ್ನು ಮೇಲೆತ್ತಲು ಸಹಾಯವಾಗುತ್ತದೆ. ಈ ಅಂಶಗಳನ್ನು ಕಲಿಕೆಯ ಪರಿಣಿತರು, ಪಾಟದ ಪುಸ್ತಕಗಳನ್ನು ಬರೆಯುವವರು ಗಂಬೀರವಾಗಿ ನೋಡಿ ಪುಸ್ತಕಗಳಲ್ಲಿ ಆದಶ್ಟೂ ಕನ್ನಡದವೇ ಆದ ಸುಲಬ ಪದಗಳನ್ನು ಬಳಸಿ ಮಕ್ಕಳ ಕಲಿಕೆಯನ್ನು ಇನ್ನಶ್ಟು ‘ಅರ‍್ತಪೂರ‍್ಣ’ವಾಗಿಸಬೇಕಿದೆ.

– ಗಿರೀಶ್ ಕಾರ‍್ಗದ್ದೆ

ನಿಮಗೆ ಹಿಡಿಸಬಹುದಾದ ಬರಹಗಳು

26 Responses

  1. ತಮ್ಮ ಕನ್ನಡ ತುಂಬಾ ಕೆಟ್ಟದಾಗಿದೆ !! Please work on it !!!

  2. Deepak Hc says:

    ಸಂಸ್ಕ್ರುತ – ಸಂಸ್ಕೃತ
    ಮಾದ್ಯಮ – ಮಾಧ್ಯಮ
    ಕಶ್ಟ – ಕಷ್ಟ
    ಆದಶ್ಟೂ – ಆದಷ್ಟೂ
    ಮುಕ್ಯವಾದ – ಮುಖ್ಯವಾದ
    ಮಾದ್ಯಮ – ಮಾಧ್ಯಮ !!!!

    Got tired of correcting ur mistakes !! There are more of them ! Our entire Kannada language is a direct descendant of Samskrutha and I don’t get what do you mean when you say that we should not borrow from it ??? We should be proud that we have a mother tongue which is a direct descendant of Devanaagari script !!

    • ದೀಪಕ್ – ಈ ಮಿಂಬಾಗಿಲ ಎಲ್ಲರ ಕನ್ನಡ ವಿಬಾಗದಲ್ಲಿ ಕೊಟ್ಟಿರುವ ವಿವರವನ್ನು ಒಮ್ಮೆ ಓದಿ. ಇದು ಯಾಕೆ ಹೀಗಿದೆ ಎಂದು ನಿಮಗೆ ತಿಳಿಯುತ್ತದೆ.

      ಕನ್ನಡವು ಸಂಸ್ಕ್ರುತ ಮೂಲದಿಂದ ಬಂದಿರುವುದು ಅನ್ನುವುದಕ್ಕೆ ನಿಮ್ಮಲ್ಲಿ ಪುರಾವೆಗಳು ಇವೆಯೇ? ಕನ್ನಡ ಬಾಶೆಯ ಹುಟ್ಟಿನ ಬಗ್ಗೆ ಹಲವಾರು ಸಂಶೋದನೆಗಳು ನಡೆದಿವೆ. ಅವುಗಳನ್ನು ನೀವು ಓದಿಕೊಂಡಿದ್ದೀರಾ? ನಾನು ಬೇರೆ ಬಾಶೆಯ ಪದಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿಲ್ಲ ಪದಗಳು ಸುಲಬವಾಗಿ ಅರ್ತವಾಗುವಂತಿರಬೇಕು. ನಿಮಗೆ(ಒಬ್ಬ ಸಾಮಾನ್ಯ ಕನ್ನಡಿಗನಿಗೆ) ವ್ಯುತ್ಕ್ರಮ ಅಂದರೆ ಸುಲಬವಾಗಿ ಅರ್ತವಾಗುತ್ತೋ ಅತವಾ ತಲೆಕೆಳಗು ಅಂದರೆ ಸುಲಬವಾಗಿ ಅರ್ತವಾಗುತ್ತೋ?

  3. Deepak Hc says:

    This would really have a great impact to our literature right ??? I see that in the age of digital media.. we are going to lose or definitely have a bad impact because of this 🙁
    And yeah again.. its my opinion !!!

  4. ಮೊದಲನೆಯದಾಗಿ ನಾನು ಕನ್ನಡ ಮಾಧ್ಯಮದಲ್ಲಿ ಓದಿಲ್ಲ . ಆದ್ದರಿಂದ ಈ ತೊಂದರೆಗಳು ನಂಗೆ ಆಗಿಲ್ಲ . ಅದಕ್ಕೆ ‘ಸಬ್ಜೆಕ್ಟಿವ್ ‘ ಆಗಿರೋ ಒಂದು ಅಬಿಪ್ರಾಯ ಕೊಡಲು ಸಾಧ್ಯವಿಲ್ಲ . ನನ್ನ ಪ್ರಕಾರ ನಿಮ್ಮ ಮೊದಲನೆಯ ಪ್ಯಾರಗ್ರ್ಯಾಫ್ ನಲ್ಲಿ ವ್ಯಕ್ತಪಡಿಸಿರೋ ಅಭಿಪ್ರಾಯಾನ್ ಯಾರಾದ್ರೂ ಒಪ್ಪಬೇಕಾದ್ದೆ ಅಂತ ಹೆಳಕ್ಕೆ ಇಷ್ಟ ಪಡ್ತೀನಿ .

    ಆದರೆ ಆಮೇಲೆ ಹೇಳಿರೋ ಮಾತುಗಳನ್ನ ನಾನು ಒಪ್ಪೊಲ್ಲ . ಬೇರೆ ಭಾಷೆಯಿಂದ ನಾವ್ ಯಾವ್ದೇ ಪದಗಳ್ನ ತೊಗೊ ಬಾರ್ದೂ ಅನ್ನೋದು ನನ್ನ ಪ್ರಕಾರ ಅಷ್ಟು ಸಮಂಜಸ ಅಲ್ಲ ಅನ್ಸತ್ತೆ. ಯಾಕೆ ಅಂದ್ರೆ ಭಾಷೆಗಳು ಬೆಳೆಯೊದೆ ಹಾಗೆ . ಹಿಂದೆ ಸಂಸೃತದಿಂದ ಪದಗಳನ್ನ ತೊಗೊಂಡ ಹಾಗೆ ಮುಂದೆ,ಬೇರೆ ಭಾಷೆಗಳಿಂದ ತೊಗೊಳಕ್ಕೆ ಬಿಡ್ಬೇಕು. ಭಾಷೆ ಬೆಳೆಯೊದೆ ಹಾಗೆ. ಯಾವುದೇ ಕಾರಣಕ್ಕೂ ನಾವ್ ಇದಕ್ಕೆ ತಡೆ ಹಾಕ ಕೂಡದು ಅಂತ ನನ್ನ ಭಾವನೆ.

    • ಕಾರ್ತಿಕ್ – ನಾನು ಕನ್ನಡ ಮಾದ್ಯಮದಲ್ಲಿ ಓದಿದ್ದು, ನನಗೆ ಈ ತೊಂದರೆಗಳು ಆಗಿವೆ, ಕನ್ನಡ ಮಾದ್ಯಮದಲ್ಲಿ ಓದಿದ ಕೆಲವು ಗೆಳೆಯರನ್ನು ಮಾತನಾಡಿಸಿದಾಗ ಅವರಿಗೂ ಈ ತೊಂದರೆಗಳಾಗಿರುವುದು ನನ್ನ ಗಮನಕ್ಕೆ ಬಂತು. ಬೇರೆ ಬಾಶೆಗಳಿಂದ ಪದಗಳನ್ನು ತೆಗೆದುಕೊಳ್ಳಬಾರದೆಂದು ನಾನು ಹೇಳುತ್ತಿಲ್ಲ.ಸುಲಬವಾಗಿ ಅರ್ತವಾಗುವಂತಿರಬೇಕು. ನಿಮಗೆ ವ್ಯುತ್ಕ್ರಮ ಅಂದರೆ ಸುಲಬವಾಗಿ ಅರ್ತವಾಗುತ್ತೋ ಅತವಾ ತಲೆಕೆಳಗು ಅಂದರೆ ಸುಲಬವಾಗಿ ಅರ್ತವಾಗುತ್ತೋ?

      • ಗಿರಿಯವರೇ – ‘ಇದಕ್ಕೆ ಕನ್ನಡದವೇ ಆದ ಪದಗಳು ಬೇಕು’ ಅಂತ ಇಲ್ಲಿ ಹೆಳಲಾಗಿದೆ . ಅದಕ್ಕೆ ನಾನು ಹಾಗೆ ಹೆಳಿದೆ. ಇದು ನನ್ನ ಒಬ್ಬನೇ ಅಭಿಪ್ರಾಯ ಆಗಿದ್ದಾರೆ ಅದು ಬೇರೆ ವಿಷಯ ಬಿಡಿ. ನಾನು ಹಲವಾರು ಸ್ನೇಹಿತರ ಜೊತೆ ಈ ಬಗ್ಗೆ ಮಾತನಾಡಿದಾಗ ಅವರು ಇದೆ ಅಭಿಪ್ರಾಯಾನ ವ್ಯಕ್ತ ಪಡಿಸಿದರು. ಕವಿಗಳಾದ ನಿಸಾರ್ ಆಮೆಡ್ ಅವರು ಒಪ್ಪುತ್ತರೆ ಇದ್ದಕ್ಕೆ .ಇದೆ ಸರಿ ಅನ್ನಿಸುತ್ತೆ ನನಗೆ .

      • ಕಾರ್ತಿಕ್ – ನಿಮ್ಮ ಅನಿಸಿಕೆಯನ್ನು ತೆರೆದ ಮನಸ್ಸಿನಿಂದ ಹೇಳಿರುವುದಕ್ಕೆ ದನ್ಯವಾದಗಳು.

        ಬೇರೆ ಬಾಶೆಯ ಪದಗಳು ಎಲ್ಲರಿಗೂ ಅರ್ತವಾಗುವುದಾದರೆ ಅದನ್ನು ನಾನು ಬೇಡವೆನ್ನುತಿಲ್ಲ. ಉದಾ, ಸುಲಬ ಅನ್ನುವುದು ಸಂಸ್ಕ್ರುತ ಬೇರಿನ ಪದ ಇಂತಹ ಪದಗಳನ್ನು ಬಿಡಿ ಅನ್ನುತ್ತಿಲ್ಲ.

        ಹೊಸದಾಗಿ ಪದಗಳನ್ನು ಕಟ್ಟುವುದು ಸಹ ಬಾಶೆಯ ಬೆಳವಣಿಗೆಗೆ ತುಂಬಾ ಮುಕ್ಯ. ಪದಗಳನ್ನು ಕಟ್ಟುವುದೇ ಆದರೆ ಅದು ಸುಲಬವಾದ ಕನ್ನಡ ಪದವಾದರೆ ಅರ್ತಮಾಡಿಕೊಳ್ಳುವುದು ಸುಲಬ. ಮತ್ತೊಂದು ಉದಾಹರಣೆ ಕೊಡಬೇಕೆಂದರೆ – ನಿಮ್ನ ದರ್ಪಣ, ಪೀನ ದರ್ಪಣ. ಇದನ್ನು ಉಬ್ಬುಗಾಜು, ತಗ್ಗು ಗಾಜು ಅಂದರೆ ಸುಲಬವಲ್ಲವೇ? ದೊಡ್ಡವರಾದ ನಮಗೇ ನಿಮ್ನ/ಪೀನ ದರ್ಪಣ ಅಂದರೆ ಅರ್ತವಾಗುವುದಿಲ್ಲ. ಇನ್ನು ಎಳೆಯ ಮಕ್ಕಳ ಪಾಡೇನು? ಕನ್ನಡದೆನ್ನಲಾಗಿರುವ ಈ ಪದಗಳು ಇಂಗ್ಲಿಶ್‍ನ concave/convex ಪದಗಳಷ್ಟೇ ಅಪರಿಚಿತವಲ್ಲವೇ?

        ಕರ್ನಾಟಕದಶ್ಟೇ ಜನರಿರುವ ಜರ್ಮನಿಯಲ್ಲಿ ಎಲ್ಲವನ್ನೂ ಸೊಗಸಾಗಿ ತಮ್ಮ ನುಡಿಯಲ್ಲೇ ಕಟ್ಟಿಕೊಂಡಿರುವುದನ್ನು ಗಮನಿಸಿ. ಅದು ಸಾದ್ಯವಾಗಿರುವುದಕ್ಕೆ ಮುಕ್ಯ ಕಾರಣ ಅಲ್ಲಿಯ ಉನ್ನತ ಕಲಿಕೆಯನ್ನು ತಾಯಿನುಡಿಯಲ್ಲಿ ಕೊಡುವುದರಿಂದ. ನಮ್ಮಲ್ಲೂ ಕನ್ನಡವನ್ನು ಉನ್ನತ ಕಲಿಕೆಗೂ ವಿಸ್ತರಿಸುವುದರಿಂದ ಕನ್ನಡದ ಸಾದ್ಯತೆಗಳು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಪದಗಳ ಆಯ್ಕೆಯನ್ನು ಜನರ ಮುಂದಿಡಬೇಕಿದೆ – ನಿಮ್ನ/ಪೀನ, ಉಬ್ಬು/ತಗ್ಗು, concave/convex ಜನರಿಗೆ ಯಾವುದು ಇಶ್ಟವಾಗುತ್ತೋ ಅದು ಉಳಿಯುತ್ತೆ ಇಲ್ಲವಾದರೆ ಮರೆಯಾಗುತ್ತೆ. ಆದರೆ ಹೊಸತನಕ್ಕೆ ತೆರೆದುಕೊಳ್ಳುವ ಕಸುವನ್ನು ಒಂದು ಬಾಶೆಯು ಯಾವತ್ತೂ ಕಳೆದುಕೊಳ್ಳಬಾರದು.

  5. Sandeep Kn says:

    ಕಾರ್ತಿಕ್, ಬೇರೆ ನುಡಿಗಳಿಂದ ಪದಗಳನ್ನು ತೊಗೋಬಾರದು ಅಂತ ಹೇಳುತ್ತಿಲ್ಲ ಈ ಬರಹ. ಕನ್ನಡದ್ದೇ ಆದ ಸುಲಬದ ಪದಗಳಿದ್ದರೆ ಒಳ್ಳೆಯದು ಎಂಬುದು ಇದರ ಅನಿಸಿಕೆ. ಉದಾಹರಣೆಗೆ chlorphyl ಎಂಬುದಕ್ಕೆ ‘ಪತ್ರಹರಿತ್ತು’ ಎಂಬ ಪದವನ್ನು ಬಳಸಲಾಗುತ್ತದೆ. ಇದರ ಬದಲಾಗಿ ‘ಎಲೆಹಸಿರು’ ಎಂಬ ಸುಲಬವಾದ ಎಲ್ಲರಿಗ್ಗೋ ತಿಳಿಯುವ ಪದ ಬಳಸಬಹುದು.

    • ಸಂದೀಪ್ – ‘ಇದಕ್ಕೆ ಕನ್ನಡದವೇ ಆದ ಪದಗಳು ಬೇಕು’ ಅಂತ ಇಲ್ಲಿ ಹೆಳಲಾಗಿದೆ . ಅದಕ್ಕೆ ನಾನು ಹಾಗೆ ಹೆಳಿದೆ.
      ಕ್ಲಾರೋಫಿಲ್ ಅಂದ್ರೆ ಎಳೆಹಸಿರು ಹೇಗೆ ಆದೀತು ? ನನಗೆ ಕ್ಲಾರೋಫಿಲ್ ಅಂತಾನೆ ಬಳಸೊದು ಒಳ್ಳೆದು ಅನ್ಸತ್ತೆ. ಸುಮ್ನೇ ಯಾಕೆ ಇಂತವಕ್ಕೆ ತಲೆ ಬಿಸಿ ಮಾಡ್ಕೋಬೇಕು ?
      ನಾನು ಮೊದಲೇ ಹೆಳಿದ ಹಾಗೆ ಲೇಖಕರ ಮಿಕ್ಕಿದ ಎಲ್ಲ ಅಭಿಪ್ರಾಯಾನ ಒಪ್ತೀನಿ.

      • Maaysa says:

        @karthik shandilya ಅವರೇ,

        ನಿಮ್ಮ ಮಾತೇ ನನ್ನದು. ಇವೊತ್ತು Science ಹಾಗು Technology ಯಲ್ಲಿ ಇಂಗ್ಲಿಷ್ ಇಲ್ಲದೆ ಕೆಲಸ ನಡೆಯಲ್ಲ . ಇದಕ್ಕೆ ಇತ್ತೀಚೆಗೆ ಇಟಲಿ, ಜರ್ಮನಿ ಹಾಗು ಆಸ್ಟ್ರಿಯಾ ದೇಶಗಳು ತಮ್ಮ ಯೂನಿವರ್ಸಿಟಿ-ಗಳಲ್ಲಿ ಇಂಗ್ಲಿಷ್ ಬಳಸೋದಕ್ಕೆ ಶುರು-ಮಾಡಿರೋದೇ ಸಾಕ್ಷಿ .

        Chlorophyll ಅನ್ನು ಹಾಗೆ ಲ್ಯಾಟಿನ್ ಲಿಪಿಯಲ್ಲೇ ಕನ್ನಡ ಬರಹಗಳಲ್ಲಿ ಬಳಸಿದರೆ ಇನ್ನೂ ಅನುಕೂಲ.

        ಇನ್ನೊಂದು ವಿಷಯ ಏನೆಂದರೆ, ಎಲ್ಲಾ ಗಿಡಗಳ ಎಳೆಗಳು ಹಸಿರಾಗಿರಲ್ಲ. ಹಾಗು Chlorophyll ಕೇವಲ ಎಲೆಯಲ್ಲಿ ಮಾತ್ರ ಇರಲ್ಲ. algae ಗಳಿಗೆ ಎಲೆಗಳು ಇರೋಲ್ಲ, ಆದರೆ Chlorophyll ಇರುತ್ತೆ.

      • Kiran Batni says:

        ಇಲ್ಲಿ ಆದಶ್ಟೂ ಹೆಚ್ಚು ಕನ್ನಡದ್ದೇ ಪದಗಳನ್ನು ಕೊಡುವ ಮೊಗಸು ನಡೆಯುತ್ತಿದೆ. ನಿಮಗೆ ಅದು ಸರಿ ಎನಿಸದಿದ್ದರೆ ನೀವು ಇಂಗ್ಲಿಶಿನ ಪದಗಳನ್ನೇ ಬಳಸಿ. ಅಂತಹ ಬರಹಗಳನ್ನೂ ಹೊನಲಿಗೆ ಕಳುಹಿಸಬಹುದು, ಕಳುಹಿಸಿ. ಸಿಂಪಲ್ 🙂

  6. Maaysa says:

    ಕನ್ನಡದ್ದೇ ಆದ ಹೊಸ-ಪದಗಳೂ ಬೇಡ, ಸಂಸ್ಕೃತದ ಕ್ಲಿಷ್ಟಪದಗಳೂ ಬೇಡ. ಸುಮ್ಮನೆ ಈ ಬಗೆ ವಿಷಯಗಳಿಗೆ ಇಂಗ್ಲಿಶ್-ಪದಗಳನ್ನು ಬಳಸಿರಿ.

    ಮಕ್ಕಳ ಮುಂದಿನ ಓದಿಗೆ ಅನುಕೂಲವಾಗುವುದು.

    ಪತ್ರಹರಿತೋ, ಎಲೆಹಸಿರೋ, ಎರಡೂ ಡಿಗ್ರೀ ಮುಂದಿನ ಓದಿಗೆ ಬಾಳಿಕೆಗೆ ಬರವು. ಇಂಗ್ಲಿಶ್ ಶಬ್ದಗಳನ್ನು ಬಲಸಿ.

  7. ಕಾರ‍್ತಿಕ್ ’ಎಲೆಹಸಿರು’ ಬಳಸಿ ತಲೆಬಿಸಿ ಮಾಡಿಕೊಳ್ಳಲೇ ಬೇಕಿದೆ ಯಾಕಂದ್ರೆ ಅದರಿಂದಲೇ ಕನ್ನಡ ನುಡಿಯಾಡುವವರ ಬದುಕಿಗೂ ಮತ್ತು ಅವರ ಕಲಿಕೆಗೂ ನಂಟು ತರಬಹುದು ಅದರಿಂದ ವಿಶಯವನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತೆ. ಈಗ ಕ್ಲೋರೋಫಿಲ್ ಅಂದರೆ ಏನು ಅಂತಾ ಎಶ್ಟು ಮಂದಿಗೆ ಗೊತ್ತು ? ನಿಗಂಟು ನೋಡಿದರೆ ಹೀಗಿದೆ chloro- + -phyll. >> pale green + leaf ಅಂದ್ರೆ ಕ್ಲೋರೋಫಿಲ್ ಪದದ ಹುರುಳಿನಲ್ಲಿ ಅಂತದೇನು ಆಳವಾದ ವಿಶಯ ಅಡಗಿಲ್ಲ. ಕ್ಲೋರೋಪಿಲ್ ಅಂತಾ ಹತ್ತಿಪ್ಪತ್ತು ಸಾರತಿ ಓದಿ ತಿಳಿದುಕೊಳ್ಳಬಹುದು ಆದ್ರೆ ಆ ಪದವೇ ಹೊಮ್ಮಿಸಬಹುದಾದ ಅರಿವಿನಿಂದ ನಾವು ದೂರು ಉಳಿದುಬಿಡುತ್ತೇವೆ.
    ಎಲೆಹಸಿರು ಇಲ್ಲವೇ ಬೇರೆ ಇನ್ನಾವುದೋ ಕನ್ನಡಪದ ಬಳಸಿದರೆ ಅದು ನಮಗೆ ಬೇಗನೇ ತಿಳಿಯುತ್ತದೆ ಅಲ್ಲವೇ ? ಇದರಾಚೆಗೆ ಕಿರಣ ಹೇಳಿದಂತೆ ಬರಹಗಾರರಿಗೆ ತಮಗೆ ಸರಿ ತೋರುವ ಪದ ಮುಂದಿಡುವ ಎಲ್ಲ ಹಕ್ಕಿದೆ.

    • ಸರಿಯಾಗಿ ಹೇಳಿದ್ದೀರಾ ಪ್ರಶಾಂತ್ – ಪದವನ್ನು ನೋಡಿದಾಕ್ಷಣ ಅದು ಅರ್ತವನ್ನು ಹೊಮ್ಮಿಸುವಂತಿದ್ದರೆ, ಅದರಿಂದ ಕಲಿಕೆಯಲ್ಲಾಗುವ ಪ್ರಯೋಜನಗಳು ಆಶ್ಟಿಶ್ಟಲ್ಲ.

    • Nange annisida prakara chlorophyll annodanna baLasode olledu. Irli yar hege beko haage barili. Avaravara ishta 🙂

      • ಕಾರ್ತಿಕ್ – ಅದು ಹೇಗೆ ಒಳ್ಳೆಯದು? ಪದವನ್ನು ನೋಡಿದಾಕ್ಷಣ ಅದು ಅರ್ತವನ್ನು ಕೊಡುವಂತಿದ್ದರೆ ಅದು ಹೇಗೆ ಕೆಟ್ಟದ್ದು?

        • giriyavare . nange chlorophyll anno padana thili harisu athava yelehasiru andre adu bari banna anno bhavane kodatte ansatte antha anisike. adakke chlorophyll na haage uLisikollodu olledu anta helde aste.

  8. Maaysa says:

    ನಾನೊಬ್ಬ ಬರಹಗಾರನಲ್ಲ. ನಾನೊಬ್ಬ technologist. ನನಗೆ ಕನ್ನಡದಲ್ಲಿ science & technology ಓದುವಾಗ, ಕಲಿಯುವಾಗ ಹಾಗು ಬರೆಯುವಾಗ, ಯಾವ ಬಗೆಯಲ್ಲಿ ಕನ್ನಡ ನುಡಿಯನ್ನು ಬಳಸಿದರೆ ನಾವು ಕನ್ನಡಿಗರಿಗೆ ಒಳ್ಳೆಯದು, ಎಂಬ ವಿಶಯದ ಕುರಿತು ನನ್ನ ಕೆಲವು ಅನಿಸಿಕೆಗಳು.

    ನಾನು ಯಾವುದರ ಪರವಲ್ಲ:

    ೧. ನಾನು ಈಗ ಇರುವ ‘ಸಂಸ್ಕ್ರುತ’ ತುಂಬಿದ science & technology ಬಗ್ಗೆಯ, ಪದಕೋಶವನ್ನು ಹಾಗು ಬರವಣಿಗೆಯನ್ನು ಬೆಂಬಲಿಸುವುದಿಲ್ಲ. ಅದು ಸರಿಯಲ್ಲ. ಅದರಿಂದ science & technology ಅರಿತುಕೊಳ್ಳುವುದು ಸಲೀಸಲ್ಲ.

    ೨. ಹಾಗೆ ‘ಎಲ್ಲರ ಕನ್ನಡ’ ಎಂಬ ನೆಪದಲ್ಲಿ ಅಪಕ್ವವಾದ ಪದಗಳನ್ನು ಹೊಸದಾಗಿ ಹುಟ್ಟಿಸಿ, ಪದಕೋಶವನ್ನು ತುಂಬಿ, ಅದನ್ನು ಬಳಸುವುದು ಅನುಕೂಲವಲ್ಲ.

    Science & technologyಗೆ ಮಹತ್ವವಾದ ಇಂಗ್ಲಿಶ್:

    ೧. ಇವೊತ್ತು science & technologyಅಲ್ಲಿ ಹೇರಳವಾಗಿ ಇಂಗ್ಲಿಶ್-ಅಲ್ಲಿ ಬರವಣಿಗೆ ಸಿಗುವುದು.
    ೨. ಜಗತ್ತಿನ ಹೆಸರುವಾಸಿ research institute-ಗಳು ಇಂದು ಇಂಗ್ಲಿಶ್ ಬಳಸುತ್ತಿವೆ. Italy, Germany, Sweden, Norway, Finland, Austria, Switzerland ಮುಂತಾದೆಡೆ ಇಂಗ್ಲಿಶ್ ನುಡಿಯಲ್ಲಿ science & technology ಬಗ್ಗೆಯ ಬರಹಗಳು ಬರುತ್ತಿವೆ. ಆ ಆ ದೇಶದ ನುಡಿಗಳಲ್ಲಿ ಇಂತಹ ಬರಹಗಳು ಕಡಮೆಯಾಗಿವೆ. ಇದನ್ನು Sweden ಅಲ್ಲಿ ನಾನು ಕಣ್ಣಾರೆ ಕಂಡಿದ್ದೀನಿ. ನಾನು Swedenಅಲ್ಲೇ ನನ್ನ Masters ಇಂಗ್ಲಿಶಿನಲ್ಲಿ ಮುಗಿಸಿ, ಇಂಗ್ಲಿಶಿನಲ್ಲೇ ಕೆಲಸ ಮಾಡುತ್ತಿರುವುದು.

    ನನ್ನ ಪ್ರಕಾರ ಹೆಂಗೆ :

    ೧. ಕನ್ನಡದಲ್ಲಿ science & technology ಬಗ್ಗೆಯ ಬರಹಗಳಲ್ಲಿ terminologyಗಳು ಇಂಗ್ಲೀಶಿನಲ್ಲಿ ಇರುವುದೇ ಬಳಕೆಯಾಗಲಿ .
    ಮಾದರಿ. Computer ಎಂಬ deviceನಲ್ಲಿ ಈ ಕೆಳಗಿನ ಬಾಗಗಳು ಇರುತ್ತವೆ:
    ೧. Input deviceಗಳು
    ೨. Output deviceಗಳು … ಇತ್ಯಾದಿ.

  9. Mahesh Bhat says:

    ಮಾಯ್ಸರವರೇ,
    ನೀವು ಬಳಸಿದ ತಾಂತ್ರಿಕ ಪದಗಳಲ್ಲಿ ಇಂಗ್ಲಿಷ್ ಮೂಲದ ಪದಗಳು input ಮತ್ತು output ಎಂಬವುಗಳು ಮಾತ್ರ. (ಇಂಗ್ಲಿಷ್ ಭಾಷೆಗೆ ಇಂಗ್ಲಿಷ್ ಮೂಲದ ಪದಗಳನ್ನು ಕಟ್ಟುವ ಚಳುವಳಿಯ ಭಾಗವಾಗಿರಬಹುದು! ). ಉಳಿದ science, technology, research, computer, device,terminology ಇತ್ಯಾದಿ ಪದಗಳು ಲ್ಯಾಟಿನ್ ಮೂಲದವುಗಳು ಮತ್ತು ಅವುಗಳು ನೀವು ಮೇಲೆ ತಿಳಿಸಿದ ಹಲವಾರು ಭಾಷೆಗಳಲ್ಲಿ ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಪ್ರಯೋಗಿಸಲ್ಪಡುತ್ತಿವೆ. ಇರಲಿ, ಆ ಪದಗಳು ನಮಗೆ ಇಂಗ್ಲಿಷ್ ಭಾಷೆಯಿಂದ ಪರಿಚಿತವಾಗಿರುವುದರಿಂದ ನಾವು ಅವುಗಳನ್ನು ಇಂಗ್ಲಿಷ್ ಪದಗಳೆಂದೇ ಕರೆಯೋಣ.

    ಹಿಂದೆ ಯುರೋಪಿನ ನಾಡುಗಳಲ್ಲಿ ಜ್ಞಾನವೆಂಬುದು ಎಲೈಟ್ ವರ್ಗದ ಭಾಷೆಯಾದ ಲ್ಯಾಟಿನ್ ಭಾಷೆಯಲ್ಲಿತ್ತು. ಯುರೋಪಿನಲ್ಲಿ ನಡೆದ ಪುನರುತ್ಥಾನದ ನಂತರ ಯುರೋಪಿನ ಹಲವಾರು ಭಾಷೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಲ್ಯಾಟಿನ್ ನಿಂದ ಜನರಾಡುವ ಭಾಷೆಗಳಲ್ಲಿ ಬಹಳ ಪರಿಶ್ರಮದಿಂದ ಬಳಕೆಗೆ ತಂದರು. ಆ ಬಳಿಕ ವಿಜ್ಞಾನ ಮತ್ತು ತಂತ್ರ್ರಜ್ಞಾನಗಳಲ್ಲಿ ಕ್ಷಿಪ್ರಗತಿಯ ಬೆಳವಣಿಗೆಯಾಗಿದ್ದನ್ನು ನಾವು ಕಂಡಿದ್ದೇವೆ. ಇಂದು ಉನ್ನತ ಶಿಕ್ಷಣವನ್ನು ಜನರಾಡುವ ಭಾಷೆಯನ್ನು ಬಿಟ್ಟು ಇಂಗ್ಲಿಷ್ ಭಾಷೆಯಲ್ಲಿ ಬಳಕೆಗೆ ತರುತ್ತಿರುವದೂ ಸತ್ಯ. ಆ ನಾಡುಗಳಲ್ಲಿ ಮೊದಲು ಲ್ಯಾಟಿನ್ ಆಕ್ರಮಿಸಿದ ಎಲೈಟ್ ಭಾಷೆಯ ಸ್ಥಾನವನ್ನು ಈಗ ಇಂಗ್ಲಿಷ್ ಪಡೆಯುತ್ತಿದೆಯೇ ?

    ನೀವು ಹೇಳಿದ ಎರಡನೇ ಅಂಶವನ್ನು ಅನುಸರಿಸಿಯೇ ಭಾರತದಂತಹ ದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಇಂಗ್ಲಿಷ್ ನಲ್ಲಿಯೇ ಇಡಲಾಗಿದೆ. ಇಂಗ್ಳಿಷ್ ನಲ್ಲಿ ಅಪಾರವಾದ ಜ್ಞಾನವಿದೆ ಮತ್ತು ಇಂಗ್ಲಿಷ್ ನಲ್ಲಿ ನಮ್ಮ ಜ್ಞಾನವನ್ನು ವ್ಯಕ್ತಪಡಿಸಿದರೆ ಅಪಾರವಾದ ಜನರಿಗೆ ನಮ್ಮ ಜ್ಞಾನವನ್ನು ಶೀಘ್ರ ತಲುಪಿಸಬಹುದು ಎಂಬ ಕಾರಣಗಳನ್ನು ನೀಡಲಾಗಿದೆ. ಭಾರತದಲ್ಲಿ ನಡೆಯುವ ನಾವು ಮೊದಲಿನಿಂದಲೂ ಅನುಸರಿಸಿದ ಕ್ರಮವನ್ನು ಈಗ ಯುರೋಪಿನ ಯುನಿವರ್ಸಿಟಿಗಳು ಅರಿತುಕೊಂಡು ಅನುಸರಿಸಲು ಪ್ರಯತ್ನಿಸಿದ ಹಾಗೆ ಆಯ್ತು. ನಮ್ಮ ಭಾರತ ದೇಶದ ವೈಜ್ಞಾನಿಕ ಸಂಶೋಧನೆಗಳ ಮಟ್ಟ ಜಾಗತಿಕವಾಗಿ ಯಾವ ಸ್ಥಾನದಲ್ಲಿದೆ ಎಂಬುದನ್ನು ನೀವೇ ತಿಳಿಸಿಕೊಡಬೇಕು. ಜಾಗತೀಕರಣದಿಂದ ಇಂಗ್ಲಿಷ್ ಜನಾರಾಡುವ ನುಡಿಯಾಗಿ ಬದಲಾಗುತ್ತಿದೆ ಎಂದೇ ಅಂದುಕೊಳ್ಳೋಣ. ಒಂದು ಕಾಲದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಯುರೋಪಿನ ಯುನಿವರ್ಸಿಟಿಗಳು ತಮ್ಮ ಸಂಶೋಧನಾ ಭಾಷೆಯನ್ನು ಇಂಗ್ಲಿಷಿಗೆ ಬದಲಾಯಿಸಿದ ಮೇಲೆ ತಮ್ಮ ಮುಂದಾಳ್ತನವನ್ನು ಕಾಯ್ದುಕೊಳ್ಳುತ್ತವೆಯೇ ಎಂಬುದನ್ನು ಕಾಲವೇ ತಿಳಿಸಿಕೊಡಬೇಕು.

  10. Voir dire vs Q&A,
    “Any lawers in the house? what do you called Q&A? Q&A got some other name that obscures it. what? “voir dire”! You could have just called it Q&A?! But you didn’t. Because you want people to think what you do is complicated. You should take ques from astrophysicists. What do we call spots on the sun?….. SUN SPOTs..thank you. What do we call big red stars?…..RED GIANTS……Regions of space you fall you don’t come back, light doesn’t?…. BLACK HOLE… Origine of space time everything?… BIG BANG!! We are simple people in astrophysics. The universe is complex enough. We are not going to lay down a lexicon to make you think what we are doing is more complex than it actually is. – Dr. Neil deGrasse Tyson (Astrophysicist).
    https://www.youtube.com/watch?v=9Y-lqO1dnX4

girigowda2003 ಗೆ ಅನಿಸಿಕೆ ನೀಡಿ Cancel reply

%d bloggers like this: