“ನಾನು ಎಲ್ಲಿದ್ದೆನಮ್ಮ, ಎಲ್ಲಿಂದ ನನ್ನ ಕರೆತಂದೆ?”

krishna

ಇಂಗ್ಲಿಶ್ ಮೂಲ: ರಬೀಂದ್ರನಾತ ಟಾಕೂರ
ಎಲ್ಲರಕನ್ನಡಕ್ಕೆ: ಶಶಿಕುಮಾರ್

“ನಾನು ಎಲ್ಲಿದ್ದೆನಮ್ಮ, ಎಲ್ಲಿಂದ ನನ್ನ ಕರೆತಂದೆ?” ಎಂದು ಮಗು ತನ್ನ ತಾಯ ಕೇಳಿತು.
“ನೀನೆನ್ನ ಎದೆಯಲಿ ಬಯಕೆಯಾಗಿದ್ದೆ ಕಂದಾ” ಎಂದು ಅರೆ ಅಳುನಗುವಿನಲಿ ತಾಯಿ ಮಗುವ ಎದೆಗಪ್ಪಿದಳು.
ಕಂದಾ, ನೀನೆನ್ನ ಎಳವೆಯಲ್ಲಿ ಆಟದ ಗೊಂಬೆಗಳಲ್ಲಿದ್ದೆ.
ದಿನವೂ ನಾ ಮಣ್ಣಲಿ  ನನ್ನ ದೇವರ ಮೂರುತಿ ಮಾಡುತ್ತಿದ್ದೆ. ಆಗ ಅರೆಬರೆಯ ನಿನ್ನನ್ನೂ ಮಾಡಿದ್ದೆ.
ನೀನೆನ್ನ ಮನೆದೇವರೊಂದಿಗೆ ಮನೆ ಮಾಡಿದ್ದೆ, ಆ ದೇವರೊಂದಿಗೆ ನಿನ್ನನೂ ಪೂಜಿಸುತಿದ್ದೆ.
ನನ್ನ ಜೀವನದೆಲ್ಲ ನಂಬಿಕೆ ಪ್ರೀತಿಗಳಲಿ, ನನ್ನ ತಾಯಿಜೀವನದಲಿ ನೀನು ಜೀವಿಸಿದ್ದೆ.
ನನ್ನ ಮನೆಯಾಳುವ ಸಾವಿರದ ಚೇತನದ ಮಡಿಲಲಿ ನೀ ಕಾಲದಿಂದಲೂ ಬೆಚ್ಚಗಿದ್ದೆ.
ನನ್ನ ಮನವು ಹುಡುಗಿತನದಿ ತನ್ನ ದಳಗಳನರಳಿಸಿ ನಗುವಾಗ, ನೀನದರಿಂದ ಕಂಪಾಗಿ ಹೊಮ್ಮಿದ್ದೆ.
ನನ್ನ ಹದಿಹರಯದ ಕಯ್ಕಾಲ್ಗಳಲಿ ನಿನ್ನ ನಸುನವುರುತನ ಅರಳಿತ್ತು, ನೇಸರನುದಯಕೆ ಮುನ್ನ ಆಗಸವು ಹೊಳೆವಂತೆ.
ನಾಕದಾ ಮೊದಲ ಪ್ರೇಮವೆ ನೀನು, ಬೆಳಗಿನಾ ಬೆಳಕಿನೊಂದಿಗೆ ಮರಳಿ ಹುಟ್ಟಿರುವೆ ನೀನು,
ಜಗದ ಜೀವದ ಜರಿಯಲಿ ಹರಿದಿರುವೆ ನೀನು,
ಕಡೆಗಿಂದು ಬಂದು ನನ್ನೆದೆಯಲಿ ನೆಲೆಸಿರುವೆ.
ನಿನ್ನ ಮೊಗವನು ದಿಟ್ಟಿಸುವಾಗ, ನೀನು ಎಂತದೋ ಗುಟ್ಟಾಗಿ ಕಾಡುವೆ.
ಎಲ್ಲರಿಗೂ ಸೇರಿದ ನೀನು ಇಂದು ನನ್ನದಾಗಿರುವೆ.
ನಿನ್ನ ಕಳೆದುಕೊಳ್ಳುವಂಜಿಕೆಯಲಿ ನನ್ನೆದೆಗೆ ಬಿಗಿದಪ್ಪಿರುವೆ.
ನನ್ನ ಸಣ್ಣ ತೋಳಿನಲಿ ಜಗದ ಈ ಕಡವರವ ಹಿಡಿದಿಟ್ಟ ಆ ಮಾಟ ಯಾವುದು?

(ಚಿತ್ರ: http://www.iskcondesiretree.net)

ನಿಮಗೆ ಹಿಡಿಸಬಹುದಾದ ಬರಹಗಳು

5 Responses

 1. cennaagi muudi bandide.congrats honalu tanadakkuu shashikumaar guu!

 2. ಓದಿ,, ಅಮ್ಮ ನೆನಪಿಗೆ ಬಂದ್ಲು.. ತುಂಬಾ ಚೆನ್ನಾಗಿದೆ..

 3. Shashi Kumar says:

  ಮೆಚ್ಚಿದ್ದಕ್ಕೆ ನನ್ನಿ, ಗಿರಿಧರ್ ಸರ್ ಮತ್ತು ವಸಂತ್.

 4. chetanjeeral says:

  ತುಂಬಾ ಚೆನ್ನಾಗಿದೆ…

 5. vivekshankar153 says:

  ತುಂಬಾ ಚೆನ್ನಾಗಿದೆ.

ಅನಿಸಿಕೆ ಬರೆಯಿರಿ: