ಕಾಡುವುದು ನಿನ್ನ ನೆನಪು

– ಬರತ್ ಕುಮಾರ್.

lonely-biker-a28244132

ನಿನ್ನ ನೆನಪು
ಕಾಡುವುದು ಕಡಲಾಗಿ
ಮೂಡುವುದು ಒಡಲಲ್ಲಿ
ಅಲೆಗಳಾಗಿ ನಿನ್ನ ನೆನಪು

ತೋಡಿಕೊಳಲೆನ್ನ ಬೇನೆ
ಆಡಿಕೊಳ್ವರು ಜನರು
ಕೂಡುವುದಕೆ ನೀನಿಲ್ಲದೆ
ಕಾಡುವುದು ನಿನ್ನ ನೆನಪು

ಬೆರಳ ತುದಿಗಳೆನ್ನ
ನಿನ್ನನೆ ನೆನೆಯುತಿಹವು
ನಿನ್ನ ಸೋಕಲು ಕಾಯುತಿಹವು
ಕಾಡುವುದು ನಿನ್ನ ನೆನಪು

ಎದೆಯ ಬಾಗಿಲಿನಲ್ಲಿ
ಒಣತೋರಣವಿನ್ನು ಬಾಡಿ
ತಿಣುಕಾಡಿದೆ ಹಸಿರೊಲ್ಮೆಗೆ
ಕಾಡುವುದು ನಿನ್ನ ನೆನಪು

ಕೊಂಡೊಯ್ದೆ ನೀ ಎನ್ನ
ಬಾಳ ತಿರುಳುಗಳನ್ನ
ಮರುಳನಾಗಿಸಿ ನಿನ್ನೊನಪಿಗೆ
ಕಾಡುವುದು ನಿನ್ನ ನೆನಪು

ತಿರುವುಗಳೇ ಬಾಳೆಲ್ಲ
ಕುರುಹಗಳಿಲ್ಲ ನೆಮ್ಮದಿಯ
ವಿರಹದ ಬೇಗೆಯಲಿ
ಕಾಡುವುದು ನಿನ್ನ ನೆನಪು

(ಚಿತ್ರ: www.nesaftp.it)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಚೆನ್ನಾಗಿದೆ…ಚೆನ್ನಾಗಿದೆ… ಆದರೆ, ನಿಮಗೆ ಕಾಡುತ್ತಿರುವುದು ಯಾರ ನೆನಪು ಮಾರಾಯ್ರೆ? 😉

  2. ybharath77 says:

    ಯಾರ ನೆನಪು ಅಂತ ಹೇಳಿದರೆ ಅಶ್ಟು ಚೆನ್ನಾಗಿರುವುದಿಲ್ಲ. 🙂

ಅನಿಸಿಕೆ ಬರೆಯಿರಿ: