ನಿನ್ನ ಕನಸು

– ಬರತ್ ಕುಮಾರ್.

walkingman

ನಿನ್ನ ಕನಸ ಹೆರಲು
ನಾನ್ಯಾವ ಸೊಗಸ ಕೂಡಲಿ
ನಿನ್ನ ನನಸಿನಲ್ಲೇ
ನೆನೆದಿರುವಾಗ
ಕನಸು ಕನಸಿನೊಂದಿಗೇ
ಕನಲಿರುವಾಗ
ಕಲೆತು ಮಾತಾಡಲು
ನಿನ್ನ ನೆನಪಿನ ದನಿಗೂಡಿದಾಗ
ನಿನ್ನ ಮೊಗವೇ
ಕಣ್ಣಕುರ‍್ಚಿಯಲಿ ಕೂತಿರುವಾಗ
ನಿನ್ನ ದನಿ
ಕಿವಿತಮಟೆಯ ಬಾರಿಸುತ್ತಿರುವಾಗ
ನಿನ್ನ ಕನಸ ಹೆರಲು
ನಾನ್ಯಾವ ಸೊಗಸ ಕೂಡಲಿ

(ಚಿತ್ರ: whatislove-2010.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಬರತ್, ಸೊಗಸಾಗಿದೆ. “ಕಣ್ಣಕುರ್ಚಿಯಲಿ” ಕೂತಿರುವಾಗ… ನೀವು ಹೆರುವ ಮಾತಾಡಿರುವುದರಿಂದ ನಿಮ್ಮದು “ಹೆಂಗರುಳು” ಎಂದುಕೊಂಡಿದ್ದೇನೆ. ನೀವು ಹೆಸರು ಹಾಕಿರದಿದ್ದರೆ, ನಮ್ಮ ಪಂಡಿತರು ಇಲ್ಲಿ “ಹೆರುವ” ಮಾತು ಬಂದಿರುವದರಿಂದ ಇದನ್ನು ಬರೆದಿರುವದು ಹೆಣ್ಣೇ ಇರಬೇಕು ಎಂದಿರುತ್ತಿದ್ದರು. ಈಗ ನಿಮ್ಮನ್ನು “ಫೆಮಿನಿಸ್ಟ್” ಕವಿ ಎಂದು ಕರೆದಾರು ಎಚ್ಚರ! 😉

    ನೀವು ಆದಶ್ಟು ಬೇಗ ಸೊಗಸನ್ನು ಕೂಡಿ ಕನಸನ್ನು ಹೆರುವಂತಾಗಲಿ… ಹೊನಲಿನಲ್ಲಿ ನಾವದನ್ನು ನೋಡುಂತಾಗಲಿ… 🙂

  2. ybharath77 says:

    ಶಶಿ,
    ಕನಸನ್ನು ಹೆರಲು ಗಂಡಾದರೇನು? ಹೆಣ್ಣಾದರೇನು? ಸೊಗಸನ್ನು ಕೂಡಬೇಕಶ್ಟೇ? 🙂

    ಒಂದು ವೇಳೆ ‘ಹೆಂಗರುಳಿನ’ ಕಬ್ಬಿಗ ಅಂದರೆ ಅದನ್ನು ಹೊಗಳಿಗೆ ಎಂದು ಬಾವಿಸುವೆ.

    ನನ್ನಿ,
    ಬರತ್

ಅನಿಸಿಕೆ ಬರೆಯಿರಿ: