ಅವನೇ ಗಂಡು

Mayura-DVD-Screenshot-6

ಇಂಗ್ಲಿಶ್ ಮೂಲ: ಪರ‍್ಹಾನ್ ಅಕ್ತರ್
ಎಲ್ಲರಕನ್ನಡಕ್ಕೆ: ಶಶಿಕುಮಾರ್

ಯಾರ ಕಣ್ಣುಗಳು ದಿಟತನದಿಂದ ಹೊಳೆಯುವವೋ,
ಯಾರ ನಡೆವಳಿಕೆ ಕುಂದನ್ನು ಹೊಂದಿಲ್ಲವೋ,
ಯಾರ ನಡತೆ ಮೆಚ್ಚತಕ್ಕವಂತಿದೆಯೋ,
ಯಾರ ಮಾತುಗಳು ದಿಟವಾದರೂ ನಯವಾಗಿವೆಯೋ,
ಯಾರೆದೆಯಲ್ಲಿ ತಕ್ಕಮೆಯಿದ್ದು, ಮಾಡುವ ಕೆಲಸ ಮನ್ನಣೆ ತರುವುದೋ,
ಯಾರು ಹೆಣ್ಣಿನ ಮಯ್ಮನಆಳ್ತನಕ್ಕೆ ಮನ್ನಣೆ ನೀಡುವನೋ,
ಯಾರು ಹೆಣ್ಣು ತನ್ನ ಹಿರಿಮೆಯೊಂದಿಗೆಂದೂ ರಾಜಿ ಮಾಡಿಕೊಳ್ಳದಂತೆ ಕಾಪಾಡುವನೋ,
ಯಾರು ಹೆಣ್ಣು ಕೂಡ ತನ್ನ ಹಾಗೆಯೇ ಒಂದು ಜೀವ ಎನ್ನುವದ ಮರೆಯುವುದಿಲ್ಲವೋ,
ಯಾರಲ್ಲಿ ಅಪ್ಪಟತನವಿದೆಯೋ,
ಯಾರಲ್ಲಿ ಬಲ ಮತ್ತು ಕುಂದದ ಕೆಚ್ಚಿದೆಯೋ,
ಯಾರು ಒಡನಾಡಿ, ಗೆಳೆಯ ಮತ್ತು ನಂಬಿಗಸ್ತನಾಗಿರುವನೋ,
ಅವನೇ ಗಂಡು.

ಶಶಿಕುಮಾರ್

(ಚಿತ್ರ: www.kannadastore.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: