ಕಯ್ದೋಟದ ಕಿವಿಮಾತು

lakewold_gardens_washington_600x

ಕಯ್ದೋಟವನ್ನು ಬೆಳೆಸುತ್ತಿದ್ದೀರಾ? ಬೆಳೆಸಲು ಹೊರಟಿದ್ದೀರಾ? ಈ ಅಂಶಗಳನ್ನು ಗಮನಿಸಿ:

  1. ಗಿಡಗಳನ್ನು ನೆಡಲು, ಅವುಗಳ ಪೋಶಣೆ ಮಾಡಲು ತುಂಬಾ ತಾಳ್ಮೆ ಬೇಕು.
  2. ಮೆಣಸಿನಕಾಯಿ ಗಿಡಕ್ಕೆ ಬರುವಶ್ಟು ಹುಳದ ಕಾಟ ಬೇರೆ ಯಾವ ಗಿಡಕ್ಕೂ ಬಾರದು.
  3. ನಂದಿಬಟ್ಟಲು ಗಿಡಕ್ಕೆ ಒಂದು ರೀತಿ ವಿಶೇಶ ಕೀಟ ಬರುತ್ತೆ. ಡ್ರಾಗನ್ ಮಾತ್ ಇರಬೇಕು. ಅದು ಬಂದರೆ, ಗಿಡದ ಎಲ್ಲ ಎಲೆಗಳೂ ಮಾಯವಾಗುತ್ತದೆ.
  4. ಶ್ಯಾಮಂತಿಗೆ ಗಿಡದಲ್ಲಿ ಮೊಗ್ಗುಗಳು ಬೇಗ ಬಂದುಬಿಡುತ್ತವೆ. ಆದರೆ ಅವು ಹೂವಾಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ.
  5. ಕರಣಕುಂಡಲ ಗಿಡ ಒಮ್ಮೆ ನೆಟ್ಟರೆ, ಅದು ಹೂವು ಬಿಟ್ಟು, ಬೀಜಗಳು ಸಿಡಿದು ತುಂಬಾ ಹರಡುತ್ತವೆ. ಸಸಿಗಳು ಎಲ್ಲೆಲ್ಲೂ ಬೆಳೆದಿರುತ್ತವೆ. ಅವುಗಳನ್ನು ಸರಿಯಾಗಿ ಕ್ರಮದಲ್ಲಿ ನೆಟ್ಟರೆ ನೋಡಲು ಅಂದವಾಗಿರುತ್ತದೆ.
  6. ಗಿಡಗಳನ್ನು ಕುರಿಗಳಿಂದ ಕಾಪಾಡುವುದು ತುಂಬಾನೇ ಕಶ್ಟದ ಕೆಲಸ. ಈ ಕುರಿಗಳಿಗೆ ಬೇವಿನ ಗಿಡವು ಅತ್ಯಂತ ಪ್ರಿಯ.
  7. ಆಡು ಮುಟ್ಟದ ಸೊಪ್ಪೆಂದರೆ, ಕಣಗಲೆ ಮತ್ತು ಹೊಂಗೆ.
  8. ಜಾಜಿಗಿಡ ಸ್ವಲ್ಪ ದೊಡ್ಡದಾದ ಮೇಲೆ ಮನೆಯೆಲ್ಲ ಸುವಾಸನೆ ಬೀರುತ್ತದೆ.
  9. ಪಾರಿಜಾತ ಹೂವುಗಳು ಬೇಕೆಂದರೆ, ಬೆಳಗ್ಗೆ ಬೇಗನೇ ಎದ್ದು ಆರಿಸಿಕೊಳ್ಳಬೇಕು. ಇಲ್ಲವಾದರೆ ಎಲ್ಲವೂ ಉದುರಿ ಹೋಗುವುದು. ಅಶ್ಟೇ ಅಲ್ಲ, ತುಂಬಾ ಬೇಗ ಒಣಗಿಹೋಗುವುದು.
  10. ಲೋಳೆಸರ, ವರ್‍ಶಕ್ಕೋ ಏನೋ ಒಮ್ಮೆ, ಒಂದು ರೀತಿಯ ವಿಶೇಶವಾದ ಹೂವನ್ನು ಬಿಡುತ್ತದೆ.
  11. ಕೆಲವು ಅಲಂಕಾರಿಕ ಗಿಡಗಳನ್ನು ಬಿಸಿಲಿನಲ್ಲಿ ಇಡಬಾರದು.
  12. ಸ್ಪಟಿಕ ಗಿಡವೂ ಕೂಡ ಕರಣಕುಂಡಲದಂತೆ ಸಿಕ್ಕಾಪಟ್ಟೆ ಬೀಜ ಸಿಡಿಯುವುದು.
  13. ತುಂಬೆ ಗಿಡ ತುಂಬಾ ಸೂಕ್ಶ್ಮ.
  14. ಕಯ್ದೋಟದಲ್ಲಿ ಹುಳಗಳು ಹೆಚ್ಚಾದರೆ, ಹಕ್ಕಿಗಳ ಚಿಲಿಪಿಲಿಯೂ ಹೆಚ್ಚಾಗುತ್ತದೆ.
  15. ಒಂದು ವೇಳೆ, ನೆಲದಲ್ಲಿ ಹಾಕಿರುವ ಗಿಡಗಳಿಗೆ ಮೂರು ದಿನ ನೀರು ಹಾಕದಿದ್ದರೂ ಪರವಾಗಿಲ್ಲ, ಆದರೆ ಪಾಟುಗಳಲ್ಲಿರುವ ಗಿಡಗಳಿಗೆ ಪ್ರತಿದಿನವೂ ನೀರು ಹಾಕಲೇಬೇಕು.
  16. ವೀಳ್ಯದ ಎಲೆ ಗಿಡ ಹೇಗೆ ಬೆಳೆಸಬೇಕು ಎಂಬುದು ತಿಳಿಯುತ್ತಲೇ ಇಲ್ಲ.
  17. ಎಕ್ಕದ ಗಿಡದಲ್ಲಿಯೂ ಕಾಯಿ ಬಿಡುತ್ತದೆ.
  18. ಕ್ಯಾರೆಟ್ ಬೀಜಗಳನ್ನು ಹಾಕಿದರೆ, ಅವುಗಳ ನಡುವೆ ಸರಿಯಾದ ಅಂತರವಿರಬೇಕು.
  19. ಯಾವುದಾದರು ಹೂವಿನ ಸಸಿಯನ್ನೋ, ಅತವಾ ಗೆಡ್ಡೆಯನ್ನೋ ನೆಟ್ಟರೆ, ಮಣ್ಣಿನಲ್ಲಿ ಸಸಿಯ ಸುತ್ತ, ಅತವಾ ಗೆಡ್ಡೆಯ ಸುತ್ತ ತೆಂಗಿನ ನಾರನ್ನು ಹಾಕಬೇಕು.
  20. ಕರಿಬೇವಿನ ಗಿಡಕ್ಕೆ ಬೇರುಗಳಿಗೆ ಹುಳಿ ಮೊಸರನ್ನು ಹಾಕಿದರೆ ಒಳ್ಳೆಯದಂತೆ.

ಇವೆಲ್ಲವೂ ಸುಮ್ಮನೆ ಹಾಗೆ ಅವರಿವರಿಂದ ಕೇಳಿದ್ದು ಹಾಗು ಬರಿಗಣ್ಣಿಗೆ ಕಂಡುಬಂದಿದ್ದು.

ಸುನಿಲ್ ಜಯ್‍ಪ್ರಕಾಶ್

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ನಿಮ್ಮ ಬರಹ ಚೆನ್ನಾಗಿ ಮೂಡಿ ಬಂದಿದೆ. ನನ್ನಿ 🙂

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *