ಇರುಳು ಪಾಳಿಯ ನೋವುಗಳು

night-shift

ನಾಳ್ಗಳುರುಳುತಿವೆ ನೇಸರನ ನೋಡದೆ
ಇರುಳು ದುಡಿಯುವೆ ನಾ ನಿದ್ದೆ ಮಾಡದೆ

ನಾ ಮಲಗುವ ಹೊತ್ತು ಲೋಕಕ್ಕೆ ಮೂರನೇ ಜಾವದ ಸವಿ ನಿದ್ದೆ
ನೇಸರ ನೆತ್ತಿ ಮೇಲೆ ಬಂದ್ರು ನಾ ಹಾಸಿಗೆಲೇ ಇದ್ದೆ

ಸ್ವಲ್ಪ ಹೊತ್ತಿನ ನಿದ್ದೆಯಾಗೊ ಹೊತ್ತಿಗೆ ಗಂಟೆಯಾಗುತ್ತೆ ಎಂಟು
ಅಶ್ಟ್ರಲ್ಲೇ ಶುರುವಾಗುತ್ತೆ ಈ ಬೀದಿ ಮಾರಾಳಿಗಳ ನಂಟು

ಎದುರಿನ ಬೀದಿಯಲಿ ಒಬ್ಳು ಕೂಗ್ತಾಳೆ – ಸೊಪ್ಪು ಹಣ್ಣೂ ತರಕಾರೀ
ಮಗ್ಗಲು ಬೀದಿಲಿ ಮತ್ತೊಬ್ಬ – ಸೋಪಾ, ಕಾಟ್, ರಿಪೇರೀ

ಅಶ್ಟ್ರಲ್ಲಿ ನನ್ ನಿದ್ದೆಯಾಗಿರುತ್ತೆ ಪರಾರಿ
ಇವರ ಸುಪ್ರಬಾತದಿಂದ್ಲೇ ಮೊದಲಾಗುತ್ತೆ ನನ್ ದಿನಚರಿ

ಆಶಾ ರಯ್

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: