ಕಾಲಿ ಹಾಳೆ

Pad of Paper & Pen

ಬೀಸೊ ಗಾಳಿಗೆ ತೇಲಿ ಹೋದೆನು
ಆಲಿ ಮಳೆಯಲಿ ಹಿಮವು ನಾ
ಓಲೆಯಲಿ ನನ ಒಲವ ಸುರಿಸಲು
ನಿನ್ನ ನಗು ನಾನಾದೆನು
ಆ ನಗುವಿಗೆ ಸೆರೆಯಾದೆನು |ಪ|

ನನ್ನದೇ ಬಿಂಬದಿ ನನ್ನನೇ ನಾ ಹುಡುಕುವೆ
ನನ್ನೆದೆ ಮಿಡಿತದಿ ನಿನ್ನ ಮಾತೇ ಕೇಳುವೆ
ಕಾಡುತಲೆ ಇರುವ ಬಾವನೆಗಳನು
ಲೇಕನಿಯೊಳಗೆ ತುಂಬುತಲೆ ಇಹೆನು
ನೆನೆಯುತ ನಿನ್ನ ಮೊಗವನು
ಹೊಸದೊಂದು ಓಲೆಯ ಬರಿವೆನು
ನಾ ಹಳೆಯದೆಲ್ಲವ ಹರಿವೆನು |1|

ಕಲ್ಪನೆ ಮೀರಿದ ಕನಸೊಂದನು ಕಾಣುವೆ..!
ನಿನ್ನನೇ ನನ್ನೆಯ ಒಡತಿ ಎಂದು ಹಾಡುವೆ..!!
ಮನದ ಆಳದಲಿ…ಮೂಡುವ ಮಾತು
ಬೆರಳು ಮವ್ನದಲಿ…ಬರೆಯದೆ ಸೋತು
ಈ ಅಂತರಂಗವ ಹೇಳದೆ
ಬರಿ ಕಾಲಿ ಹಾಳೆಯು ಉಳಿದಿದೆ |2|

ಬೀಸೊ ಗಾಳಿಗೆ ತೇಲಿ ಹೋದೆನು
ಆಲೆ ಮಳೆಯಲಿ ಹಿಮವು ನಾ…
ನನ್ನ ಒಲವನು ನಿನಗೆ ಹೇಳದೆ
ಪದಗಳೇ ಪರಿತಪಿಸಿದೆ
ಪರಿಹರಿಸದೇ ಅಲೆದಾಡಿದೆ… |ಪ2|

ಶ್ರೀವತ್ಸ ಪ್ರಹಲ್ಲಾದ

(ಚಿತ್ರ: paper-pencil-pen.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: