ರುಚಿ ರುಚಿ ಮಯ್ಲಾರಿ ಮೀನ್ಕರಕು!
ಬೇಕಾಗುವ ಪದಾರ್‍ತಗಳು:
ಮೀನು – 1/2 ಕೆ.ಜಿ., ಅಚ್ಚಕಾರದ ಪುಡಿ – 5 ರಿಂದ 6 ಚಮಚ, ಅರಿಶಿಣ – 1/2 ಚಮಚ, ನಿಂಬೆರಸ/ವಿನೆಗರ್ – 1 ರಿಂದ 2 ಚಮಚ, ಚಿರೋಟಿ ರವೆ/ಸಣ್ಣರವೆ – 5 ರಿಂದ 6 ಚಮಚ, ಕರಿಯಲು ಎಣ್ಣೆ – 5 ರಿಂದ 6 ಚಮಚ, ಶುಂಟಿ-ಬೆಳ್ಳುಳ್ಳಿ ಅಂಟು (ಪೇಸ್ಟ್) – 1 ಚಮಚ, ರುಚಿಗೆ ತಕ್ಕಶ್ಟು ಉಪ್ಪು.
ಮಾಡುವ ಬಗೆ:
ಮೀನಿನ ತುಂಡುಗಳನ್ನು ಮೊದಲು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿನಲ್ಲಿ ಅಚ್ಚಕಾರದ ಪುಡಿ, ಅರಿಶಿಣ, ಶುಂಟಿ-ಬೆಳ್ಳುಳ್ಳಿ ಅಂಟು, ಉಪ್ಪು, ನಿಂಬೆರಸ/ವಿನೆಗರ್ ಹಾಕಿ 1 ರಿಂದ 2 ಸುತ್ತು (ನೆನಪಿಡಿ: ನೀರನ್ನು ಹಾಕಬಾರದು) ಆಡಿಸಿಕೊಳ್ಳಿ. ಆಡಿಸಿದ ಮಸಾಲೆಯನ್ನು ಮೀನಿನ ತುಂಡುಗಳಿಗೆ ಸವರಿ ಮುಕ್ಕಾಲು ಗಂಟೆಗಳ ಕಾಲ ಮಸಾಲೆ ಮೀನಿನೊಡನೆ ಬೆರೆಯಲು ಬಿಡಿ. ನಂತರ ಒಂದು ಪ್ಲೇಟಿನಲ್ಲಿ ಚಿರೋಟಿ ರವೆಯನ್ನು ಹರಡಿಕೊಂಡು ಮೀನಿನ ತುಂಡನ್ನು ಒಂದೊಂದಾಗಿ ರವೆಯಲ್ಲಿ ಉರುಳಿಸಿ, ರೊಟ್ಟಿ ಕಲ್ಲಿನ ಮೇಲೆ ಎಣ್ಣೆ ಸವರಿ ಸುಡಿ ಅತವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಕರಿಯಿರಿ.
ಅಶ್ಟೆ. ಬಿಸಿ ಬಿಸಿ “ಮಯ್ಲಾರಿ ಮೀನ್ಕರಕು” ರೆಡಿ! ಜಮಾಯಿಸಿ.
ಕನ್ನಡದ Fish ‘n’ chips ? 🙂
ಯಾವ ಬಗೆಯ ಮೀನು ಚೆನ್ನಾಗಿರುತ್ತೆ ಈ ಅಡುಗೆಗೆ ?
ನಮ್ಮೂರಲ್ಲಿ ‘lax/Salmon’ ಅಗ್ಗ ಹಾಗು ಚೆನ್ನಾಗಿರುತ್ತೆ ಅಂತೆ 🙂 !
ತುಂಬ ಚೆನ್ನಾಗಿದೆ.