ಜಗತ್ತಿನ ಅತ್ಯಂತ ಸಿರಿವಂತ ಆಟಗಾರ ಯಾರು?

ರಗುನಂದನ್.

Floyd-Mayweather-Jr.1

ಇಂಡಿಯಾದಲ್ಲಿ ಕ್ರಿಕೆಟಿಗರು ಬೇರೆ ಎಲ್ಲಾ ಆಟಗಳ ಆಟಗಾರರಿಗಿಂತ ಹೆಚ್ಚು ಹಣ ಪಡೆಯುತ್ತಾರೆಂಬುದು ಎಶ್ಟೊಂದು ಮಂದಿಗೆ ತಿಳಿದಿರುವ ವಿಶಯವಾಗಿದೆ. ಪುಟ್ಬಾಲ್ ನೋಡುವವರಿಗೆ ಇಂಗ್ಲಿಶ್ ಮತ್ತು ಸ್ಪಾನಿಶ್ ಲೀಗುಗಳಲ್ಲಿ ಕೋಟಿಗಟ್ಟಲೆ ಹಣ ವಹಿವಾಟು ಆಗುವುದು ಗೊತ್ತಿರುತ್ತದೆ. ಜಗತ್ತಿನೆಲ್ಲೆಡೆ ಬೇರೆ ಬೇರೆ ಆಟಗಳು ಸಾಕಶ್ಟು ಹೆಸರುವಾಸಿಯಾಗಿದ್ದು ಅವುಗಳಲ್ಲಿಯೂ ಆಟಗಾರರು ಸಾಕಶ್ಟು ದುಡ್ಡು ಸಂಪಾದಿಸುತ್ತಾರೆ. ಆದರೆ, ಇಂದು ಜಗತ್ತಿನಲ್ಲಿ ಅತೀ ಹೆಚ್ಚು ಹಣ ಗಳಿಸುವ ಆಟಗಾರ ಒಬ್ಬ ಬಾಕ್ಸರ್‍ ಎಂಬುದು ನಿಮಗೆ ಗೊತ್ತೇ?

ಇವನ ಹೆಸರು ಪ್ಲಾಯ್ಡ್ ಮೇವೆದರ್‍ (Floyd Mayweather), ಇವನ ದೇಶ ಅಮೇರಿಕಾ. ಕಳೆದ ವರುಶ ಇವನ ಒಟ್ಟು ಹಣದ ಗಳಿಕೆ 85 ಮಿಲಿಯನ್ ಡಾಲರ‍್ಗಳು, ಅಂದರೆ ರೂಪಾಯಿ ಮೊತ್ತದಲ್ಲಿ 471 ಕೋಟಿ. ಹೋಲಿಕೆಗಾಗಿ ಬೇರೆ ಬೇರೆ ಆಟಗಾರರ ಹಣದ ಗಳಿಕೆ ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ. ಗಳಿಕೆಯಲ್ಲಿ ಅವರು ಜಗತ್ತಿನ ಎಶ್ಟನೇ ಸ್ತಾನವನ್ನು ಪಡೆದಿದ್ದಾರೆ ಎಂಬುದು ಕೂಡ ಕೊಡಲಾಗಿದೆ.

ಪಟ್ಟಿಯಲ್ಲಿ ಸ್ತಾನ 

ಆಟಗಾರನ ಹೆಸರು

ಆಡುವ ಆಟ

ಗಳಿಕೆ

1

ಪ್ಲಾಯ್ಡ್ ಮೇವೆದರ್

ಬಾಕ್ಸಿಂಗ್

471 ಕೋಟಿ

3

ಟಯ್ಗರ್ ವುಡ್ಸ್

ಗಾಲ್ಪ್

329 ಕೋಟಿ

5

ರೋಜರ್ ಪೆಡರರ್

ಟೆನ್ನಿಸ್

292 ಕೋಟಿ

11

ಲಿಯೋನಲ್ ಮೆಸ್ಸಿ

ಕಾಲ್ಚೆಂಡು/ಪುಟ್ಬಾಲ್

216 ಕೋಟಿ

20

ಶೂಮಾಕರ್

ಪಾರ‍್ಮುಲಾ 1

166 ಕೋಟಿ

31

ಮಹೇಂದ್ರ ಸಿಂಗ್ ದೋನಿ

ಕ್ರಿಕೆಟ್

143 ಕೋಟಿ

78

ಸಚಿನ್ ತೆಂಡೂಲ್ಕರ್

ಕ್ರಿಕೆಟ್

103 ಕೋಟಿ

ಮಾಹಿತಿ ಸೆಲೆ: Forbes

(ಚಿತ್ರ: sportige.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: