ಒಂದು ಕಯ್ ಮಾಡಿ ನೋಡಿ: ಚಿಕ್ಕನ್ ಡ್ರಯ್
ಬೇಕಾಗುವ ಪದಾರ್‍ತಗಳು
ಚಿಕನ್ – 500 ಗ್ರಾಮ್
ಕಸೂರಿ ಮೇತಿ (ಒಣಗಿದ ಮೆಂತೆ ಸೊಪ್ಪು) – 3 ಟೀ ಚಮಚ
ವಿನೇಗರ್ – 3 ಟೀ ಚಮಚ
ಎಣ್ಣೆ – 3-4 ಟೀ ಚಮಚ
ಹಸಿರು ಮೆಣಸಿನಕಾಯಿ – 6 (ಜಾಸ್ತಿ ಕಾರ ಇರುವಂತದ್ದು)
ಬೆಳ್ಳುಳ್ಳಿ – 1 ಗಡ್ಡೆ
ಶುಂಟಿ – 1/4 ಇಂಚು
ಸೋಯಾಸಾಸ್ – 1 ಟೀ ಚಮಚ
ಗರಂಮಸಾಲ ಪುಡಿ – 1/2 ಟೀ ಚಮಚ
ಮಾಡುವ ಬಗೆ
ಮೊದಲು ತೊಳೆದು ಸ್ವಚ್ಚ ಮಾಡಿದ ಚಿಕನ್ನಿಗೆ ರುಚಿಗೆ ತಕ್ಕಶ್ಟು ಉಪ್ಪು, ಅರಶಿನ ಪುಡಿ, ವಿನೇಗರ್, ಜಜ್ಜಿದ ಹಸಿರು ಮೆಣಸಿನಕಾಯಿ, ದಪ್ಪಗೆ ಜಜ್ಜಿದ ಶುಂಟಿ ಬೆಳ್ಳುಳ್ಳಿ ಹಾಕಿ ಕಲಸಿ 2 ರಿಂದ 3 ಗಂಟೆ ಇಡಬೇಕು. ಒಂದು ದಪ್ಪತಳದ ಪಾತ್ರೆಗೆ ಮೊದಲು ಎಣ್ಣೆ ಹಾಕಿ, ಸ್ವಲ್ಪ ಕಾದ ನಂತರ ಕಸೂರಿ ಮೇತಿ ಹಾಕಿ (ಗಮನವಿಡಿ ಕಸೂರಿ ಮೇತಿ ಸೀದುಹೊಗಬಾರದು). ಈಗ ನೆನೆಸಿ ಇಟ್ಟ ಕೋಳಿಮಾಂಸ ಹಾಕಿ ತಿರುಗಿಸಿ. ಕೋಳಿಮಾಂಸದಲ್ಲಿನ ನೀರು ಆರಿದ ನಂತರ ಅರ್‍ದ ಲೋಟದಶ್ಟು ನೀರು ಹಾಕಿ ಕುದಿಯಲು ಬಿಡಿ. ನೀರು ಆರಿದ ನಂತರ ಸೋಯಾಸಾಸ್ ಹಾಕಿ ಅರ್‍ದ ಚಮಚ ಗರಂಮಸಾಲ ಹಾಕಿ ತಿರುಗಿಸಿ. ನೀರು ಹಾಗು ಸೊಯಸಾಸ್ ಆರಿದ ನಂತರ, ಎಣ್ಣೆ ಮೇಲೆ ಬಂದ ಮೇಲೆ ರುಚಿ ನೋಡಿ (ಉಪ್ಪು ಬೇಕಾದರೆ ಸೇರಿಸಿ) ಇಳಿಸಿ. ಚಿಕನ್ ಡ್ರಯ್ ಸಿದ್ದ.
ಇತ್ತೀಚಿನ ಅನಿಸಿಕೆಗಳು