ಡಾಂಬರು ರಸ್ತೆ

ಅ.ರಾ.ತೇಜಸ್

_MG_4441

ನಿಲ್ಲದೆ ಸಾಗಿಹುದು ಡಾಂಬರು ರಸ್ತೆ
ದೂರದವರೆಗೂ, ಕಾಣದವರೆಗೂ
ದೇಶದ ಅರಾಜಕತೆ, ಬ್ರಶ್ಟತೆ,
ಕೋಮುವಾದಗಳ ಪ್ರತಿನಿದಿಸುವ
ಆ ಕಪ್ಪು ಬಣ್ಣ..

ಮಂದಿ ಸಾಗಿಹರು ಸಾವಿರಾರು
ಸಾಂಗತ್ಯ ಬೆಳೆದ ರಸ್ತೆಯೊಡನೆ
ಗಮ್ಯಸ್ತಾನದೆಡೆಗೆ ತೆರಳಿ
ಹೊರಟಿಹರು ದಾರಿಯನಿಡಿದು ಮರಳಿ
ಆ ರಸ್ತೆ ಒಬಂಟಿ, ಸೋತಿಹುದು ಕುಂಟಿ..

ದಿನದಿನದ ಅಪಗಾತ
ಮಿತಿಮೀರಿರುವ ಜನಗಳ ಸಂಜಾತ
ಕಂಡು ಕುರುಡಾಗಿಹುದು ಆ ರಸ್ತೆ
ಬಿದ್ದ ಹಳ್ಳ-ಕೊಳ್ಳದ ನಡುವೆ
ಮತ್ತದೆ ಮರು ಲೇಪನ –
ಅದೇ ಕಪ್ಪು ಬಣ್ಣ..

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.