ಹಸಿರು ಸೇಬಿನ ಚಟ್ನಿ

ಪ್ರೇಮ ಯಶವಂತ

IMG_8086

ಬೇಕಾಗುವ  ಪದಾರ್‍ತಗಳು:

ಹಸಿರು ಸೇಬು – 1

ಹಸಿ ಶುಂಟಿ  – ¼ ಇಂಚು

ಹಸಿ ಮೆಣಸಿನಕಾಯಿ – 2

ಬೆಳ್ಳುಳ್ಳಿ ಎಸಳುಗಳು – 4

ಕೊತ್ತಂಬರಿ ಸೊಪ್ಪು – 2 ಬಟ್ಟಲು

ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ

ತೊಳೆದ ಹಸಿರು ಸೇಬನ್ನು ಸಿಪ್ಪೆ ಸಮೇತವಾಗಿ ಹೆಚ್ಚಿಕೊಳ್ಳಿ. ಅದಕ್ಕೆ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಶುಂಟಿ ಹಾಗೂ ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿರಿ. ರುಚಿಯಾದ ಚಟ್ನಿಯನ್ನು ದೋಸೆ ಅತವ ಇಡ್ಲಿ ಜೊತೆಗೆ ಸವಿಯಿರಿ. ಇದೆ ರೀತಿ ಕೆಂಪು ಸೇಬಿನ ಚಟ್ನಿ ಮಾಡುವುದಾದರೆ ಕೆಂಪು ಸೇಬಿನ ಸಿಪ್ಪೆಯನ್ನು ತೆಗೆಯಲು ಮರೆಯದಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: