F1 ಕಾರುಗಳ ಪ್ರಪಂಚದಲ್ಲಿ ಹಣದ ಹೊಳೆ!

– ಕಾರ‍್ತಿಕ್ ಪ್ರಬಾಕರ್

F1 ಓಟದ ಮಾತು ಮುಂದುವರೆಸುತ್ತಾ, ಬಿರುಗಾಳಿಯಂತಹ ವೇಗದಲ್ಲಿ ಕಾರನ್ನು ಓಡಿಸಿ, ಪಯ್ಪೋಟಿಯನ್ನು ಗೆದ್ದು ಪಡೆದುಕೊಳ್ಳುವುದಾದರೂ ಏನು? ಇದಕ್ಕೂ ಮುನ್ನ ಕಾರು ತಯಾರಿಕೆಯಲ್ಲಿ ತಗಲುವ ಕರ‍್ಚು ಎಶ್ಟು? ತಿಳಿದಿಕೊಳ್ಳುವ ಬನ್ನಿ.

2006ರ ಸಾಲಿನಲ್ಲಿ 11 ಕಾರು ತಯಾರಕರು ಸೇರಿಸಿ ಕೊಟ್ಟಿರುವ ಮಾಹಿತಿಯ ಪ್ರಕಾರ ಒಟ್ಟಾರೆಯಾಗಿ 2.9 ಬಿಲಿಯನ್ ಅಮೇರಿಕಾದ ಡಾಲರ್‍’ಗಳು ಕರ‍್ಚಾಗಿದೆ. ಟೊಯೋಟಾ ಗುಂಪು 418.5 ಮಿಲಿಯನ್ ಡಾಲರ್‍ ಕರ‍್ಚು ಮಾಡಿದರೆ, ಪೆರಾರಿ ಅವರು 406.5 ಮಿಲಿಯನ್ ಡಾಲರ್‍ ಕರ‍್ಚು ಮಾಡಿ ಕರ‍್ಚಿನಲ್ಲಿ ಎರಡನೇ ಜಾಗದಲ್ಲಿದ್ದಾರೆ. ಮೆಕ್ಲಾರನ್ ಅವರು ನಾವೇನು ತೀರಾ ಹಿಂದೆ ಇಲ್ಲ ಎಂದು ಹೇಳಿ 402 ಮಿಲಿಯನ್ ಡಾಲರ್‍ ಕರ‍್ಚು ಮಾಡಿದ್ದರು.

ಇಶ್ಟೊಂದು ಕರ‍್ಚು ಮಾಡುವುದು ಎಲ್ಲಿಗೆ? ವಿವರವಾಗಿ ನೋಡಿದರೆ ತಿಳಿಯುವ ಅಚ್ಚರಿಯ ವಿಶಯವೇ ಬೇರೆ. 2.4 ಲೀಟರ್‍ ಅಳತೆಯ ಚಿಕ್ಕ ಬಿಣಿಗೆಯನ್ನು ತಯಾರು ಮಾಡಲಿಕ್ಕೆ ಶೇಕಡ 50% ಹಣ ಕರ‍್ಚಾಗುತ್ತದೆ ಎಂದರೆ ಅಚ್ಚರಿಯೇ ಸರಿ. ಕೆಳಗಿನ ಸುತ್ತುಪಟ್ಟಿಯ ಪ್ರಕಾರ ನೋಡಿದರೆ ಬಿಣಿಗೆ (engine) ಮತ್ತು ಅದರ ಕುರಿತಾದ ಅರಿಮೆಯ ಬೆಳವಣಿಗೆಗೆ ತಗಲುವ ಕರ‍್ಚು ಸರಾಸರಿಯಾಗಿ 60% ಅಶ್ಟು. ಮಿಕ್ಕ 40% ಹಣವನ್ನು ಇತರೆ ಕರ‍್ಚುಗಳಿಗೆ ತೂಗಿಸಲಾಗುತ್ತದೆ.

2000px-F1_team_budget_split.svg

ಇಶ್ಟೆಲ್ಲಾ ಕರ‍್ಚು ಮಾಡಿ ತಯಾರಿಸಿದ ಕಾರನ್ನು ಪಯ್ಪೋಟಿಯಲ್ಲಿ ಓಡಿಸಿ ಗೆಲ್ಲುವುದಾದರು ಏನು? ಕಟ್ಟ ಕಡೆಯದಾಗಿ ಸಿಗುವುದು ಅರಿಮೆಗೆ ಹಿರಿಮೆ ಹಾಗು ದುಡಿಮೆಗೆ ಹೆಸರು. ಇದರ ಜೊತೆಯಲ್ಲಿ ಬರುವುದು ಹಣ. ನೋಡುಗರನ್ನು ಅಚ್ಚರಿಯಂತೆ ಸೆಳೆದಿರುವ F1 ಪಯ್ಪೋಟಿಯು ಪ್ರಪಂಚದ ಸುಮಾರು 100 ದೇಶಗಳಲ್ಲಿ ಹೆಸರುವಾಸಿಯಾಗಿದೆ. 2008ರ ಅಂಕಿ ಅಂಶಗಳ ಪ್ರಕಾರ 600 ಮಿಲಿಯನ್ ಜನ ಪಯ್ಪೋಟಿಯನ್ನು ನೋಡಲು ಪಯ್ಪೋಟಿ ನಡೆಯುವ ಜಾಗಕ್ಕೆ ಹೋಗಿದ್ದರೆ, 54 ಬಿಲಿಯನ್ ಜನ ಮನೆಯಲ್ಲೇ ಕುಳಿತು ಟಿ.ವಿ. ಮೂಲಕ ನೋಡಿದ್ದಾರೆ.

ಹೀಗಿರುವಾಗ ಟಿ.ವಿ ಚಾನಲ್’ನವರು ಮುಗಿಬಿದ್ದು ತಂಡಗಳಿಗೆ ಬಯಲರಿಕೆಗಾಗಿ ಹಣ ಹರಿಸುತ್ತಿದ್ದಾರೆ. ಕಾರಿನ ಮೇಲೆ ಕಾಣುವ ತಿಟ್ಟ ಹಾಗು ಬಯಲರಿಕೆಯ ಹೆಸರುಗಳೇ ಇವಕ್ಕೆಲ್ಲಾ ಸಾಕ್ಶಿ. 2013ರ ಸಾಲಿನ ಪಯ್ಪೋಟಿಯಲ್ಲಿ ಪಾಲ್ಗೊಂಡಿರುವ ತಂಡಗಳ ಪಟ್ಟಿ ಇಂತಿದೆ.

tanDagaLu - Copy

tanDagaLu - Copy (2)

ಈ ವರುಶ ಗೆಲ್ಲುವವರು ಯಾರು? ಹೊಸದಾದ ಚಳಕ ಯಾರು ತೋರುವರು ಎನ್ನುವ ತವಕದಿಂದಲೇ ಈಗಾಗಲೆ 9 ದೇಶಗಳಲ್ಲಿನ ಪಯ್ಪೋಟಿಗಳು ಮುಗಿದಿದ್ದು ರೆಡ್ ಬುಲ್ ತಂಡವು 9 ಪಯ್ಪೋಟಿಗಳಲ್ಲಿ 4 ಗೆದ್ದು 250 ಅಂಕಗಳಿಸಿ ಮುಂಚೂಣಿಯಲ್ಲಿದೆ. ಅದೇ ತಂಡದ ಓಡಿಸುಗ ಸೆಬಾಸ್ಟಿಯನ್ ವೆಟ್ಟೆಲ್ 157  ಅಂಕಗಳನ್ನು ಗಳಿಸಿ ಈ ಸಾಲಿನ ಪಯ್ಪೋಟಿಯಲ್ಲಿ ಮೊದಲ ಜಾಗವನ್ನು ಪಡೆದಿದ್ದಾರೆ.

28ನೇ ಜುಲಯ್ ದಿನದೊಂದು “ಹಂಗೇರಿ”ಯಲ್ಲಿ ನಡೆಯುವ ಪಯ್ಪೋಟಿಯಲ್ಲಿ ಯಾರು ಗೆಲುವಿನಿಂದ ಕುಣಿಯುತ್ತಾರೋ ಕಾದು ನೋಡಬೇಕಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: