ಕಡಲ ಕರೆಯಲ್ಲಿ…

ಪುಟ್ಟರಾಜು.ಕೆ.ಎಸ್.

sini_gal_beach_23

ಕಡಲ ಕರೆಯಲ್ಲಿ ಬಾವನೆಗಳ ಬಾರವಾಗಿ ಕುಳಿತಿರುವೆ ನಾ
ಒಡಲ ದುಕ್ಕದ ಅಲೆಗಳಲಿ ತೇಲುತ ಅಳುತಿರುವೆ ನಾ
ಬಾ ಮತ್ತೆ ನನ್ನ ಬಾಳಲಿ ಬಂದೋಗು ಒಮ್ಮೆ ನನ್ನ ಕನಸಲಿ
ಜೀವ ಸವೆಯುವ ವರೆಗೂ ಕಾಯುತಿರುವೆ ನಾ                  | ಪಲ್ಲವಿ |

ಗಾಳಿಯ ಜೊತೆ ಸೇರಿ ಕಡಲು ಹನಿಯ ಚಿಮ್ಮಿದೆ ನನ್ನ ಮೇಲೆ
ನನ್ನ ಎಬ್ಬಿಸಿದೆ ನಿನ್ನ ನೆನಪು ಈ ಕಡಲ ತೀರದ ಮರಳಿನ ಮೇಲೆ
ನನ್ನ ಕಣ್ಣ ಮುಂದೆ ಹೊಳೆಯುತಿದೆ ನಿನ್ನ ಬಿಂಬದ ಹೊಳಪು
ನಂಬಲಾಗದೆ ಕನಸೆಂದು ನಗುತಿದೆ ನನ್ನ ಮನವು ನೆನೆಯುತ ನಿನ್ನ ಸವಿಯ ನೆನಪು   |1|

ನಿನ್ನ್ನ ಹ್ರುದಯದ ಬಡಿತವು ಸದ್ದು ಮಾಡುತಿದೆ ನನ್ನ ಕಿವಿಯಲ್ಲಿ
ನಿನ್ನ ಪ್ರೀತಿಯ ಕೂಗು ಮಾರ‍್ದನಿಸುತಿದೆ ನನ್ನ ಮನಸಲ್ಲಿ
ಎಚ್ಚರವಾಯಿತು ನನ್ನ ಮನಸ್ಸಿಗೆ
ನನಸಾಯಿತು ನನ್ನ ಕನಸು ಈ ನಿನ್ನ ಮನಸ್ಸಿನ ಪರಿವರ್‍ತನೆಗೆ   |2|

(ಚಿತ್ರ: http://universini.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications