’ಕನ್ನಡ ಲಿಪಿಯಲಿ ಏನಿದು ಸಂಸ್ಕ್ರುತ ಪದಗಳ ಮೆರವಣಿಗೆ?!’ – ಕೆ.ಎಸ್.ನ.

– ಬರತ್ ಕುಮಾರ್.

KSNa

ಕನ್ನಡದಲ್ಲಿ ಬರಹ ಹುಟ್ಟಿದಾಗಿನಿಂದಲೂ ಬರಹದಲ್ಲಿ ಕನ್ನಡದ್ದೇ ಆದ ಪದಗಳಿಗೆ ಹೆಚ್ಚುಗಾರಿಕೆ ಸಿಕ್ಕಿದ್ದು ಕಡಿಮೆಯೇ. ಇದಕ್ಕೆ ಆಗಿನ ಮತ್ತು ಈಗಿನ ಬರಹಗಾರರಲ್ಲಿ ಇರುವ ಒಂದು ಕೀಳರಿಮೆಯೇ ದೂಸರು ಎಂದು ಹೇಳಬಹುದು, ಅಲ್ಲದೆ ಎಲ್ಲಿ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿದರೆ ತಮ್ಮ ಬರಹಗಳು ಬಲ್ಲವರ ಹೊಗಳಿಕೆಯಿಂದ ದೂರ ಉಳಿಯುವುದೆಂಬ ಗೊಂದಲವೂ ಕಾಡುತ್ತಿದ್ದಿರಬಹುದು. ಹಿಂದೆ ಹೆಚ್ಚಿನ ಕನ್ನಡ ಬರಹಗಾರರೆಲ್ಲರೂ ಸಂಸ್ಕ್ರುತ ಬಲ್ಲವರೇ ಆಗಿದ್ದರಿಂದ ಬರಹಗಳಲ್ಲಿ ಸಂಸ್ಕ್ರುತಕ್ಕೆ ಇನ್ನಿಲ್ಲದ ಹೆಚ್ಚುಗಾರಿಕೆ ಸಿಕ್ಕಿತು.

ಆದರೆ ಸಂಸ್ಕ್ರುತಕ್ಕೆ ಸಿಕ್ಕ ಹೆಚ್ಚುಗಾರಿಕೆಯಿಂದಾದ ತೊಂದರೆಗಳನ್ನು ಮನಗಂಡ ಬರಹಗಾರರು ಅಲ್ಲಲ್ಲಿ ಅದಕ್ಕೆ ಎದುರಾಗಿ ದನಿಯೆತ್ತಿದರು. ಅದರಲ್ಲಿ ಮೊದಲಿಗನಾಗಿ ನಮ್ಮ ಕಣ್ಣಿಗೆ ರಾಚುವುದು ಆಂಡಯ್ಯನ ಹೆಸರು. ಆಮೇಲೆ ನಯಸೇನ, ಮಹಾಲಿಂಗರಂಗ ಮುಂತಾದವರೆಲ್ಲ ಈ ಸಾಲಿನಲ್ಲಿ ನಿಲ್ಲುತ್ತಾರೆ. ಇವರ ಜೊತೆ ’ಮಲ್ಲಿಗೆಯ ಕಬ್ಬಿಗ’ಎಂದೇ ಮನೆಮಾತಾಗಿರುವ ಕೆ.ಎಸ್.ನರಸಿಂಹಸ್ವಾಮಿಯವರು ಇದಕ್ಕೆ ದನಿಗೂಡಿಸಿದ್ದರು ಎಂಬುದು ಅವರ ಈ ಸಾಲುಗಳಿಂದ ತಿಳಿಯಬಹುದು. ಅದರಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ.

’ಶಿಲಾಲತೆ’ ಎಂಬ ಕಟ್ಟೊರೆಯ ಗೊಂಚಲಿನಲ್ಲಿರುವ ’ಕನ್ನಡ ಮಾದ್ಯಮ’ ಎಂಬ ಪದ್ಯದಲ್ಲಿ ಹೀಗಿದೆ:-

ಕನ್ನಡ ಲಿಪಿಯಲಿ ಏನಿದು ಸಂಸ್ಕ್ರುತ
ಪದಗಳ ಮೆರವಣಿಗೆ!
ಕಡೆಯಲಿ ಒಂದೇ ಕನ್ನಡದವ್ಯಯ;
ತೂಕದ ಬರವಣಿಗೆ
ತೂಕಡಿಸುವ ಕಣಿಗೆ.

ಕನ್ನಡ ಲಿಪಿಯಲ್ಲಿ ಬರೆದರೆ ಕನ್ನಡ ಬರಹವಾಗುವುದಿಲ್ಲ, ಕನ್ನಡದ್ದೇ ಆದ ಪದಗಳನ್ನು ಬಳಸಿದರೆ ಅದು ಕನ್ನಡ ಬರಹವಾಗುತ್ತದೆ. ಸಂಸ್ಕ್ರುತ ಪದಗಳನ್ನು ಬರಹದ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುವುದರ ಬಗ್ಗೆ ಕೆ.ಎಸ್.ನ ಅವರು ಸೊಲ್ಲೆತ್ತಿರುವುದನ್ನು ಇಲ್ಲಿ ಗಮನಿಸಬಹುದು. ನಮ್ಮ ಬದುಕಿಗೆ ಬೇಕಾದ ಎಲ್ಲವನ್ನು ನಾವು ಕನ್ನಡದಲ್ಲೇ ಪಡೆದುಕೊಳ್ಳಬಹುದಾದ್ದರಿಂದ ನಮಗೇತಕೆ ಈ ಸಂಸ್ಕ್ರುತ ಕಳವಳ? ಎಂಬುದು ನಲ್ಬರಹಗಾರರ ಕೇಳ್ವಿ. ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಬದುಕು-ಸಾವು, ಹರಸು-ನೋಂಪು, ಮುಗಿಲು-ಸಿಡಿಲು-ಮಿಂಚು, ತೊಟ್ಟಿಲು-ಜೋಗುಳ-ಕನಸು ಇವೆಲ್ಲವೂ ಕನ್ನಡವೇ ಆಗಿರುವುದರಿಂದ, ಕನ್ನಡ ಬರಹದಿಂದ ಕನ್ನಡ ಬದುಕನ್ನು ತಿಳಿಸಲು ಕನ್ನಡದ್ದೇ ಆದ ಪದಗಳ ಬಳಕೆ ಹೆಚ್ಚು ಮಾಡಬೇಕೆಂದು ನಲ್ಬರಹಗಾರರ ಬಯಕೆಯಾಗಿರುವಂತೆ ಈ ಸಾಲುಗಳಲ್ಲಿ ಕಂಡುಬರುತ್ತದೆ.

ಕನ್ನಡಗವ್ಡರು ಕನ್ನಡದಲ್ಲೇ
ಮಕ್ಕಳ ಹರಸುವರು
ದಾಸರು ಶರಣರು ಕನ್ನಡದಲ್ಲೇ
ವೇದವ ನುಡಿಸಿದರು;
ಬೆಳಕನು ಬಿಡಿಸಿದರು.

ಮುಗಿಲೂ ಕನ್ನಡ, ಸಿಡಿಲೂ ಕನ್ನಡ
ಮಿಂಚೂ ಕನ್ನಡವೆ!
ಮಗುವೂ ಕನ್ನಡ, ಹಾಲೂ ಕನ್ನಡ
ಬದುಕು ಕನ್ನಡವೆ
ಸಾವೂ ಕನ್ನಡವೆ!

ಕನ್ನಡ ತೊಟ್ಟಿಲು, ಕನ್ನಡ ಜೋಗುಳ
ಕನಸೂ ಕನ್ನಡವೆ!
ನಮಗೇತಕೆ ಈ ಸಂಸ್ಕ್ರುತ ಕಳವಳ?
ನಾವೂ ಕನ್ನಡವೆ
ನೀವೂ ಕನ್ನಡವೆ

ಕನ್ನಡದ ಕಟ್ಟೊರೆಗಳಲ್ಲಿ ಹೊಸ ಹೊಸ ದಾರಿಗಳನ್ನು ಹುಡುಕುತ್ತಾ ಹೊಸ ಹೊಸ ಬಾಗಿಲುಗಳು ತೆರೆದುಕೊಂಡಿದ್ದರಿಂದ ಅವರು ’ತೆರೆದ ಬಾಗಿಲು’ ಎಂಬ ಕಟ್ಟೊರೆಯ ಗೊಂಚಲಿನ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ.

ಶಿಲಾಲತೆಯಲ್ಲಿ ಅಲಂಕಾರ ರೂಪಕಗಳನ್ನು ಕಟ್ಟಿಕೊಂಡು ಕುಣಿದಿದ್ದು ಸಾಕು, ಅದನ್ನ ಬಿಟ್ಟು ಬೇರೆ ಬರೆಯೋಣ ಅಂತ ಯೋಚನೆ ಮಾಡಿದೆ. ಆ ಸಂಕೀರ‍್ಣತೆ, ಜಟಿಲತೆ, ಕ್ಲಿಶ್ಟತೆ ಇವೆಲ್ಲ ಇದೆಯಲ್ಲ, ಇವುಗಳನ್ನು ಬಿಟ್ಟು ಕಾವ್ಯ ರಚನೆ ಮಾಡಿದರೆ ಹೇಗಾಗಬಹುದು ಅಂತ ಯೋಚನೆ ಮಾಡ್ತಾ ಇದ್ದೆ. ಆಡುವ ಮಾತಿಗೆ ಹತ್ತಿರ ಇರಬೇಕು. ಆಡೋ ಬಾಶೇನೇ ಅಲ್ಲ, ಅದಕ್ಕೆ ಹತ್ತಿರ, ಸರಳತೆಯನ್ನು ಸಾದಿಸಬೇಕು, ಸರಳತೆ ಅಂದರೆ ’ಮಯ್ಸೂರ ಮಲ್ಲಿಗೆ’ ರೀತಿಯ ಸರಳತೆ ಅಲ್ಲ. ಅದಕ್ಕಿಂತ ಬೇರೆಯಾದದ್ದು, ಸರಳತೆಯನ್ನಿಟ್ಟುಕೊಂಡು ಸಂಕೀರ‍್ಣವಾದುದನ್ನು ಹೇಳೋದು ಹೇಗೆ ಅಂತ ಯೋಚನೆ ಮಾಡ್ತಾನೇ ಹದಿನಾರು ವರ್ಶ ಕಳೀತು

ಜನಸಾಮಾನ್ಯರಲ್ಲಿ ಒಬ್ಬನಾದ ನಾನು, ಎಲ್ಲರಿಗೂ ಆಗಬಹುದಾದ ಅನುಬವಗಳನ್ನು ಅವರು ಕಲಿಸಿದ ಬಾಶೆಯಲ್ಲಿ ನಿರೂಪಿಸಿದ್ದರಿಂದ ನನ್ನ ಕಾವ್ಯ ಅವರಿಗೆ ಹಿಡಿಸಿದಂತೆ ತೋರಿತು

ಎಲ್ಲರಕನ್ನಡ’ವನ್ನು ನೋಡಿ ಮೇಲಿನ ಸೊಲ್ಲುಗಳನ್ನು ಹೇಳಿದಂತಿದೆ ಎಂದು ಹೇಳಿದರೆ ತಪ್ಪಾಗಲಾರದು.  ಕನ್ನಡದ ಕಸುವನ್ನು ಅದರಲ್ಲೂ ಆಡುನುಡಿಯನ್ನು ಹೀರಿ ಬರಹಗನ್ನಡವು ಬೆಳೆಯಬೇಕಾಗಿದೆ. ಬರಹಗನ್ನಡಕ್ಕೂ ಮತ್ತು ಆಡುನುಡಿಗೂ ಇರುವ ನಂಟನ್ನು ಮತ್ತು ಗೆಂಟನ್ನು ಕೆ.ಎಸ್.ನ ಅವರು ಬಲು ತಿಳಿಯಾಗಿ ನೇರವಾಗಿ ಇಲ್ಲಿ ಹೇಳಿದ್ದಾರೆ. ಕನ್ನಡಿಗರು ಬೆಳೆಯಬೇಕಾದರೆ ಕನ್ನಡದ ಪದಗಳಿಗೆ ಹೆಚ್ಚುಗಾರಿಕೆ ಸಿಗಲೇಬೇಕು. ಕನ್ನಡದ ಪದಳನ್ನು ಬಳಸುವಾಗ ಇರುವ ಹಿಂಜರಿಕೆ ತೊಲಗಬೇಕು. ಎಲ್ಲ ಕನ್ನಡಿಗರ ಏಳಿಗೆಗೆ ಇದನ್ನು ಬಿಟ್ಟು ಬೇರೆ ದಾರಿಯಿಲ್ಲ. ಕನ್ನಡಿಗರ ಮನೆಮನೆಯಲ್ಲಿ ಮಂದಿಯೊಲವನ್ನು ಗಳಿಸಿರುವ ಕೆ.ಎಸ್.ನ ಅವರ ಪದ್ಯಗಳೇ ಇದಕ್ಕೆ ಕಯ್ಗನ್ನಡಿ.

(ಪದ್ಯಗಳನ್ನು ಎತ್ತಿದ್ದು: ಮಲ್ಲಿಗೆಯ ಮಾಲೆ – ಕೆ.ಎಸ್.ನರಸಿಂಹಸ್ವಾಮಿ – ಸಮಗ್ರ ಕವನ ಸಂಕಲನ, ವಸಂತ ಪ್ರಕಾಶನ, 2012)

(ಚಿತ್ರ: http://pusthakapreethi.files.wordpress.com/)

ನಿಮಗೆ ಹಿಡಿಸಬಹುದಾದ ಬರಹಗಳು

10 Responses

 1. ‘ನೋಂಪು’ ಎಂದರೇನು? ದಯವಿಟ್ಟು ಕೇವಲ ಲೇಖನಗಳನ್ನು ಬರೆದು ಕನ್ನಡಿಗರನ್ನು ಕನ್ನಡದ್ದೇ ಪದಗಳನ್ನು ಬಳಸಿ ಎಂದರೆ ತಪ್ಪಾಗುತ್ತದೆ. ಇದರೊಟ್ಟಿಗೆ ಕನ್ನಡದ್ದೇ ಆದ ಪದಗಳುಳ್ಳ ಪದಕೋಶ ತಂತ್ರಾಂಶದ ರೂಪದಲ್ಲಿ ಬಂದರೆ ಇರುವ ತೊಡಕುಗಳು ಮಾಯವಾಗಬಹುದು. ಅಧ್ಯಯನ ಮಾಡಿದ ತಮಗೂ ೧೦ ಮತ್ತು ಅದಕ್ಕೂ ಕಡಿಮೆ ಶಿಕ್ಷಣ ಪಡೆದವರಿಗೂ ಮತ್ತು ಆಂಗ್ಲದಿಂದ ಕನ್ನಡಕ್ಕೆ ಬರುತ್ತಿರುವವರಿಗೂ ತುಂಬಾ ಅಂತರವಿದೆ. ಅಲ್ಲವೆ? ಈ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಬೇಕಿದೆ.

 2. ybharath77 says:

  ಈಗಾಗಲೆ ಅಂತಹ ಮೊಗಸುಗಳನ್ನು ಮಾಡುತ್ತಿದ್ದೇವೆ ಮತ್ತು ಮಾಡಿದ್ದೇವೆ.
  http://baraha.com/kannada/nighantu3.htm
  http://kn.wiktionary.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F

  ಇದಲ್ಲದೆ ನಾವು ಹೊಸ ಪದಗಳನ್ನು ಕಟ್ಟಲು ಪೇಸ್ ಬುಕ್ ಗುಂಪನ್ನು ಮಾಡಿಕೊಂಡಿದ್ದೇವೆ – ಪದ ಪದ ಕನ್ನಡ ಪದಾನೇ! (https://www.facebook.com/login.php?next=https%3A%2F%2Fwww.facebook.com%2Fgroups%2Fpapakapa%2F)- ನೀವು ಇದರಲ್ಲಿ ಸೇರಿಕೊಂಡು ಹೊಸ ಪದಗಳನ್ನು ಕಟ್ಟಬಹುದು.

  ಈ ಬರಹಗಳಿಂದ ಮಂದಿಯನ್ನು ಎಚ್ಚರಿಸುವ ಕೆಲಸವಶ್ಟೆ ಮಾಡುತ್ತಿರುವುದು. ಆದರೆ ಇದಕ್ಕಿಂತ ಹೆಚ್ಚಿನ ಕೆಲಸವನ್ನು ನಾವು ಮಾಡುತ್ತಿದ್ದೇವೆ

 3. kspriyank says:

  ಶ್ರೀನಿವಾಸಮೂರ‍್ತಿ ಅವರೇ,
  ನೀವು ವಿಕ್ಶನರಿ ಬಗ್ಗೆ ತಿಳಿದಿಲ್ಲವೆನಿಸುತ್ತದೆ. ಇಲ್ಲಿ ನೋಡಿ, ತಮಗೆ ನೋಂಪು ಪದದ ಅರ‍್ತವೂ ಸಿಗುತ್ತದೆ.
  http://kn.wiktionary.org/wiki/%E0%B2%A8%E0%B3%8B%E0%B2%82%E0%B2%AA%E0%B3%81

 4. ಬರತ್ ಕುಮಾರ್,

  ನೀವು ಹೇಳಿದ “ಪದಪದ ಕನ್ನಡ ಪದಾನೇ” ಗುಂಪು “ಎಲ್ಲರಿಗಲ್ಲದೆ” ಕೆಲವರಿಗೆ ಮಾತ್ರ ಮೀಸಲೇ? ಏಕೆಂದರೆ ಹಿಂದೇ ಈ ಗುಂಪಿಗೆ ಸೇರುವ ಮನವಿ ಹಾಕಿದ್ದೆ. ಗುಂಪಿನ ಮೇಲ್ವಿಚಾರಕರಿಂದ ಉತ್ತರವೇ ಇಲ್ಲ. (ನೀವೂ ಕೂಡ ಒಬ್ಬ ಮೇಲ್ವಿಚಾರಕರು ಅಂತ ನಾನಂದುಕೊಂಡಿದ್ದೇನೆ) ಎಲ್ಲರಿಗೂ ತೆರೆದಿಲ್ಲದ್ದ ಮೇಲೆ “ಎಲ್ಲರ” ಅಂತ ಹೇಳಬೇಕೇಕೆ?

  • ಒಂದು ವಿಶ್ವವಿದ್ಯಾಲಯ ’ಎಲ್ಲರದು’ ಎಂದರೆ ಅರ‍್ತ ಯಾರು ಬೇಕಾದರೂ ಬಂದು ಅಲ್ಲಿ ಕುಳಿತುಕೊಳ್ಳಬಹುದು, ಕೇಕೆ ಹಾಕಿಕೊಂಡು ಕೂಗಾಡಬಹುದು ಎಂದಲ್ಲ. ನಿಮ್ಮನ್ನು ಪಪಕಪ ಗುಂಪಿಗೆ ಸೇರಿಸಿಕೊಳ್ಳದಿರುವುದಕ್ಕೆ ಕಾರಣ ಎಲ್ಲರಕನ್ನಡದ ಬಗ್ಗೆ ಅಲ್ಲಿಲ್ಲಿ ನೀವು ಆಡಿರುವ ಮಾತುಗಳು.

 5. ವೇದ ಉಪನಿಷತ್ತುಗಳು ಅಧಿಕಾರಿಗಳಿಗೆ ಮಾತ್ರ, ಸಿಕ್ಕಸಿಕ್ಕವರೆಲ್ಲಾ ಬಂದು ಕೇಕೆ ಹಾಕಿಕೊಂಡು ಕೂಗಾಡುವುದಕ್ಕಲ್ಲ ಎಂದರು ಬಲ್ಲವರು. ಅದನ್ನು ದುಷ್ಟ ಬ್ರಾಹ್ಮಣನ ಕೆಳಮಟ್ಟದ ಹುನ್ನಾರ ಎನ್ನಲಾಯಿತು. “ನಿನ್ನ ಎದುರು ಒಂದು ಹಾವು ಮತ್ತು ಬ್ರಾಹ್ಮಣ ಬಂದರೆ ಮೊದಲು ಬ್ರಾಹ್ಮಣನನ್ನು ಹೊಡೆದು ಹಾಕು” ಎಂದೆಲ್ಲಾ ಫತ್ವಾ ಹೊರಡಿಸಲಾಯಿತು. ಈಗ ಇದೇನು, “ಎಲ್ಲರ ಕನ್ನಡ”ದಂಥಾ ಮಂದಿಯಾಳ್ವಿಕೆಯ ವ್ಯವಸ್ಥೆಯಲ್ಲಿ ಈ ತೆರನ ಬ್ರಾಹ್ಮಣಿಕೆ!!!

  • // ವೇದ ಉಪನಿಷತ್ತುಗಳು ಅಧಿಕಾರಿಗಳಿಗೆ ಮಾತ್ರ, ಸಿಕ್ಕಸಿಕ್ಕವರೆಲ್ಲಾ ಬಂದು ಕೇಕೆ ಹಾಕಿಕೊಂಡು ಕೂಗಾಡುವುದಕ್ಕಲ್ಲ ಎಂದರು ಬಲ್ಲವರು //

   (1) ‘ಬಲ್ಲವರ’ಲ್ಲ, ಅಯೋಗ್ಯ ಬ್ರಾಹ್ಮಣರು (ಗುಣಪದವನ್ನು ಸೇರಿಸಿರುವುದು ಯೋಗ್ಯ ಬ್ರಾಹ್ಮಣರೂ ಇರಲು ಸಾದ್ಯ ಎಂಬ ಕಾರಣಕ್ಕೆ). (2) ‘ಸಿಕ್ಕಸಿಕ್ಕವರೆಲ್ಲಾ…’ ಅಲ್ಲ, ಶೂದ್ರರು. ಹುಟ್ಟಿನ ಆದಾರದ ಮೇಲೆ ’ಅದಕ್ಕೆ ಅದಿಕಾರವಿಲ್ಲ, ಇದಕ್ಕೆ ಅದಿಕಾರವಿಲ್ಲ’ ಎನ್ನುವುದು ನಿಮ್ಮ ಪರಂಪರೆಯ ವಿಶೇಶ.

   // “ನಿನ್ನ ಎದುರು ಒಂದು ಹಾವು ಮತ್ತು ಬ್ರಾಹ್ಮಣ ಬಂದರೆ ಮೊದಲು ಬ್ರಾಹ್ಮಣನನ್ನು ಹೊಡೆದು ಹಾಕು” ಎಂದೆಲ್ಲಾ ಫತ್ವಾ ಹೊರಡಿಸಲಾಯಿತು //

   ಇನ್ನೊಬ್ಬ ಇನ್ನೊಂದು ಪತ್ವಾ ಹೊರಡಿಸುತ್ತಾನೆ. ಅದಕ್ಕೇನಂತೆ?

   // “ಎಲ್ಲರ ಕನ್ನಡ”ದಂಥಾ ಮಂದಿಯಾಳ್ವಿಕೆಯ ವ್ಯವಸ್ಥೆಯಲ್ಲಿ ಈ ತೆರನ ಬ್ರಾಹ್ಮಣಿಕೆ!!! //

   ಯಾರನ್ನು ಪಪಕಪ-ಗೆ ಸೇರಿಸಿಕೊಳ್ಳಬೇಕು, ಯಾರನ್ನು ಸೇರಿಸಿಕೊಳ್ಳಬಾರದು ಎನ್ನುವುದನ್ನು ಜಾತಿಯ ಆದಾರದ ಮೇಲೆ ನಾವು ತೀರ‍್ಮಾನಿಸಿದ್ದರೆ ಇದನ್ನು ಬ್ರಾಹ್ಮಣಿಕೆ ಎನ್ನಬಹುದಿತ್ತು. ’ಅಪಬ್ರಾಹ್ಮಣಾದಿಕರಣ’ ಎಂಬ ಒಂದು ’ಬ್ರಹ್ಮಸೂತ್ರದ ಅದಿಕರಣ’ವನ್ನು ಬರೆದು ಬ್ರಾಹ್ಮಣರಿಗೆ ಪಪಕಪ-ದಲ್ಲಿ ಇಲ್ಲವೇ ಎಲ್ಲರಕನ್ನಡದಲ್ಲಿ ಅದಿಕಾರವಿಲ್ಲ ಎನ್ನುತ್ತಿಲ್ಲ ನಾವು. ಬ್ರಾಹ್ಮಣಿಕೆ ಎನ್ನುವುದು ಬರೀ ಎಲಿಟಿಸಂ ಅಲ್ಲ; ಅದು ಹುಟ್ಟಿನ ಆದಾರದ ಮೇಲೆ ನಿಂತಿರುವ ಎಲಿಟಿಸಂ. ಅದೇ ಅದರ ತೊಂದರೆ. ಆ ತೊಂದರೆಯನ್ನು ಕನ್ನಡದ ಮಟ್ಟಿಗೆ ಸಾದ್ಯವಾದಶ್ಟು ಎಲ್ಲರಕನ್ನಡ ಹೋಗಲಾಡಿಸಲು ಹೊರಟಿದೆ. ಅದನ್ನು ಹೋಗಲಾಡಿಸುವವರ ಕಯ್ ಜೋಡಿಸಲು ಮನಸ್ಸಿಲ್ಲದವರಿಗೆ ಮತ್ತು ಕಿಡಿಗೇಡಿಗಳಿಗೆ ನಮ್ಮ ಬಾಗಿಲು ಮುಚ್ಚಿರುತ್ತದೆ. ತೆಗೆದಿರುವ ಜಾತಿಯ ಬಾಗಿಲು ಇದ್ದೇ ಇದೆಯಲ್ಲ, ಅವರು ಅಲ್ಲಿಗೆ ಹೋಗಿ ಬಾಗಿಲು ತಟ್ಟಲಿ.

 6. innuu jaati emba bauddika hurulillada categoryge innuu empirical huruliruvudu kannada kuudanada koragu-konegalallondu. jaati yindalla tanna kelasagalinda vicaaragalinda brahmana annuvudu kalaberakeyallada tappu.antavanannu brahamana anta yaake annabeeku? antavanu x atava obba manushya ashtee! namma samaaja terapillade kumbuttide! bahala noovu tandikkuva sangati idu!

ಅನಿಸಿಕೆ ಬರೆಯಿರಿ: