ನಮ್ಮಲ್ಲಿದೆಯೇ ಕೆಚ್ಚೆದೆ?

– ಜಯತೀರ‍್ತ ನಾಡಗವ್ಡ

Hindi Imposition

1

ಕೇಂದ್ರ ಸರ‍್ಕಾರಕ್ಕೆ ಹಿಂದಿ ಹೇರಿಕೆಯ ಹುಚ್ಚಿದೆ
ಇದಕೆ ರಾಜ್ಯ ಸರ‍್ಕಾರದ ಯತ್ನವು ಹೆಚ್ಚಿದೆ
ಕರ‍್ನಾಟಕದಲ್ಲಿ ಕನ್ನಡ ಇವ್ರಿಂದ ನೆಲಕಚ್ಚಿದೆ
ಹಯ್ಕಮಾಂಡ್ ಆದೇಶದಂತೆ ಕನ್ನಡ ಶಾಲೆಗಳು ಮುಚ್ಚಿದೆ
ಇದ ಕಂಡು ವಿಶ್ವ ಸಂಸ್ತೆ ಬೆಚ್ಚಿದೆ
ಹಿಂದಿ ಹೇರಿಕೆ ವಿರುದ್ದ ಹೋರಾಡೋಣ ಬನ್ನಿ ಕನ್ನಡಿಗರೇ ತೋರೋಣ ನಮ್ಮಲ್ಲಿದೆ ಕೆಚ್ಚೆದೆ

2
ರಾಶ್ಟ್ರೀಯ ಪಕ್ಶಗಳಿಗೆ ಒಡೆದು ಆಳೋ ಚಟ
ಹಿಂದಿ ಹೇರಿಕೆ ಮಾಡೋದು ಇವರ ಹಟ
ಇವರ ಪುಂಡಾಟಿಕೆಗೆ ಆಂದ್ರವೀಗ ಹರಿದ ಪಟ
ನಮ್ಮ ನಾಡಲ್ಲೂ ಮನೆಮುರುಕರು ಇರೊದು ದಿಟ
ಕನ್ನಡಿಗನೇ ಇಂತವರಿಗೆ ಹಾಕದಿರು ನಿನ್ನ ಮತ

3
ಜಗತ್ತಿನಲ್ಲೇ ನಮ್ಮದು ದೊಡ್ಡ ಪ್ರಜಾಪ್ರಬುತ್ವ
ಹಯ್ಕಮಾಂಡ್ ಹೇಳಿದ್ದು ಪಾಲಿಸೊದೇ ನಮ್ಮ ಆಳ್ವಿಗರ ತತ್ವ
ಮಂದಿಯಾಳ್ವಿಕೆಯಲ್ಲಿ ಎನಾದರೂ ಉಳಿದಿದೆಯೇ ಸತ್ವ?

(ಚಿತ್ರ: ಪೇಸ್ ಬುಕ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: