ಡಾಟ್ಸನ್: ಕಿರು ಕಾರುಗಳಲ್ಲಿ ಮತ್ತೊಂದು ಪಯ್ಪೋಟಿ!

-ಜಯತೀರ‍್ತ ನಾಡಗವ್ಡ

datsun

ಟಾಟಾ ನ್ಯಾನೋ, ಬಜಾಜ RE, ಹುಂಡಾಯಿ ಈಯೊನ್ ಬಳಿಕ ಇದೀಗ ಪುಟ್ಟ ಕಾರುಗಳ ಮಾರುಕಟ್ಟೆಗೆ ಪಣವೊಡ್ಡಲು ಸಜ್ಜಾಗಿದೆ ನಿಸಾನ್ ರವರ ಡಾಟ್ಸನ್ ಕಾರು.

20 ವರುಶಗಳ ಹಿಂದೆ ತಯಾರಿಕೆ ನಿಲ್ಲಿಸಿದ್ದ ಈ ಪುಟಾಣಿ ಕಾರಿಗೆ ಮತ್ತೆ ಮರುಹುಟ್ಟು ನೀಡಲು ನಿಸಾನ್ ಮುಂದಾಗಿದೆ. ಹೊರದೇಶಕ್ಕೆ ಕಳಿಸಲೆಂದೇ 1960 ರ ಸುಮಾರಿನಲ್ಲಿ ನಿಸಾನ್ ಈ ಕಾರನ್ನು ಅಣಿಗೊಳಿಸಿತ್ತು. ಬ್ರಿಟನ್, ಅಮೆರಿಕ,ಜರ್‍ಮನಿಯಂತ ನಾಡುಗಳಲ್ಲಿ ಮಾರಲ್ಪಟ್ಟ ಈ ಬಂಡಿ ಇದೀಗ ಬಾರತದಲ್ಲೇ ತಯಾರಿಸಿ ಮಾರಾಟವಾಗಲಿದೆ. ಬಾರತದಲ್ಲಿ 2014 ರ ಮಾರ್‍ಚ್ ನಂತರ ಮಾರಾಟಕ್ಕೆ ಸಿದ್ದವಾಗಿದೆ.

ನಮ್ಮ ದೇಶದೊಂದಿಗೆ ಇಂಡೋನೆಶಿಯ, ತೆಂಕಣ ಆಪ್ರಿಕಾ,ರಶಿಯಾಗಳಲ್ಲೂ ಇದನ್ನು ಮಾರಲು ನಿಸಾನ್ ತೀರ‍್ಮಾನಿಸಿದೆ ಜಗತ್ತಿನ ಚುರುಕು ಹಾಗೂ ಮಿಂಚಿನ ವೇಗದ ಮೇಲಾಳು ಎಂದೇ ಹೆಸರುವಾಸಿಯಾಗಿರುವ ಕಾರ್‍ಲೊಸ್ ಗೊಸ್ನ ಇಂತಹ ಒಂದು ಮುಕ್ಯವಾದ ತೀರ‍್ಮಾನ ತೆಗೆದುಕೊಂಡಿದ್ದಾರೆ. ಕಳೆದ ತಿಂಗಳು ದೆಹಲಿಯಲ್ಲಿ ಈ ವಿವರ ಬಿಡುಗಡೆಗೊಳಿಸಿದ ಗೊಸ್ನ ,ಈ ಬಂಡಿಯ ಮಾದರಿಯೊಂದನ್ನೂ ತೋರಿಸಿದ್ದರು.

ಬಾರತದ ಮಾರುಕಟ್ಟೆಯಲ್ಲಿ ತನ್ನ ಪಯ್ಪೋಟಿಗಾರರಾದ ಮಾರುತಿ ಸುಜುಕಿ,ಹುಂಡಾಯಿ,ಟಾಟಾ ಕೂಟಗಳ ಜೊತೆ ಸೆಣಸಲು ರೆನೊ-ನಿಸಾನ್ ಅಣಿಯಾದಂತಿದೆ. ತಾನೋಡಗಳ ಬಲ್ಲವರು ಹುಂಡಾಯಿ i10, ಸುಜುಕಿ A-star ಗೆ ಡಾಟ್ಸನ್ ಹೆಚ್ಚು ಪಣವೊಡ್ಡುವುದು ದಿಟವೆನ್ನುತ್ತಿದ್ದಾರೆ.

ದಿನೇ ದಿನೇ ಕುಸಿದು ಹೆಚ್ಚಿನ ಕಶ್ಟದಲ್ಲಿ ಸಿಲುಕಿರುವ ಇಂದಿನ ಆಟೋ ಕಯ್ಗಾರಿಕೆಯಲ್ಲಿ ಒಳ್ಳೆಯ ಸ್ತಿತಿಯಲ್ಲಿರುವ ಕೆಲವೇ ಕೂಟಗಳಲ್ಲಿ ರೆನೊ-ನಿಸಾನ್ ಕೂಡ ಒಂದಾಗಿರುವುದರಿಂದ ಅದರ ಮುಂದಿನ ನಡೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಡಾಟ್ಸನ್ ಕಾರಲ್ಲಿ ಏನಿದೆ?

DATSUN_GO_seating

ಡಾಟ್ಸನ್ 1.2 ಲೀಟರ್‍ ಅಳತೆಯ 3 ಉರುಳೆಯ ಬಿಣಿಗೆ (engine) ಹೊಂದಿದ್ದು ಅವರದೇ ಇನ್ನೊಂದು ಕಾರು ಮಾದರಿ ಮಯ್ಕ್ರಾದಂತೆ  ಪೆಟ್ರೋಲ್ ಉರುವಲು ಬಳಸಿಕೊಳ್ಳುತ್ತದೆ. ಚಂದದ ಹೊರಮಯಿಂದ ಕೂಡಿರುವ “ಗೊ” ಬಂಡಿಯ ಒಳಮಯ್ ಕೂಡ ಅಶ್ಟೇ ಅಚ್ಚುಕಟ್ಟಾಗಿದ್ದು 5 ಮಂದಿ ಸುಳುವಾಗಿ ಕೂರುವಂತಿದೆ.

ವೇಗ ಬದಲಾವಣೆಗೆ ಇದರಲ್ಲಿ 5 ಹಲ್ಲುಗಾಲಿಗಳಿವೆ. ಇದರ ಉರುವಲು ಅಳವುತನವೂ (fuel efficiency) ಹೆಚ್ಚಿದ್ದು ಓಡಿಸುವಾಗ ನವಿರಾದ ಹಾಯನಿಸುವ ಅನುಬವ ನೀಡಲಿದೆ ಎಂದು ನಿಸಾನ್ ಹೇಳಿದೆ.

ಇದರ ಬೆಲೆ 4 ಲಕ್ಶ ರುಪಾಯಿಗಳು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.