ತಿಳಿಯಾಗಬೇಕಿರುವುದು ಮನಸ್ಸು, ಮಯ್ ಬಣ್ಣವಲ್ಲ!

ಪ್ರೇಮ ಯಶವಂತkappu oppu

ಇತ್ತೀಚಿಗೆ ಮಯ್ ಬಣ್ಣವನ್ನು ತಿಳಿಗೊಳಿಸುವ ನಿಡಿಗಳು (cream) ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿವೆ. ಇವುಗಳನ್ನು ಮಾಡುವ ಕೂಟಗಳ ಪ್ರಕಾರ ಮಂದಿಯ ಎಂದಿನ  ಬದುಕಿನ ಸೋಲಿಗೆ ಅವರ ತೆಳುವಲ್ಲದ ಬಣ್ಣವೇ  ಕಾರಣವಂತೆ! ಒಬ್ಬ ವ್ಯಕ್ತಿಯ ಏಳಿಗೆಯಾಗಬೇಕಾದರೆ ಅವನ ಮಯ್ ಬಣ್ಣ ತಿಳಿಯಾಗಿರಬೇಕಾದುದ್ದು ತುಂಬಾ ಮುಕ್ಯವಂತೆ! ಈ ಕೂಟಗಳು ತಯಾರಿಸುವ ಮಾಡುಗೆಗಳನ್ನು(product) ಬಳಸಿ ಮಯ್ ಬಣ್ಣವನ್ನು ತಿಳಿಯಾಗಿಸಿಕೊಳ್ಳುವ ಮೂಲಕ ಏಳಿಗೆಯನ್ನು  ಪಡೆದುಕೊಳ್ಳಿ ಎಂದು ಸಾರುವ ಹಲವಾರು ಬಯಲರಿಕೆಗಳನ್ನು ಇವು ಹರಡುತ್ತಿವೆ.

ಇಂತಹ ಬಯಲರಿಕೆಗಳು ಜನರಲ್ಲಿ ತಪ್ಪು ತಿಳುವಳಿಕೆಯನ್ನು ತುಂಬುತ್ತಿವೆ. ಒಬ್ಬ ಮನುಶ್ಯನ ಏಳಿಗೆ  ಮತ್ತು ಚೆನ್ನಿಕೆಗಳೆರಡೂ(success and beauty) ಅವನ/ಅವಳ ಮಯ್ ಬಣ್ಣದ ಮೇಲೆ ನಿಂತಿವೆ ಎಂದು ಹೇಳುವ ಈ ಕೂಟದ  ಮಾತುಗಳು ಅವರ ಹುಂಬುತನವನ್ನೂ ಅದನ್ನು ನಂಬುವ ಮಂದಿಯ ಪೆದ್ದುತನವನ್ನೂ ಎತ್ತಿ ತೋರಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ತೊಗಲನ್ನು ತಿಳಿಗೊಳಿಸುವ ನಿಡಿಗಳು ಮಾರುಕಟ್ಟೆ ತುಂಬೆಲ್ಲ ರಾರಾಜಿಸುತ್ತಿವೆ.ಇನ್ನೂ ನಿಗ್ಗೆಡಿಯ (shameless) ಸಂಗತಿ ಎಂದರೆ ಒಂದಶ್ಟು ಕೂಟಗಳು ಮೋರೆಗಶ್ಟೇ ಅಲ್ಲದೇ ಮಯ್ಯಿಯ ಒಳಬಾಗಗಳಿಗೂ ನಿಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ!

ಸೋಜಿಗದ ಸಂಗತಿಯೆಂದರೆ ಇಂತಹ ಮಾಡುಗೆಗಳ ಬಯಲರಿಕೆಗೆ ಹೆಸರಾಂತ ಆಟಗಾರರು ಹಾಗು ಆಡಿಗ/ಆಡಗಿತ್ತಿಯರು (actor/actress) ಟೊಂಕ ಕಟ್ಟಿ ನಿಂತ್ತಿದ್ದಾರೆ.ಇದು ದಿಟವಾಗಿಯೂ ಅಪಾಯಕಾರಿ ಬೆಳವಣಿಗೆ. ಏಕೆಂದರೆ ನಮ್ಮಲ್ಲಿ  ಬಹಳಶ್ಟು ಮಂದಿ ಈ ಮನ್ನೆಯರನ್ನು (celebrities) ತಮ್ಮ ಮಾದರಿ ಮಂದಿಗಳನ್ನಾಗಿ(role model) ಕಾಣುತ್ತಾರೆ, ಅವರ ಹೇಳಿಕೆಯನ್ನೇ ಹಿಂಬಾಲಿಸುತ್ತಾರೆ!

ಇದಕ್ಕೆ ಅಪವಾದವೆಂಬಂತೆ ಹೆಸರಾಂತ ನಟಿ ನಂದಿತಾ ದಾಸ್ ಅವರು ’ವಿಮೆನ್ ಆಪ್ ವರ‍್ತ್’ ಎಂಬ ಸರಕಾರೇತರ ಸಂಗವು ಮಯ್ ಬಣ್ಣದ ಕೀಳರಿಮೆಯ ವಿರುದ್ದ ನಡೆಸುತ್ತಿರುವ ’dark is beautiful’ (ಕಪ್ಪು ಚಂದ) ಮತ್ತು ‘unfair is fair’ (ಕಪ್ಪು ಒಪ್ಪು) ಹರಡೋಡಾಟಗಳಲ್ಲಿ(campaign) ಕಯ್ ಜೋಡಿಸಿದ್ದಾರೆ.ಈ ಹರಡೋಡಾಟಗಳ ರೂವಾರಿ ಆ ಸಂಗದ ನಡೆಸುಗರಾದ (director) ಕವಿತಾ ಇಮ್ಯಾನ್ಯುಯಲ್.

ಮಯ್ ಬಣ್ಣಗಳ ಬಗೆಗಿನ ತಪ್ಪುತಿಳುವಳಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ  ಮಯ್ ಬಣ್ಣದ ಹಿಂದಿರುವ ಅರಿಮೆಯನ್ನು  ಈಗ ತಿಳಿಯೋಣ ಬನ್ನಿ.

ಮಯ್ ಬಣ್ಣಕ್ಕೆ ಮುಕ್ಯ ಕಾರಣವೆಂದರೆ ಕರ‍್ವಣ್ಣ (melanin) ಎಂಬ ಹೊಗರು (pigment). ಕರ‍್ವಣ್ಣ ಎಲ್ಲರನ್ನೂ ಇದ್ದು ಅದರ ಅಳತೆಯ ಮೇರೆಗೆ ಒಬ್ಬರು ನೋಡಲು ಕಪ್ಪಾಗಿ ಮತ್ತೊಬ್ಬರು ಬಿಳಿಯಾಗಿ ಕಾಣುತ್ತಾರೆ. ಮನುಶ್ಯರ ಮಯ್ಯಲ್ಲಿ  ಕರ‍್ವಣ್ಣದ  ಮಾಡುವಿಕೆಯನ್ನು ಬಹಳಶ್ಟು ಅಂಶಗಳು ನಿರ‍್ದರಿಸುತ್ತವೆ.

1) ಮನುಶ್ಯರು ಬದುಕುವ ಪರಿಸರ: ಕಾಣ್ಕೆಮೀರಿದ ಸೂಸಿಕೆಗೂ (ultraviolet radiation) ಮತ್ತು ಕರ‍್ವಣ್ಣದ ಹೊಗರಿನ (pigment) ಹಂಚಿಕೆಗೂ ನಂಟಿದೆ. ನೆಲನಡುಗೆರೆಗೆ(equator) ಹತ್ತಿರದಲ್ಲಿ ಬದುಕವವರಲ್ಲಿ ಕರ‍್ವಣ್ಣದ ಮಾಡುವಿಕೆ ಹೆಚ್ಚಿರುತ್ತದ್ದೆ. ಹೆಚ್ಚಿದ ಕರ‍್ವಣ್ಣ ತೊಗಲಿನ ಬಣ್ಣವನ್ನು ಕಪ್ಪಾಗಿಸುತ್ತದೆ. ಬಿಸಿಬಳಸಿಗೆ (tropics) ದೂರವಿದ್ದು ನೆಲತುದಿಗಳಿಗೆ (earth’s pole) ಹತ್ತಿರವಿರುವ ತಾಣಗಳಲ್ಲಿ ಕಾಣ್ಕೆಮೀರಿದ ಸೂಸಿಕೆಯ ಮಟ್ಟವು ಕಡಿಮೆಯಿರುವುದರಿಂದ ಆ ತಾಣಗಳಲ್ಲಿ ಬದುಕುವವರ ಕರ‍್ವಣ್ಣದ ಮಟ್ಟ ಕಡಿಮೆಯಿರುತ್ತದೆ.

ಇದು  ಅವರ ತೊಗಲಿನ  ಬಣ್ಣವನ್ನು  ತಿಳಿಯಾಗಿಸುತ್ತದ್ದೆ. ಈ ಬಗೆಯ ಮಾರ‍್ಪಾಟು ಅಲ್ಲಿರುವ ಪರಿಸರದ ಬೇರ‍್ಮೆಗಳಿಗೆ ಹೊಂದಿಕೊಳ್ಳಲು ಉಂಟಾದ ಏರ‍್ಪಾಟುಗಳಶ್ಟೇ. ಇದರಲ್ಲಿ ಮೇಲು-ಕೀಳು ಎಲ್ಲಿಂದ ಬಂತು!

2) ಪೀಳಿಗಳ ಕೊಡುಗೆ: ಇತ್ತೀಚಿಗೆ ಅರಿಗರು (researchers) ಕರ‍್ವಣ್ಣ ಉಂಟಾಗುವಿಕೆಯಲ್ಲಿ ಹಲವು ಬಗೆಯ ಪೀಳಿಗಳ (genes) ಕೊಡುಗೆಯಿರುವುದನ್ನು ಕಂಡು ಹಿಡಿದಿದ್ದಾರೆ. ಒಬ್ಬ ಮನುಶ್ಯನಲ್ಲಿರುವ ಪೀಳಿ ಅವನಲ್ಲಿ ಇರಬೇಕಾದ ಕರ‍್ವಣ್ಣದ ಮಟ್ಟವನ್ನು ತೀರ‍್ಮಾನಿಸುತ್ತವೆ.

ಒಟ್ಟಾರೆಯಾಗಿ ಕರ‍್ವಣ್ಣದ ಮಟ್ಟ,ಬದುಕುವ ಪರಿಸರ ಹಾಗು ಪೀಳಿಗಳ ಮೇಳಯ್ಕೆ  ಒಬ್ಬ ಮನುಶ್ಯನ ಮಯ್ ಬಣ್ಣವನ್ನು ತೀರ‍್ಮಾನಿಸುತ್ತವೆ. ಮಯ್ ಬಣ್ಣಕ್ಕೂ ನಮ್ಮಲ್ಲಿ ಇರುವ ಇಲ್ಲವೇ ಇರಬೇಕಾದ ನೆಮ್ಮುಗೆಗೂ(confidence) ಯಾವುದೇ ನಂಟಿಲ್ಲ. ಮಯ್ ಬಣ್ಣವನ್ನು ತಿಳಿಗೊಳಿಸುವ ನಿಡಿಯನ್ನು(cream) ತಯಾರಿಸುವವರ ಪೊಳ್ಳು ಹೇಳಿಕೆಗಳು,ಕಪ್ಪು ಮಯ್ ಬಣ್ಣದವರಲ್ಲಿ ಕೀಳರಿಮೆಯನ್ನು ಹುಟ್ಟಿಸಿ ತಮ್ಮ ಮಾಡುಗೆಗಳ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಹುಚ್ಚಾಟವಶ್ಟೆ.

ನಾವು ಇಂತಹ ಕೂಟಗಳು ಹರಡುತ್ತಿರುವ ತಪ್ಪು ತಿಳುವಳಿಕೆಯನ್ನು ಕೊನೆಗಾಣಿಸಿ ನಮಗೆ ಸಹಜವಾಗಿ ಬಂದಿರುವ ಬಣ್ಣವನ್ನು ಗವ್ರವಿಸಬೇಕಿದೆ. ಜನರಲ್ಲಿ ಈ ವಿಶಯವಾಗಿ ತಿಳುವಳಿಕೆಯನ್ನು ಮೂಡಿಸುತ್ತಿರುವ ’ಡಾರ‍್ಕ್ ಇಸ್ ಬ್ಯೂಟಿಪುಲ್’ ನಂತಹ ಹರಡೋಡಾಟಗಳು ಹೆಚ್ಚಬೇಕಿವೆ.

(ತಿಟ್ಟಸೆಲೆ: http://www.darkisbeautiful.in/)

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ: