ಕನ್ನಡ ವಿಕ್ಶನರಿಯನ್ನು ಬೆಳೆಸೋಣ ಬನ್ನಿ

– ಪ್ರಶಾಂತ ಸೊರಟೂರ.

images

’ವಿಕ್ಶನರಿ’ – ಇದು ಮಿಂಬಲೆಯಲ್ಲಿ ವಿಕಿಪೀಡಿಯಾ ಹೊಮ್ಮಿಸಿದ ತೆರೆದ ಪದನೆರಕೆ. ಜಗತ್ತಿನ ಹಲವು ನುಡಿಗಳಲ್ಲಿ ಈ ವಿ(ಡಿ)ಕ್ಶನರಿ ಮೂಡಿಬರುತ್ತಿದ್ದು ಕನ್ನಡವೂ ಅವುಗಳಲ್ಲಿ ಸೇರಿದೆ. ಕೆಲ ವರುಶಗಳ ಹಿಂದೆ ಕನ್ನಡ ವಿಕ್ಶನರಿಯಲ್ಲಿ ಇದ್ದ ಪದಗಳ ಸಂಕ್ಯೆ ಬೆರಳೆಣಿಕೆಯಶ್ಟು ಆದರೆ ಈಗ ಅಲ್ಲಿ  2,35,000 ಕ್ಕಿಂತ ಹೆಚ್ಚಿನ ಪದಗಳು ನೆಲೆಗೊಂಡಿದ್ದು, ಬಾರತದ ನುಡಿಗಳಲ್ಲಿ ಎರಡನೇ ಎಡೆಯಲ್ಲಿದೆ (ಮೊದಲನೆಯದು ತಮಿಳು)

ಈ ಪದನೆರಕೆ (ಕನ್ನಡ-ಇಂಗ್ಲಿಶ-ಕನ್ನಡ ಡಿಕ್ಶನರಿ) ಇನ್ನಿತರ ಪದನೆರಕೆಗಳಿಗೆ ಹೋಲಿಸಿದಾಗ ಹೆಚ್ಚಿನ ಕಸುವು ಹೊಂದಿದೆ ಅಂದರೆ ತಪ್ಪಾಗಲಾರದು. ಇಲ್ಲಿ ಪದಗಳ ಹುರುಳನ್ನು ನೋಡುವುದಶ್ಟೇ ಅಲ್ಲದೇ ಪದಗಳನ್ನೂ ಸೇರಿಸಬಹುದು ಮತ್ತು ತಿದ್ದುಪಡಿ ಮಾಡಬಹುದು ಹಾಗಾಗಿ ವಿಕ್ಶನರಿಯನ್ನು ’ತೆರೆದ’ ಪದನೆರಕೆ ಅಂತಾನೂ ಕರೆಯಲಾಗುತ್ತದೆ.

ವಿಕ್ಶನರಿಯಲ್ಲಿ ಪದ ಸೇರಿಸುವ ಬಗೆ, ಅದರ ಹರವು ಮುಂತಾದುವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

1) ಕನ್ನಡ ವಿಕ್ಶನರಿಯ ಮಿಂಬಲೆ ಕೊಂಡಿ:

kn.wiktionary.org

2) ಮೊದಲ ಹೆಜ್ಜೆ:

ಮೊದಲಿಗೆ ಕನ್ನಡ ವಿಕ್ಶನರಿಗೆ ಹೋಗಿ ಒಂದು ’ಒಳಬರುವು’ (login-ID) ಉಂಟುಮಾಡಿಕೊಳ್ಳಬೇಕು. ’ಒಳಬರುವು’ ಇಲ್ಲದಿದ್ದರೂ ವಿಕ್ಶನರಿ ಬಳಸಬಹುದು ಆದರೆ ಅದಿದ್ದರೆ ಪದಗಳ ಅಂಕಿ-ಅಂಶಗಳಲ್ಲಿ ಮತ್ತು ಪದಕಾಣಿಕೆ ನೀಡಿದವರ ಪಟ್ಟಿಯಲ್ಲಿ ಆ ಹೆಸರೂ ಕಾಣುವಂತಾಗಿ ವಿಕ್ಶನರಿಯಲ್ಲಾದ ಮಾರ‍್ಪಾಡುಗಳನ್ನು ಗುರುತಿಸಲು ಸುಳುವಾಗುತ್ತದೆ.

3) ಪದಗಳ ಹುಡುಕಾಟ:

ವಿಕ್ಶನರಿಯ ಬಲ ಮೇಲ್ತುದಿಯಲ್ಲಿರುವ ’ಹುಡುಕು’ ಗುಂಡಿಯಲ್ಲಿ ಪದ ಹಾಕಿ ಕೀಲಿಮಣೆಯಲ್ಲಿನ  ’ಸೇರು’ (enter) ಗುಂಡಿ ಒತ್ತಿದರೆ ಪದದ ಹುರುಳು ತೆರೆದುಕೊಳ್ಳುತ್ತದೆ. ಕನ್ನಡ ಇಲ್ಲವೇ ಇಂಗ್ಲಿಶ್ ಬರಿಗೆಗಳನ್ನು ಬಳಸಿ ಪದಗಳನ್ನು ಹುಡುಕಬಹುದು. ಬರಿಗೆಗಳ ಆಯ್ಕೆ ಮಾಡಲು ’ಹುಡುಕು’ ಗುಂಡಿಯ ಮೇಲಿರುವ ’transliteration’ ಎಂಬ ಆಯ್ಕೆ ಗುಂಡಿಯನ್ನು ಬಳಸಬೇಕು.

4) ಪದಗಳ ತಿದ್ದುಪಡಿ:

ವಿಕ್ಶನರಿಯಲ್ಲಿ ಕೊಡಲಾದ ಹುರುಳಿನಲ್ಲಿ ಏನಾದರೂ ತಪ್ಪು ಕಂಡುಬಂದರೆ ಇಲ್ಲವೇ ಅಲ್ಲಿರುವ ಪದಗಳ ಜೊತೆಗೆ ಇನ್ನಶ್ಟು ಪದಗಳನ್ನು ಸೇರಿಸಬೇಕೆಂದರೆ, ಪದದ ಮೇಲಗಡೆ ಕಾಣಿಸುವ ‘ಸಂಪಾದಿಸಿ’ ಆಯ್ಕೆ ಮಾಡಿಕೊಂಡು ಮಾರ್‍ಪಾಡು ಮಾಡಬೇಕು. ಸುಮ್ಮನೇ ಪದಗಳನ್ನು ತಿದ್ದುಪಡಿ ಮಾಡುವುದಾಗಲಿ ಇಲ್ಲವೇ ಆಗಲೇ ಅಲ್ಲಿರುವ ಪದಗಳನ್ನು ಅಳಿಸುವುದಾಗಲಿ ಮಾಡುವುದು ಬೇಡ. (ಇದು ಕನ್ನಡದ ಅಂದರೆ ’ನಮ್ಮ’ ಪದನೆರಕೆ ಅನ್ನುವುದನ್ನು ಎಲ್ಲರೂ ಮರೆಯದಿರೋಣ)

5) ಹೊಸ ಪದಗಳನ್ನು ಸೇರಿಸುವುದು:

ಪದಗಳನ್ನು ಹುಡುಕಿದಾಗ ಆ ಪದವು ವಿಕ್ಶನರಿಯಲ್ಲಿ ಇರದಿದ್ದರೆ ಅದು ’ಕೆಂಪು’ ಬಣ್ಣದಲ್ಲಿ ಕಾಣಿಸುತ್ತದೆ. ಅದನ್ನು ಒತ್ತಿದಾಗ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಈಗ ಕೆಳಗೆ ಕೊಟ್ಟಿರುವ ಹಿಂಬರಹ (code) ಬಳಸಿ ಹೊಸದಾಗಿ ತೆರೆದುಕೊಂಡ ಪುಟದಲ್ಲಿ ಪದಗಳನ್ನು ಸೇರಿಸಬೇಕು.

(ಯಾವ ಪದಗಳು ಈಗಾಗಲೇ ವಿಕ್ಶನರಿಯಲ್ಲಿ ಇಲ್ಲ ಅನ್ನುವುದು ಒಮ್ಮೆಲೇ ತಿಳಿಯಲು ಈಗಿರುವ ಏರ್‍ಪಾಟಿನಲ್ಲಿ ಆಗುವುದಿಲ್ಲ. ಇಲ್ಲದ ಪದಗಳನ್ನು ಮೇಲಿನಂತೆ ಒಂದೊಂದಾಗಿ ಹುಡುಕಬೇಕಾಗುತ್ತದೆ. ಇದು ತುಸು ತೊಡಕು/ಹಿನ್ನಡೆ ಅನ್ನಬಹುದು)   

5.1 ) ಕನ್ನಡ ಪದ ಸೇರಿಸಲು ಬಳಸಬೇಕಾದ ಹಿಂಬರಹ:

(ವಿಕ್ಶನರಿ ಹಿಂಬರಹ ಇನ್ನೂ ಇಡಿಯಾಗಿ ಹೊಸಬರಹಕ್ಕೆ ಅಣಿಗೊಂಡಿಲ್ಲ ಆದುದರಿಂದ ಇಲ್ಲಿ ಈಗಿರುವಂತೆ ಕೊಡಲಾಗಿದೆ)

==ಕನ್ನಡ==

===ಹೆಸರುಪದ===

”'{{BASEPAGENAME}}”’

# [[ಅರ್‍ತ]], [[ಅರ್‍ತ]]

#: ”’ಉದಾಹರಣೆಯಪದ”’ ಬಳಸುವ ಒಂದು ವಾಕ್ಯ

====ನುಡಿಮಾರ್‍ಪು====

* English: [[englishword]], [[:en:englishword]]

[[ವರ್ಗ:ನಾಮಪದಗಳು]]

[[ವರ್ಗ:ಕನ್ನಡದ ಬೇರಿನ ಪದಗಳು]]

5.2 ) ಇಂಗ್ಲಿಶ ಪದ ಸೇರಿಸಲು ಬಳಸಬೇಕಾದ ಹಿಂಬರಹ:      

==ಇಂಗ್ಲೀಶ್==

===ಹೆಸರುಪದ===

”'{{BASEPAGENAME}}”’

# [[ಅರ್‍ತ]], [[ಅರ್‍ತ]]

ಮೇಲಿನ ಹಿಂಬರಹದಲ್ಲಿ,

  • ”'{{BASEPAGENAME}}”’ ಇರುವಲ್ಲಿ ಸೇರಿಸಬೇಕಾದ ಹೊಸ ಪದ ತಂತಾನೇ ಈ ಹಿಂಬರಹದ ಬದಲಾಗಿ ಕಾಣಿಸುತ್ತದೆ.
  • ಸೇರಿಸುವ ಪದ ಹೆಸರುಪದ (noun), ಎಸಕಪದ (verb), ಪರಿಚೆಪದ (adjective) ಮುಂತಾದವುಗಳು ಆಗಿರಬಹುದು ಅದಕ್ಕೆ ತಕ್ಕಂತೆ ಮೇಲಿರುವ ಹಿಂಬರಹದಲ್ಲಿ ಮಾರ್‍ಪಾಡು ಮಾಡಿಕೊಳ್ಳಿ.
  • ಸೇರಿಸುವ ಪದ ಅಪ್ಪಟ ಕನ್ನಡ ಪದವಾಗಿದ್ದರೆ ಮೇಲೆ ತೋರಿಸಿರುವಂತೆ  [[ವರ್ಗ:ಕನ್ನಡದ ಬೇರಿನ ಪದಗಳು]] ಅಂತಾ ಪದದ ಕೊನೆಗೆ ಸೇರಿಸಿ. ಎರವಲು ಪದವಾಗಿದ್ದರೆ [[ವರ್ಗ:ಕನ್ನಡದ ಬೇರಿನ ಪದಗಳು]] ಸಾಲನ್ನು ಸೇರಿಸಬೇಡಿ.

6) ತಿಟ್ಟ (picture) ಸೇರಿಸುವುದು:

ವಿಕ್ಶನರಿಯಲ್ಲಿ ಪದಗಳ ಹುರುಳ ತಿಳಿಸಲು ನೆರವಾಗುವಂತೆ ತಿಟ್ಟಗಳನ್ನೂ ಸೇರಿಸಬಹುದು. ಇದಕ್ಕೆ ವಿಕಿಪೀಡಿಯಾದ ಇನ್ನೊಂದು ಮಿಂಪುಟ ’ವಿಕಿಮೀಡಿಯಾ ಕಾಮನ್ಸ್’ನಲ್ಲಿರುವ ತಿಟ್ಟಗಳ ಕೊಂಡಿಯನ್ನು ವಿಕ್ಶನರಿಯ ಪದಗಳ ಪುಟದಲ್ಲಿ ಹಾಕಬೇಕಾಗುತ್ತದೆ.

ಎತ್ತುಗೆಗೆ: banana ಅಂತಾ ಹುಡುಕಿದರೆ ಬಾಳೆಹಣ್ಣಿನ ತಿಟ್ಟಗಳು ಕಾಣಬಹುದು. ಆ ತಿಟ್ಟದ ಮೇಲೆ ಒತ್ತಿದಾಗ ಅದರ ಪಕ್ಕದಲ್ಲಿ ’Use this file’ ಅಂತಾ ಕಾಣಿಸುತ್ತದೆ. ಆ ಕೊಂಡಿಯನ್ನು ಎತ್ತಿಕೊಂಡು ವಿಕ್ಶನರಿಯಲ್ಲಿ ಪದ ಪುಟದಲ್ಲಿ ಹಾಕಿದರಾಯಿತು ಪದದ ಜೊತೆಗೆ ತಿಟ್ಟವೂ ಸೇರಿ ಪದನೆರಕೆಯ ಹೊಳಪು ಹೆಚ್ಚಿಸುತ್ತದೆ. ವಿಕಿಮೀಡಿಯಾ ಕಾಮನ್ಸ್ ನಲ್ಲಿ ನೀವೇ ಸೆರೆಹಿಡಿದ ತಿಟ್ಟಗಳನ್ನೂ ಕೂಡ ಸೇರಿಸಬಹುದು. ಸೇರಿಸಿದ ಮೇಲೆ ಆ ಕೊಂಡಿಯನ್ನು ಮೇಲಿನಂತೆ ವಿಕ್ಶನರಿಗೆ ತರಬಹುದು.

ಹೀಗೆ ತಿಟ್ಟ ಜೊತೆಗೂಡಿರುವ ಕೆಲವು ಪದಗಳು: ಮಂಡಕ್ಕಿ ಉಸುಳಿ, ನವಿಲು

7) ಮಾತು ಸೇರಿಸುವುದು:

ವಿಕ್ಶನರಿಯಲ್ಲಿ ಮಾತು/ಉಲಿಪು (audio) ಕೂಡ ಸೇರಿಸಬಹುದು. ತಿಟ್ಟಗಳಂತೆ ಮಾತಿನ ಕಡತಗಳೂ ’ವಿಕಿಮೀಡಿಯಾ  ಕಾಮನ್ಸ’ನಲ್ಲಿ ದೊರೆಯುತ್ತವೆ. ಅಲ್ಲಿ ಇಲ್ಲವಾದಲ್ಲಿ ನೀವೇ ಮಾತಿನ ಕಡತವನ್ನು ಉಂಟುಮಾಡಿ ಅಲ್ಲಿ ಹಾಕಬಹುದು. ಮಾತಿನ ಕಡತವು *.ogg ಬಗೆಯಲ್ಲಿ (format) ಇರಬೇಕಾಗುತ್ತದೆ.

ಹೀಗೆ ಮಾತಿನ ಬೆಸುಗೆ ಇರುವ ಒಂದು ಪದ: ಒತ್ತಡಕ

8) ಓಡುತಿಟ್ಟ ಸೇರಿಸುವುದು:

ಮೇಲಿನಂತೆ ’ವಿಕಿಮೀಡಿಯಾ ಕಾಮನ್ಸ್’ನಲ್ಲಿ  ಓಡುತಿಟ್ಟವನ್ನು (video) ಹುಡುಕಬಹುದು ಇಲ್ಲವೇ ನೀವೇ ಅಲ್ಲಿ ಸೇರಿಸಬಹುದು (video *.ogv ಬಗೆಯಲ್ಲಿ ಇರಬೇಕಾಗುತ್ತದೆ)

ಓಡುತಿಟ್ಟವಿರುವ ಕೆಲವು ಪದಗಳು: ಬಿಣಿಗೆ, ಮುಟಗಿ

ಅಲೆಯುಲಿ (ಮೊಬಯ್ಲ್) ಬಳಸಿ ತಿಟ್ಟ, ಓಡುತಿಟ್ಟ, ಮಾತಿನ ಕಡತಗಳನ್ನು ಮಾಡಿಕೊಂಡು ಆಮೇಲೆ ಕಡತ ಬಗೆಯನ್ನು*.ogg ಇಲ್ಲವೇ *.ogv ಕಡತಗಳಾಗಿ ಮಾರ‍್ಪಡಿಸಬಹುದು. ಹೀಗೆ ಮಾರ್‍ಪಾಟು ಮಾಡಲು ದೊರೆಯುವ ಮಿನ್ನವಿರುಗಳು (software) ಮತ್ತು ಇನ್ನಶ್ಟು ವಿಶಯಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ಕೊಂಡಿಗೆ ಹೋಗಬಹುದು.

Creation_and_usage_of_media_files

ಕನ್ನಡವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ವಿಕ್ಶನರಿಯಂತಹ ಪದನೆರಕೆಗಳನ್ನು ಇಂದು ಕಟ್ಟಬೇಕಿದೆ. ಕನ್ನಡ ವಿಕ್ಶನರಿ ಇಂದು ಹೆಮ್ಮರವಾಗಿ ಬೆಳಯಲು ಹಲವು ಕನ್ನಡಿಗರು ಅದರಲ್ಲೂ ಮುಕ್ಯವಾಗಿ ಬನವಾಸಿ ಬಳಗ ಎಡೆಬಿಡದೇ ತೊಡಗಿಕೊಂಡಿದ್ದು ಕಾರಣವಾಗಿದೆ.

ಬನ್ನಿ, ರಾ.ಸು.ಮೇಟಿಕುರ್‍ಕೆ, ವಿವೇಕ ಶಂಕರ್‍, ಸಂದೀಪ ಕೆ.ಎನ್. ಮುಂತಾದವರು ಮಾಡುತ್ತಿರುವ ಕನ್ನಡದ ಈ ಕೆಲಸದಲ್ಲಿ ನಾವೂ ಕಯ್ ಜೋಡಿಸೋಣ.

(ತಿಟ್ಟಸೆಲೆ: ವಿಕಿಪೀಡಿಯಾ)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , ,

3 replies

  1. ಓಡುತಿಟ್ಟ sariyAda ಶಬ್ದವಲ್ಲ. videoದಲ್ಲಿ ಚಿತ್ರಗಳು ಓಡುವುದಲ್ಲ, ನಡೆಯುವುದು. ಹಾಗಾಗಿ ‘ನಡೆತಿಟ್ಟ’.

    • ಇದೆಲ್ಲ ಎತ್ತಿ ತೋರಿಸುವಂತಹ ತಪ್ಪಾಗಿಬಿಡುವುದಿಲ್ಲ… ‘ಓಡುತಿಟ್ಟ’ ಚೊಕ್ಕವಾಗಿ ಚೆನ್ನಾಗಿ ಇದೆ. ಚಿತ್ರಗಳು ನಡೆಯುತ್ತವೆ ಅಂತಲೂ ಹೇಗೆ ಹೇಳುವಿರಿ? ‘ನಡೆ’ ಅನ್ನೋದರ ಬಳಕೆ ‘ಓಡು’ ಅನ್ನುವುದರ ಬಳಕೆಗೆ ಎಶ್ಟು ಬೇರೆ ಆಗುತ್ತೆ? ಪದ ಸುಳುವಾಗಿ ಚಿತ್ರಣವನ್ನು ನೀಡಿ, ಉಳಿಯಲು ಸಲೀಸಾಗಿ ಇದ್ದರೆ ಸರಿ , ಅಲ್ಲವೇ?

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s