ಆಡಳಿತದಲ್ಲಿ ಕನ್ನಡ: ಅರಸಾಳ್ವಿಕೆಗಳು ಕೊಟ್ಟ ಹಕ್ಕು ಮಂದಿಯಾಳ್ವಿಕೆ ಕಸಿಯಿತು

ರಗುನಂದನ್.

Pulikesin_II,_the_Chalukhaya,_receives_envoys_from_Persia,

ಕನ್ನಡ ನಾಡಿನ ಹಿನ್ನಡವಳಿಯು ಸುಮಾರು 2000 ವರುಶಗಳಶ್ಟು ಚಾಚಿದೆ. ಈ ಗಡುವಿನಲ್ಲಿ ಬೇಕಾದಶ್ಟು ಅರಸು ಮನೆತನಗಳು, ಸಾಮ್ರಾಜ್ಯಗಳು ಕನ್ನಡ ನಾಡಿನಲ್ಲಿ ಆಳ್ವಿಕೆ ನಡೆಸಿವೆ. ಈ ರಾಜ್ಯಗಳಲ್ಲಿ ಹೆಚ್ಚೆಣಿಕೆಯ ಮಂದಿ ಕನ್ನಡಿಗರೇ ಆಗಿದ್ದರು. ಈ ಎಲ್ಲಾ ಆಳ್ವಿಕೆಗಳು ಒಂದು ಬೇರೆಯದೇ ಆದ ದೇಶಗಳಾಗಿದ್ದವು ಎಂಬುದನ್ನು ನೆನಪಿಡಬೇಕಾದ ವಿಚಾರ. ಈ ಮನೆತನ/ಸಾಮ್ರಾಜ್ಯಗಳ ಅದಿಕ್ರುತ ಬಾಶೆಯ ಕಡೆ ಗಮನ ಹರಿಸೋಣ.

ಕೆಳಗಿನ ಪಟ್ಟಿ ನೋಡಿದರೆ ಈ ಎಲ್ಲಾ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ/ಅದಿಕ್ರುತ ಬಾಶೆಯಾಗಿ ಬಳಸಿರುವುದನ್ನು ಕಾಣಬಹುದು. ಬಳಿಕ 1950ರ ವರೆಗೂ ಇದು ಮುಂದುವರಿಯಿತು (ಬಹಮನಿ ಸುಲ್ತಾನರಡಿಯಲ್ಲಿ ಕನ್ನಡಕ್ಕೆ ಅದಿಕ್ರುತ ಸ್ತಾನ ಇರಲಿಲ್ಲ. ಕೆಲವು ಕಡೆಗಳಲ್ಲಿ ಆಡಳಿತಕ್ಕೆ ಬಳಸುತ್ತಿದ್ದರೂ ಮರಾಟಿಯೇ ಅದಿಕ್ರುತವಾಗಿತ್ತು). 1947ರಲ್ಲಿ ಇಂಡಿಯಾವನ್ನು ಸೇರಿದ ಮೇಲೆ ಕನ್ನಡ ನುಡಿ 1850 ವರುಶಗಳ ಬಳಿಕ ಒಂದು ದೇಶ/ಒಕ್ಕೂಟದ ಅದಿಕ್ರುತ ಬಾಶೆ ಎಂಬ ಪಟ್ಟವನ್ನು ಕಳೆದುಕೊಂಡಿತು. ಸೋಜಿಗದ ವಿಶಯವೇನೆಂದರೆ ಅರಸನಾಳ್ವಿಕೆಯಲ್ಲಿ ಇದ್ದರೂ ಕನ್ನಡ ಅದಿಕ್ರುತ ಬಾಶೆಯಾಗಿತ್ತು ಆದರೆ ಈಗ ಮಂದಿಯಾಳ್ವಿಕೆ ಇದ್ದರೂ ಕನ್ನಡಕ್ಕೆ ಒಕ್ಕೂಟದ ಅದಿಕ್ರುತ ಬಾಶೆಯ ಸ್ತಾನ ದೊರಕಿಲ್ಲ. ರಾಜ್ಯೋತ್ಸವದ ಈ ಹೊತ್ತಿನಲ್ಲಿ ಕನ್ನಡ ಸೇರಿದಂತೆ ಎಲ್ಲಾ ಎಂಟನೇ ಪರಿಚ್ಚೇದದ ನುಡಿಗಳು ಇಂಡಿಯಾದ ಅದಿಕ್ರುತ ಬಾಶೆಗಳಾಗಲಿ ಎಂದು ಬಯಸೋಣ ಮತ್ತು ಒತ್ತಾಯಿಸೋಣ.

ಹೆಚ್ಚೆಣಿಕೆಯ ಕನ್ನಡಿಗರು ಇದ್ದ ಅರಸು ಮನೆತನ/ ಸಾಮ್ರಾಜ್ಯ/ದೇಶ/ಒಕ್ಕೂಟ

ಆಳಿದ ಕಾಲ

ಒಟ್ಟು ವರುಶಗಳು

ಅದಿಕ್ರುತ ಬಾಶೆ

ಆಳಿದ ಪ್ರದೇಶ

ಆಳ್ವಿಕೆಯ ಬಗೆ

ಶಾತವಾಹನ

230 BC – 220 AD

450

ಪ್ರಾಕ್ರುತ

ಇಂದಿನ ಕರ‍್ನಾಟಕ, ಆಂದ್ರ

ಅರಸಾಳ್ವಿಕೆ

ಬನವಾಸಿಯ ಕದಂಬರು

325 – 540

215

ಕನ್ನಡ, ಸಂಸ್ಕ್ರುತ

ಇಂದಿನ ಉತ್ತರ ಕರ‍್ನಾಟಕ ಮತ್ತು ಕಾರವಾರ

ಅರಸಾಳ್ವಿಕೆ

ತಲಕಾಡಿನ ಗಂಗರು

325 – 999

674

ಕನ್ನಡ, ಸಂಸ್ಕ್ರುತ

ದಕ್ಶಿಣ ಕರ‍್ನಾಟಕ

ಅರಸಾಳ್ವಿಕೆ

ಬದಾಮಿ ಚಾಲುಕ್ಯರು

543 – 753

210

ಕನ್ನಡ, ಸಂಸ್ಕ್ರುತ

ಇಂದಿನ ಕರ‍್ನಾಟಕ, ಆಂದ್ರ, ಮಹಾರಾಶ್ಟ್ರ, ಗುಜರಾತ್

ಅರಸಾಳ್ವಿಕೆ

ಮಲಕೇಡದ ರಾಶ್ಟ್ರಕೂಟರು

753 – 973

220

ಕನ್ನಡ, ಸಂಸ್ಕ್ರುತ

ಇಂದಿನ ಕರ‍್ನಾಟಕ, ಆಂದ್ರ, ಮಹಾರಾಶ್ಟ್ರ, ಗುಜರಾತ್, ಮದ್ಯ ಪ್ರದೇಶ

ಅರಸಾಳ್ವಿಕೆ

ಕಲ್ಯಾಣದ ಚಾಲುಕ್ಯರು

973 – 1198

271

ಕನ್ನಡ

ಇಂದಿನ ಕರ‍್ನಾಟಕ, ಆಂದ್ರ

ಅರಸಾಳ್ವಿಕೆ

ಹೊಯ್ಸಳರು

1000 – 1346

346

ಕನ್ನಡ

ಕರ‍್ನಾಟಕದ ಕೆಲವು ಪ್ರದೇಶಗಳು

ಅರಸಾಳ್ವಿಕೆ

ಕರ್‍ಣಾಟ ಸಾಮ್ರಾಜ್ಯ
(ವಿಜಯನಗರ)

1336 – 1565

229

ಕನ್ನಡ, ತೆಲುಗು

ಇಂದಿನ ದಕ್ಶಿಣ ಬಾರತ

ಅರಸಾಳ್ವಿಕೆ

ಬಹಮನಿ ಸುಲ್ತಾನರು

1347 – 1527

180

ಪಾರ‍್ಸಿ, ಮರಾಟಿ

ಇಂದಿನ ಉತ್ತರ ಕರ‍್ನಾಟಕ, ಮಹಾರಾಶ್ಟ್ರ

ಅರಸಾಳ್ವಿಕೆ

ಬಿಜಾಪುರದ ಸುಲ್ತಾನರು

1490 – 1686

196

ದಕ್ಕನಿ, ಕನ್ನಡ, ಮರಾಟಿ

ಇಂದಿನ ಉತ್ತರ ಕರ‍್ನಾಟಕ, ಮಹಾರಾಶ್ಟ್ರ

ಅರಸಾಳ್ವಿಕೆ

ಕೆಳದಿ ನಾಯಕರು

1500 – 1763

263

ಕನ್ನಡ

ದಕ್ಶಿಣ ಕರ‍್ನಾಟಕ,

ಅರಸಾಳ್ವಿಕೆ

ಮಯ್ಸೂರು ಒಡೆಯರುಗಳು

1399 – 1950

601

ಕನ್ನಡ

ಹಳೇ ಮಯ್ಸೂರು

ಅರಸಾಳ್ವಿಕೆ

ಇಂಡಿಯಾ

1947 – ಇಂದಿನವರೆಗೆ

66

ಹಿಂದಿ, ಇಂಗ್ಲಿಶ್

ಕರ‍್ನಾಟಕ

ಮಂದಿಯಾಳ್ವಿಕೆ

(ಚಿತ್ರ ಸೆಲೆ:en.wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: