ಹಲತನವು ಹಿರಿದು

ರತೀಶ ರತ್ನಾಕರ

india-speaks-united-by-the-diversity-L-16W_kt

ಬಾಗಿಲಿಗೆ ಬಂದಿರುವ ಬೇಡುಗನೆ ಕೇಳು
ನನಗಾಗಿ ನೀ ಏನ್ ಮಾಡುವೆ ಹೇಳು?
ನಾಲೆಯ ನೀರಿಗೆ ನೆಲೆಯಾಗ ಬೇಕು
ನಮ್ಮದೇ ನೆಲವನ್ನು ಉಳಿಸಿದರೆ ಸಾಕು|

ಗಡಿಯನ್ನು ಬಿಡಿಯಾಗಿ ಮಾರದಿರು ನೀನು
ನುಡಿಯನ್ನು ಕಡೆಮಾಡೋ ತುಳಿಲು ಸಾಕಿನ್ನು
ಹಿಗ್ಗಿರುವ ವಲಸೆಗೆ ಕಡಿವಾಣವಿರಲಿ
ಕರುನಾಡ ಕೆಲಸದಲಿ ಕನ್ನಡಿಗರಿರಲಿ|

ಕಣಿವೆಯ ಕಾಳಗ ನನ ಒಲೆಯ ಉರಿಸೀತೆ?
ತಳಿ ಬಳಿಯು ಮೆರೆದೊಡೇ ನನ ಹಸಿವು ನೀಗೀತೆ?
ಬಳಿಯದಿರು ಬಣ್ಣವ ರಾಶ್ಟ್ರ ಒಂದೆಂದು
ಪೊರೆ ಎಲ್ಲ ಬೇರ‍್ಮೆ, ಹಲತನವು ಹಿರಿದು|

ಕಾದಿಯನು ಹಾಕಿ ಕಯ್ ಮುಗಿದು ನಿಂತಿರುವೆ
ನಾ ಕೇಳಿದ್ದು ಕೊಟ್ಟರೆ ನಿನ್ನನ್ನೆ ಆರಿಸುವೆ
ನಂಬಿಕೆಯ ಮಾತುಗಳು ಬಹಳ ಹಳಸಾಯ್ತು
ನಾಡು ನುಡಿ ನೋಡದಿರೆ ನಿನಗೇನೇ ಕುತ್ತು|

(ಚಿತ್ರ: en.paperblog.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: