ಬಯವಾಗುತಿದೆ..

ದೇವೇಂದ್ರ ಅಬ್ಬಿಗೇರಿ

shimla

ಆಗಲೆ ಚಳಿ ಗಾಳಿ ಬಿಸಲು ಶುರುವಾಗಿದೆ,
ಸುತ್ತ ಮುತ್ತ ಎನೆ ಮುಟ್ಟಿದರು ಬಲು ತಂಪು..
ಶಿಮ್ಲಾದ ಅಂಗಳಕೆ ಕೊರೆಯುವ ಚಳಿಗಾಲ ಕಾಲಿಡುತಿದೆ
ನನಗ್ಯಾಕೊ ಬಯವಾಗುತಿದೆ..

ಇನ್ನು ಕೆಲವೆ ದಿನಗಳಲಿ ಮಂಜು ಬಿಳಲಿದೆ,
ಮನೆಯ ಸುತ್ತ ಹಿಮದ ಬೇಲಿ ಬೆಳೆಯಲಿದೆ..
ಹೊರಬರಲಾರದೆ ಬಂದಿಯಾಗುವೆ,
ಆ ಒಂಟಿತನ ನೆನೆದು ಬಯವಾಗುತಿದೆ…

ಈ ಒಂಟಿತನದಲಿ ನಿನ್ನ ನೆನಪು ಮಂಜಿನ ಹಾಗೆ
ಸದ್ದಿಲದೆ ಸುರಿಯುತದೆ,
ಅರಿವಿಲ್ಲದೆ ಕೊರೆಯುತದೆ..
ಆ ಕೊರೆತದ ನೋವು ನೆನೆದು ಬಯವಾಗುತಿದೆ..

ಅಳುಕುತಲೆ ಅಕ್ಕರೆಯಿಂದ ಸಾಕಿದ ಪ್ರೀತಿಯನ್ನು ನಿವೇದಿಸಿದ ಕ್ಶಣ,
ನನ್ನ ವಿಸ್ಮಯ ಕನಸಿನ ಲೋಕದಿಂದ ನನ್ನನ್ನು ನೀನು ತೊರೆದು ಹೋದ ಕ್ಶಣ,
ನಿನ್ನೊಂದಿಗೆ ಮೊದಲಿನ ಬಾವನೆಗಳೊಂದಿಗೆ ಇನ್ನೆಂದು ಮಾತಲಾಡಲಾರೆ
ಎಂದು ನೆನೆದಾಗ
ದಟ್ಟ ನಿರ್‍ಜನ ಕಾನನದಲಿ ತಡೆಯಿಲ್ಲದೆ ಸುರಿಯುತಿರುವ ಮಂಜುವಿನ
ನಡುವೆ ನಿಂತ ಬಾಸ…
ಕಳೆದು ಹೋಗುವ ಬಯವಾಗುತಿದೆ..

(ಚಿತ್ರ: travel.siliconindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: