ಜಗತ್ತನ್ನು ಇನ್ನೂ ಹತ್ತಿರವಾಗಿಸಲಿರುವ ’ಬಿಟ್-ಕಾಯಿನ್’

ವಿವೇಕ್ ಶಂಕರ್.

Bitcoin-coins

ಮಿಂಬಲೆಯು (internet) ಇತ್ತೀಚೆಗೆ ನಮ್ಮ ಬದುಕಿನೊಂದಿಗೆ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿದೆ. ಮಿಂಬಲೆಯ ಮೂಲಕ ವಸ್ತುಗಳನ್ನು ಕೊಂಡುಕೊಳ್ಳಬಹುದೆಂದು ನಮಗೆ ಗೊತ್ತು, ಆದರೆ ಬೇರೆ ನಾಡುಗಳಿಂದ ವಸ್ತುಗಳನ್ನು ಕೊಳ್ಳುವಾಗ ಒಟ್ಟು ಬೆಲೆಯಲ್ಲಿ ವಸ್ತುವಿನ ಬೆಲೆ ಜೊತೆ 2-3% ರಶ್ಟು ಕಟ್ಟುಗೆ (fee) ಕೂಡ ಸೇರಿರುತ್ತದೆ ಅಂತಾ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇಂತ ಅಡ್ಡಿಗಳು ಇಲ್ಲದಿದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ಯಾವುದೇ ನಾಡಿನ ವಸ್ತುಗಳನ್ನು ಕೊಳ್ಳುವುದು ಸುಳುವಾಗುವುದು ಅಲ್ವೇ?

ಹವ್ದು, ಇಂತ ಏರ‍್ಪಾಡು ಈಗ ಬೆಳೆಯುತ್ತಿದೆ, ಇದೇ ಬಿಟ್-ಕಾಯಿನ್ (Bitcoin). ಇದನ್ನು ಮೊದಲು ಉಂಟುಮಾಡಿದ್ದು ಸತೋಶಿ ನಗಮೊಟೊ (Satoshi Nakamoto). ಇದು ಯಾವುದೇ ನಾಡಿನ ಹಣಗುರ‍್ತು ಅಲ್ಲ ಆದರೆ ಮಿಂಬಲೆಯಲ್ಲಿ ಬಳಕೆದಾರರ, ಹರದರ(traders) ನಡುವೆ ಬಳಕೆಯಾಗುವ ಎಣಿ ಹಣಗುರ‍್ತು (digital currency). ಈ ಬಿಟ್-ಕಾಯಿನ್ ಎಲ್ಲಿ ಸಿಗುತ್ತದೆ ? ಇದರ ಒಳಿತುಗಳು, ಕೊರತೆಗಳೇನು? ಇವುಗಳ ಬಗ್ಗೆ ಮುಂದೆ ತಿಳಿದುಕೊಳ್ಳೋಣ.

ಬಿಟ್-ಕಾಯಿನ್, ಅಂದರೆ ಮಿಂಬಲೆಯ ಹಣ (digital currency). ಇದು ಯಾವ ನಾಡಿನ ಆಳ್ವಿಕೆಯ ಹಿಡಿತಕ್ಕೆ ಒಳಗಾಗಿರುವುದಿಲ್ಲ. ಈ ಹಣವು ಯಾವ ಹಣಮನೆಯ (bank) ಮೂಲಕ ಇಲ್ಲವೇ ತೀರುವಳಿಯ ಮನೆಯ (clearing house) ಮೂಲಕ ಹೋಗುವುದಿಲ್ಲ. ಮಿಂಬಲೆಯಲ್ಲಿ ಬಳಕೆದಾರರ ನಡುವೆ ಬಳೆಕೆಯಾಗುವ ಹಣ, ತುಂಬಾ ಸುಳು ಹಾಗೂ ಒಳಿತು. ಹಾಗಾದರೆ ಇದನ್ನು ಪಡೆಯುವುದು ಹೇಗೆ? ಬಿಟ್-ಕಾಯಿನ್ ಮಯ್ನರ್ (Bit-coin miner) ಎಂಬ ಎಣ್ಣುಕದ ಬಳಕ (computer application) ಮೂಲಕ ಪಡೆಯಬಹುದು.

ಬಿಟ್-ಕಾಯಿನ್ ಎಕ್ಸ್-ಚೇಂಜ್ (Bitcoin exchange)ನಲ್ಲಿ ಕೂಡ ಈ ಹಣ ದೊರೆಯುತ್ತದೆ. ಇದರಿಂದ ನಾವು ವಸ್ತುಗಳನ್ನು ಇಲ್ಲವೇ ಬದಗುಗಳನ್ನು (services) ಪಡೆಯಬಹುದು. ವಸ್ತುಗಳು ಇಲ್ಲವೇ ಬದಗುಗಳ ಮೇಲೆ ಮುಂಚೆ ಹೇಳಿದ ಹಾಗೆ ಬೀಳುವ ಹೆಚ್ಚುವರಿ 2-3% ರಶ್ಟು ಕಟ್ಟುಗೆ (fee) ತೆರಬೇಕಾಗಿಲ್ಲ.

ಆದರೆ ಈ ಒಳಿತುಗಳ ಜೊತೆಗೆ ಒಂದು ಕೊರತೆ ಕೂಡ ಇದೆ. ಅದೇನೆಂದರೆ ಬಿಟ್-ಕಾಯಿನ್‍ಗಳು, ಅದನ್ನು ಉಂಟುಮಾಡಿರುವ ಎಣ್ಣುಕದಲ್ಲಿ ಸಿಗುತ್ತದೆ ಹೊರತು ಬೇರೆ ಎಣ್ಣುಕಗಳಲ್ಲಿ ಬಳಕೆ ಮಾಡುವುದಕ್ಕೆ ಆಗುವುದಿಲ್ಲ. ಒಮ್ಮೆ ಎಣ್ಣುಕ ಇಲ್ಲವೇ ಗಟ್ಟಿನೆಪ್ಪು(hard drive) ಕೆಟ್ಟು ಹೋದರೆ ಈ ಬಿಟ್-ಕಾಯಿನ್‍ಗಳನ್ನು ಹಿಂಪಡೆಯುವುದಕ್ಕೆ ಆಗುವುದಿಲ್ಲ.

ಈ ಹೊತ್ತಿಗೆ ಅಮೇರಿಕಾದಲ್ಲಿ ಬಿಟ್-ಕಾಯಿನ್‍ಗಳು ಹೆಚ್ಚಾಗಿ ಬಳಕೆಯಾಗುತ್ತಿದ್ದು ಇದರ ಜತೆಗೆ ಕೆನಡಾ ನಾಡಿನ ಪೊಳಲು, ವಾಂಕೂವರಿನಲಿ (Vancouver) ಸುಮಾರು ಇಪ್ಪತ್ತು ಹರದುಗಳಲ್ಲಿ (businesses) ಬಿಟ್-ಕಾಯಿನ್ ಬಳಕೆಯಾಗುತ್ತಿದೆ. ಅದೇ ಪೊಳಲಿನಲ್ಲಿ ಇದರ ಹಣಗೂಡು (ATM) ಕೂಡ ಇದೆ. ಸಯ್ಪ್ರಸ್ (Cyprus) ನಾಡಿನ ನಿಕೋಸಿಯಾ ಕಲಿಕೆವೀಡಿನಲ್ಲಿ (Nicosio University) ಕೂಡ ಈ ಬಿಟ್-ಕಾಯಿನ್‍ಗಳ ಬಳಕೆಯನ್ನು ಒಪ್ಪಿದ್ದಾರೆ.

ಒಟ್ಟಿನಲ್ಲಿ ಮಿಂಬಲೆಯ ಬಳಕೆಯಿಂದ ಜಗತ್ತಿನ ಯಾವುದೇ ಮೂಲೆಯ ನಾಡಿನಿಂದ ನಾವು ವಸ್ತು ಇಲ್ಲವೇ ಬದಗನ್ನು ಪಡೆಯುತ್ತಿರುವಾಗ ಇಂತ ಏರ‍್ಪಾಟುಗಳಿಂದ ಅದು ಇನ್ನೂ ಸುಳುವಾಗುತ್ತದೆ. ಬಿಟ್-ಕಾಯಿನ್ ಮುಂದಿನ ದಿನಗಳಲ್ಲಿ ಜಗದೆಲ್ಲೆಡೆಯ ಮಂದಿಯನ್ನು ಇನ್ನಶ್ಟು ಹತ್ತಿರವಾಗಿಸಲಿದೆ.

(ಒಸಗೆಯ ಸೆಲೆ: businessworld)
(ತಿಟ್ಟದ ಸೆಲೆ: en.wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 17/01/2014

    […] ಹಿಂದಿನ ಬರಹದಲ್ಲಿ ಮಿಂಬಲೆ ಹಣಗುರ‍್ತಿನ ಬಗ್ಗೆ ಬರೆದಿದ್ದೆ. ಇತ್ತೀಚೆಗೆ ಮಿಂಬಲೆಯ ಮೂಲಕ ಕೂಡ ಕೊಳ್ಳುವಿಕೆ ಹೆಚ್ಚಾಗಿರುವುದು ನಮಗೆ ಗೊತ್ತಿರುವಂತದು. ಮಿನ್ಕೊಳುಕೊಡೆ (e-commerce)ಯ ಮುಂಚೂಣಿ ಕೂಟವಾದ ಈ-ಬೇ (e-bay) ತಮ್ಮದೇ ಮಿಂಹಣವನ್ನು (e-money) ಬಿಡುಗಡೆ ಮಾಡಿರುವ ಸುದ್ದಿ ಹೊರಬಂದಿದೆ. ಜೊತೆಗೆ ಈ ಕುರಿತು ಹಕ್ಕೋಲೆಯನ್ನೂ (patent) ಕೂಡ ಸಲ್ಲಿಸಿದೆಯಂತೆ. ಈ ಹಕ್ಕೋಲೆಯನ್ನು ಈ-ಬೇ ಜೂನ್ 2012 ನಲ್ಲಿ ಸಲ್ಲಿಸಿದ್ದು ಡಿಸೆಂಬರ್ 19 2013 ರಂದು ಸುದ್ದಿಯಾಗಿ ಬಯಲಾಯಿತು. […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *