ಸುಗ್ಗಿ ಹಬ್ಬದ ಸಿಹಿ ಹಾರಯ್ಕೆಗಳು!

– ರತೀಶ ರತ್ನಾಕರ.

suggi_habba

ಉತ್ತು ಬಿತ್ತಿದ ಬತ್ತ ತೆನೆ ಹೊತ್ತು ನಿಂತಾಯ್ತು
ಕುಯ್ಯಲು ಒಕ್ಕಲು ಕನಜವು ತುಂಬಾಯ್ತು.

ದುಡಿದ ಕಯ್ಗಳಿಗೀಗ ಸಡಗರದ ಹೊತ್ತು
ಹೊಸಬೆಳಕ ಹರಿಸುತ್ತ ಸುಗ್ಗಿಯೂ ಬಂತು.

ನಲಿವುಗಳ ನೆನೆದು ನೋವುಗಳ ಮರೆತು
ಎಳ್ಳು ಬೆಲ್ಲವ ಬೀರಿ ಬಾಳೋಣ ಬೆರೆತು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: